11 ಲಕ್ಷ ರೈಲ್ವೆ ಉದ್ಯೋಗಿಗಳಿಗೆ 1,866 ಕೋಟಿ ರೂ. ದೀಪಾವಳಿ ಗಿಫ್ಟ್​ ಕೊಡ್ಡ ಕೇಂದ್ರ ಸರ್ಕಾರ| railway

railway
Published on

ನವದೆಹಲಿ; ಹಬ್ಬದ ಋತುವಿಗೆ ಮುಂಚಿತವಾಗಿ ಕೇಂದ್ರ ಸರ್ಕಾರ ರೈಲ್ವೆ ನೌಕರರಿಗೆ ಮಹತ್ವದ ಉಡುಗೊರೆಯನ್ನು ನೀಡಿದೆ. ಇಂದು (ಸೆ.24) ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ರೈಲ್ವೆ ಉದ್ಯೋಗಿಗಳಿಗೆ 1,866 ಕೋಟಿ ರೂ.ಗಳ ಬೋನಸ್ (ಪಿಎಲ್‌ಬಿ) ನೀಡಲು ಅನುಮೋದನೆ ನೀಡಲಾಗಿದ್ದು, 10.90 ಲಕ್ಷ ಕಾರ್ಮಿಕರು ಅವರ ಉತ್ತಮ ಕಾರ್ಯಕ್ಷಮತೆಯ ಆಧಾರದ ಮೇಲೆ ಇದರ ಪ್ರಯೋಜನವನ್ನು ಪಡೆಯಲಿದ್ದಾರೆ.

ಈ ನಿರ್ಧಾರವು ಸುಮಾರು 1.15 ಮಿಲಿಯನ್ ಉದ್ಯೋಗಿಗಳಿಗೆ ಪ್ರಯೋಜನವನ್ನು ನೀಡಲಿದೆಯಂತೆ. ಈ ಯೋಜನೆಯಲ್ಲಿ ಬೋನಸ್ ಮೊತ್ತವನ್ನು ನೇರವಾಗಿ ನೌಕರರ ಖಾತೆಗಳಿಗೆ ಜಮಾ ಮಾಡಲಾಗುತ್ತದೆ. ಟ್ರ್ಯಾಕ್ ನಿರ್ವಹಣೆದಾರರು, ಲೋಕೋ ಪೈಲಟ್‌ಗಳು, ರೈಲು ವ್ಯವಸ್ಥಾಪಕರು, ಸ್ಟೇಷನ್ ಮಾಸ್ಟರ್‌ಗಳು, ಮೇಲ್ವಿಚಾರಕರು, ತಂತ್ರಜ್ಞರು, ತಂತ್ರಜ್ಞ ಸಹಾಯಕರು, ಪಾಯಿಂಟ್‌ಮೆನ್‌ಗಳು ಇತರ ಗ್ರೂಪ್ ಸಿ ಸಿಬ್ಬಂದಿ ಸೇರಿದಂತೆ ವಿವಿಧ ವರ್ಗದ ರೈಲ್ವೆ ಉದ್ಯೋಗಿಗಳಿಗೆ ಈ ಬೋನಸ್ ಪಾವತಿಸಲಾಗುವುದು. ಇನ್ನೂ ಈ ಪಾವತಿಗಳು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು ಎಂದು ಹೇಳಲಾಗಿದೆ.

ಪ್ರತಿ ವರ್ಷ ದುರ್ಗಾ ಪೂಜೆ ಹಾಗೂ ದಸರಾ ರಜಾ ದಿನಗಳಿಗೆ ಮುಂಚಿತವಾಗಿ, ಅರ್ಹ ರೈಲ್ವೆ ಉದ್ಯೋಗಿಗಳು ಪಿಎಲ್‌ಬಿ ಪಾವತಿಯನ್ನು ಪಡೆಯುತ್ತಾರೆ. ಕಳೆದ ವರ್ಷ ಮೋದಿ ಸರ್ಕಾರವು ರೈಲ್ವೆ ಉದ್ಯೋಗಿಗಳಿಗೆ 2,029 ಕೋಟಿ ರೂ.ಗಳ ಬೋನಸ್ ಅನ್ನು ಅನುಮೋದಿಸಿತ್ತು. ಇದರಿಂದ 11,72,240 ಕಾರ್ಮಿಕರಿಗೆ ಪ್ರಯೋಜನ ಪಡೆದಿದ್ದರು. ಇದೀಗ ರೈಲ್ವೇ ಉದ್ಯೋಗಿಗಳ ಹಿತದೃಷ್ಟಿಯಿಂದ ಈ ಬಾರಿಯೂ ಸಹ ಸಿಬ್ಬಂದಿಗೆ ಬೋನಸ್​ ನೀಡಲು ಕೇಂದ್ರ ಆದೇಶಿಸಿದೆ.

(ಏಜೆನ್ಸೀಸ್)

ರೈಲ್ವೆಯ ಕಾರ್ಯಕ್ಷಮತೆಯನ್ನು ಸುಧಾರಿಸಲು ಕೆಲಸ ಮಾಡಲು ರೈಲ್ವೆ ನೌಕರರನ್ನು ಪ್ರೇರೇಪಿಸಲು ಪಿಎಲ್‌ಬಿ ಪಾವತಿಯು ಪ್ರೋತ್ಸಾಹಕವಾಗಿ ಕಾರ್ಯನಿರ್ವಹಿಸುತ್ತದೆ ಎಂದು ರೈಲ್ವೆ ಸಚಿವಾಲಯ ತಿಳಿಸಿದೆ. 2024-25ನೇ ವರ್ಷದಲ್ಲಿ ರೈಲ್ವೆಯ ಕಾರ್ಯಕ್ಷಮತೆ ತುಂಬಾ ಉತ್ತಮವಾಗಿತ್ತು. ರೈಲ್ವೆಗಳು 1614.90 ಮಿಲಿಯನ್ ಟನ್‌ಗಳ ದಾಖಲೆಯ ಸರಕುಗಳನ್ನು ಹಾಗೂ ಸುಮಾರು 7.3 ಬಿಲಿಯನ್ ಪ್ರಯಾಣಿಕರನ್ನು ಸಾಗಿಸಿವೆ ಎಂದು ಸರ್ಕಾರ ಹೇಳಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net