ಕೇಂದ್ರ ದಿನಗೂಲಿಗಳ ತುಟ್ಟಿ ಭತ್ಯೆ ಪರಿಷ್ಕರಣೆ- ಈ ತಿಂಗಳಿನಿಂದಲೇ ಪೂರ್ವಾನ್ವಯ

central
Published on

ನವದೆಹಲಿ: ಕೇಂದ್ರ ಸರ್ಕಾರ ವಲಯದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವ ದಿನಗೂಲಿ ಕಾರ್ವಿುಕರ ಕನಿಷ್ಠ ಕೂಲಿಯ ವೇರಿಯೇಬಲ್ ತುಟ್ಟಿ ಭತ್ಯೆಯನ್ನು (ವಿಡಿಎ) ಪರಿಷ್ಕರಿಸಲಾಗಿದೆ. ಪರಿಷ್ಕೃತ ವಿಡಿಎ ಅಕ್ಟೋಬರ್ 1ರಿಂದಲೇ ಅನ್ವಯವಾಗಲಿದೆ. ಕೈಗಾರಿಕಾ ಕಾರ್ವಿುಕರ ಸರಾಸರಿ ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ-ಐಡಬ್ಲ್ಯು) ಆಧಾರದ ಮೇಲೆ ವಿಡಿಎ ಪರಿಷ್ಕರಿಸಲಾಗುತ್ತದೆ. ಕಾರ್ವಿುಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಹೊಂದಿಕೊಂಡಿರುವ ಕಾರ್ವಿುಕ ಬ್ಯೂರೊ, ಸಿಪಿಐ ಸಿದ್ಧಪಡಿಸುತ್ತದೆ.

ಪರಿಷ್ಕರಣೆಯಿಂದ ಸುಮಾರು 1.5 ಕೋಟಿ ಕಾರ್ವಿುಕರಿಗೆ ಅನುಕೂಲ ಆಗಲಿದೆ ಎಂದು ಕಾರ್ವಿುಕ ಮತ್ತು ಉದ್ಯೋಗ ಸಚಿವ ಭೂಪೇಂದ್ರ ಯಾದವ್ ಹೇಳಿದ್ದಾರೆ. ದೇಶದಾದ್ಯಂತ ರಸ್ತೆ, ರನ್​ವೇ ಕಟ್ಟಡ ನಿರ್ಮಾಣ ನಿರ್ವಹಣೆ, ಕಸಗುಡಿಸುವುದು ಹಾಗೂ ಸ್ವಚ್ಛಗೊಳಿಸುವುದು, ಲೋಡಿಂಗ್ ಮತ್ತು ಅನ್​ಲೋಡಿಂಗ್, ಗಣಿ ಮತ್ತು ಕೃಷಿ ಮುಂತಾದ ವಲಯಗಳಲ್ಲಿ ನಿರತರಾಗಿರುವ ಕೇಂದ್ರ ಸರ್ಕಾರದ ದಿನಗೂಲಿ ಕಾರ್ವಿುಕರ ಕೂಲಿ ಏರಿಕೆಯಾಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net