LIVE| ಕೇಂದ್ರ ಬಜೆಟ್​ 2022: ವಿತ್ತಸಚಿವೆ ನಿರ್ಮಲಾ ಸೀತಾರಾಮನ್​ರಿಂದ ಬಜೆಟ್​ ಮಂಡನೆ

Union Budget
Published on

ನವದೆಹಲಿ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ 11 ಗಂಟೆಗೆ​ ಕೇಂದ್ರ ಬಜೆಟ್​ ಮಂಡಿಸಲಿದ್ದು, ಕರೊನಾ ಅಲೆಗಳಿಂದ ಕಂಗೆಟ್ಟಿರುವ ದೇಶದ ಆರ್ಥಿಕತೆಗೆ ಉತ್ತೇಜನ ನೀಡಲು ಇಂದಿನ ಬಜೆಟ್ ಮಹತ್ವದ್ದಾಗಿದೆ. ಯಾವ ಕ್ಷೇತ್ರಕ್ಕೆ ಏನೆಲ್ಲ ಕೊಡುಗೆ ಸಿಗಲಿದೆ? ರಾಜ್ಯದ ಪಾಲಿಗೆ ಏನೇನು ಬರಲಿದೆ? ಜನರಿಗೆ ಸಿಗುತ್ತಾ ತೆರಿಗೆ ವಿನಾಯಿತಿ? ಕರೋನದಿಂದ ಆದಾಯ ಕಳೆದುಕೊಂಡಿರುವ ವಲಯಕ್ಕೆ ಕೊಡುತ್ತಾ ಕೇಂದ್ರ ಗುಡ್ ನ್ಯೂಸ್? ಪೆಟ್ರೋಲ್, ಡಿಸೇಲ್ ಮೇಲಿನ ಸುಂಕ ಇಳಿಕೆ ಆಗುತ್ತಾ ಏರಿಕೆ ಆಗುತ್ತಾ? ಆರೋಗ್ಯ ಉಪಕರಣಗಳು ಮತ್ತು ಔಷಧಿಗಳ ಮೇಲೆ ಹಾಕ್ತಿರುವ ತೆರಿಗೆ ಕಡಿಮೆ ಆಗುತ್ತಾ? ಯಾವುದು ಇಳಿಕೆ ಯಾವುದು ಏರಿಕೆ? ಜನರಿಗೆ ಪ್ರಧಾನಿ ಮೋದಿ ಕೊಡ್ತಾರಾ ಗುಡ್ ನ್ಯೂಸ್? ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಂದಿನ ಬಜೆಟ್​ನಲ್ಲಿ ಸಿಗಲಿದೆ. ತಜ್ಞರ ಚರ್ಚೆಯನ್ನು ಒಳಗೊಂಡಂತೆ ಬಜೆಟ್​ ಮಂಡನೆಯ ನೇರ ಪ್ರಸಾರವನ್ನು ಈ ಕೆಳಗಿನ ದಿಗ್ವಿಜಯ 24X7 ನ್ಯೂಸ್ ಫೇಸ್​ಬುಕ್ ಪೇಜ್​ನಲ್ಲಿ ವೀಕ್ಷಿಸಬಹುದಾಗಿದೆ.​

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net