ಮೈಸೂರಿನ .ಶಂಕರ ಚೆಟ್ಟಿ ಅಂಡ್ ಸನ್ಸ್ ಜ್ಯುವೆಲ್ಲರ್ಸ್‌ಗೆ ಶತಮಾನೋತ್ಸವ ಸಂಭ್ರಮ

Published on

ಮೈಸೂರು: ನಗರದ ಕೆ.ಆರ್. ವೃತ್ತದಲ್ಲಿರುವ ಎ.ಶಂಕರ ಚೆಟ್ಟಿ ಅಂಡ್ ಸನ್ಸ್ ಜ್ಯುವೆಲ್ಲರ್ಸ್‌ನ ಶತಮಾನೋತ್ಸವ ಹಿನ್ನೆಲೆಯಲ್ಲಿ ಆ.2 ರಿಂದ ನ.9ರವರೆಗೆ 100 ದಿನಗಳ ಕಾಲ ಶತಮಾನೋತ್ಸವ ಸಂಭ್ರಮ ಆಯೋಜಿಸಲಾಗಿದ್ದು, ಈ ಪ್ರಯುಕ್ತ ಗ್ರಾಹಕರಿಗೆ ಹಲವು ರಿಯಾತಿಗಳನ್ನು ನೀಡಲಾಗುತ್ತಿದೆ ಎಂದು ಸಂಸ್ಥೆಯ ಮಾಲೀಕ ಆದರ್ಶ್ ಕೆ.ಮೂರ್ತಿ ಹೇಳಿದರು.

ನಗರದಲ್ಲಿ 1925ರಲ್ಲಿ ಎ.ಶಂಕರ ಚೆಟ್ಟಿ ಸ್ಮರಣಾರ್ಥ ಅವರ ಪುತ್ರ ಎ. ಗೋಪಾಲ ಚೆಟ್ಟಿ ಆಭರಣ ಮಳಿಗೆ ಪ್ರಾರಂಭಿಸಿದರು. ಜನಸಾ ಮಾನ್ಯರಿಂದ ಹಿಡಿದು ಮೈಸೂರು ರಾಜಮನೆತನದವರೆಗೆ ಆಕರ್ಷಕ ಆಭರಣಗಳನ್ನು ನೀಡಿ ಮೆಚ್ಚುಗೆ ಪಡೆದ ಆಭರಣ ಮಳಿಗೆ ನಮ್ಮದಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಶತಮಾನೋತ್ಸವದ ಹಿನ್ನೆಲೆಯಲ್ಲಿ ಆ.3 ರಂದು ಮಧ್ಯಾಹ್ನ 1.30ಕ್ಕೆ ಮೈಸೂರು ರಾಜವಶಂಸ್ಥ ಹಾಗೂ ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಶತಮಾನೋತ್ಸವದ ಲೋಗೋ, ಎ.ಶಂಕರ ಚೆಟ್ಟಿ ಅಂಡ್ ಸನ್ಸ್ ಡಿಜಿಟಲ್ ಆ್ಯಪ್, ಮೈಸೂರು ಮೆಡಲಿಯನ್‌ಗಳನ್ನು ಬಿಡುಗಡೆ ಮಾಡುವರು. ಇದೇ ಸಂದರ್ಭ ಗಂಡಭೇರುಂಡ ಆಭರಣಗಳ ಪ್ರದರ್ಶನ ಉದ್ಘಾಟನೆ ಮಾಡಲಿದ್ದಾರೆ ಎಂದರು.

ಶತಮಾನೋತ್ಸವ ಅಂಗವಾಗಿ ಆ.2ರಿಂದ ಆ.9ರವರೆಗೆ ಚಿನ್ನಾಭರಣ ಖರೀದಿಸುವ ಗ್ರಾಹಕರಿಗೆ ವಿಶೇಷ ರಿಯಾತಿ ನೀಡಲಾಗುವುದು. ಪ್ರತಿ ಗ್ರಾಂ ಚಿನ್ನ ಖರೀದಿಗೆ 600 ರೂ., ಪ್ರತಿ ಕ್ಯಾರೆಟ್ ವಜ್ರಕ್ಕೆ 1 ಸಾವಿರ ರೂ., 1 ಕೆ.ಜಿ. ಬೆಳ್ಳಿ ಖರೀದಿಗೆ 1 ಸಾವಿರ ರೂ. ರಿಯಾಯಿತಿ ನೀಡಲಾಗುವುದು. ಆ.9 ರಿಂದ ರಿಯಾಯಿತಿ ಬದಲಾವಣೆಯಾಗಲಿದೆ ಎಂದರು.

5 ಸಾವಿರಕ್ಕಿಂತ ಮೇಲ್ಪಟ್ಟು ಚಿನ್ನಾಭರಣ ಖರೀದಿಸಿದ ಗ್ರಾಹಕರಿಗೆ ಕೂಪನ್ ನೀಡಲಾಗುವುದು. ವಿಜೇತರಿಗೆ 100 ವಜ್ರ ಮುದ್ರಿಕೆಗಳು, 1 ವಜ್ರ ಹರ, ಗೋಲ್ಡ್ ಬಂಪರ್ ಬಹುಮಾನ, 5 ಕೆ.ಜಿ. ಬೆಳ್ಳಿ ಗೆಲ್ಲುವ ಅವಕಾಶವಿದೆ. ಎ.ಶಂಕರ ಚೆಟ್ಟಿ ಅಂಡ್ ಸನ್ಸ್‌ನ ಆ್ಯಪ್ ಅಭಿವೃದ್ಧಿ ಪಡಿಸಲಾಗಿದ್ದು, ಈ ಆ್ಯಪ್ ಮೂಲಕ ಚಿನ್ನ ಖರೀದಿ ಮಾಡಬಹುದು. ಕೇವಲ 10 ರೂ. ಮೊತ್ತಕ್ಕೂ ಈ ಆ್ಯಪ್‌ನಲ್ಲಿ ಚಿನ್ನ ಖರೀದಿಸಲು ಅವಕಾಶ ಮಾಡಿಕೊಡಲಾಗಿದೆ. ಈ ಆ್ಯಪ್ ಡೌನ್‌ಲೋಡ್ ಮಾಡಿಕೊಂಡರೆ 1 ಗ್ರಾಂ ಬೆಳ್ಳಿ ಉಚಿತವಾಗಿ ನೀಡಲಾಗುವುದು. ಜನರು ಹಣವನ್ನು ಹೂಡಿಕೆ ಮಾಡಲು ಈ ಆ್ಯಪ್‌ಅನ್ನು ಪರಿಣಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎ.ಶಂಕರ ಚೆಟ್ಟಿ ಅಂಡ್ ಸನ್ಸ್ ಜ್ಯುವೆಲ್ಲರ್ಸ್ ಮಾಲೀಕರಾದ ಎ.ಜಿ.ಕೃಷ್ಣಮೂರ್ತಿ, ಲಕ್ಷ್ಮೀಮೂರ್ತಿ, ಪಲ್ಲವಿ ಆದರ್ಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net