

ಚಿಂತಾಮಣಿ: ಟೆಂಪೋವಿನ ಹಿಂಬದಿಯಲ್ಲಿ ಕುಳಿತ್ತಿದ್ದ ಕಾರ್ಮಿಕನೊಬ್ಬ ಸಿಮೆಂಟ್ ಕಾಂಕ್ರೀಟ್ ಮಿಕ್ಸಿಂಗ್ ಯಂತ್ರದ ಚಕ್ರಕ್ಕೆ ಸಿಲುಕಿ ಮೃತಪಟ್ಟ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿ ತಾಲೂಕಿನಲ್ಲಿ ಸಂಭವಿಸಿದೆ.
ಕೋಲಾರ ತಾಲೂಕಿನ ಚೋಳಘಟ್ಟ ಗ್ರಾಮದ ಮಂಜುನಾಥ್(45) ಮೃತ. ಚಿಂತಾಮಣಿ ತಾಲೂಕಿನ ಹಿರೆಕಟ್ಟಿಗೆನಹಳ್ಳಿಯಿಂದ ನೆರ್ನಕಲ್ ಗ್ರಾಮಕ್ಕೆ ಟೆಂಪೋದಲ್ಲಿ ಹಿಂದೆ ಕುಳಿತು ಮಂಜುನಾಥ್ ಪ್ರಯಾಣಿಸುತ್ತಿದ್ದರು. ಚಾಲಕ ಅತಿ ವೇಗವಾಗಿ ವಾಹನ ಚಲಾಯಿಸಿದ್ದು, ಹಿಂಬದಿ ಕುಳಿತಿದ್ದ ಮಂಜುನಾಥ್ ರಸ್ತೆಗೆ ಬಿದ್ದಿದ್ದು, ಟೆಂಪೋ ಹಿಂಬದಿಯಲ್ಲಿ ಅಳವಡಿಸಿದ್ದ ಸಿಮೆಂಟ್ ಕಾಂಕ್ರಿಟ್ ಮಿಕ್ಸಿಂಗ್ ಯಂತ್ರಕ್ಕೆ ಸಿಲುಕಿ ದುರಂತ ಅಂತ್ಯ ಕಂಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.