ಬೆಂಗಳೂರು:
3ಡಿ ಪ್ರಿಂಟಿಂಗ್‌ನಲ್ಲಿ ಮುಂಚೂಣಿಯಲ್ಲಿರುವ ಗ್ಲ್ಯಾಟಿಕ್ 3ಡಿ ಕಂಪನಿಯು ಕ್ರೇಂಬಿಡ್ಜ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿನಲ್ಲಿ ಕಟಿಂಗ್ ಎಡ್ಜ್ ಮೆಟಲ್ 3ಡಿ ಪ್ರಿಂಟಿಂಗ್
ಯೂನಿಟ್‌ನ್ನು ಇಸ್ರೋ ಅಧ್ಯಕ್ಷ ಡಾ.ವಿ.ನಾರಾಯಣನ್ ಉದ್ಘಾಟಿಸಿದರು.
ಡಾ.ವಿ.ನಾರಾಯಣನ್ ಮಾತನಾಡಿ, ಭವಿಷ್ಯ ಬಾಹ್ಯಾಕಾಶ ಪರಿಶೋಧನೆಯಲ್ಲಿ ಸಂಯೋಜಿತ ಉತ್ಪಾದನೆ ಪ್ರಮುಖ ಪಾತ್ರವನ್ನು ವಹಿಸಲಿದೆ. ಅದರಲ್ಲೂ ಮೆಟಲ್ ಪ್ರಿಂಟಿಂಗ್ ಅವಶ್ಯಕತೆ ಇಸ್ರೋಗಿದೆ. ಈ ಒಪ್ಪಂದ ಕೈಗಾರಿಕಾವಲಯದಲ್ಲಿ ಹೆಚ್ಚಿನ ಬದಲಾವಣೆಯನ್ನು ತರಲಿದೆ ಎಂದರು.
ಗ್ಲ್ಯಾಟಿಕ್ 3ಡಿ ಮತ್ತು ಕ್ರೇಂಬಿಡ್ಜ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಸಿಇಒ ನಿತಿನ್ ಮೋಹನ್ ಮಾತನಾಡಿ, ಸಂಯೋಜಿತ ಉತ್ಪಾದನಾ ವಲಯದಲ್ಲಿ ಭಾರತ ಮತ್ತು ಜಾಗತಿಕ ಮಟ್ಟದಲ್ಲಿ ಅವಿಷ್ಕಾರ ಮಾಡಲು ಈ ಒಪ್ಪಂದ ಸಹಾಯಕಾರಿಯಾಗಿದೆ. ಕೈಗಾರಿಕೆಗಳಿಗೆ ಬೇಕಾಗಿರುವ ಸುಸ್ಥಿರ ಮತ್ತು ನಿಖರತೆಯನ್ನು ನೀಡಲಿದ್ದೇವೆ ಎಂದರು.
ಜಿಎಂಬಿಎಚ್ ಇಂಡಿಯಾ ಮುಖ್ಯಸ್ಥ ಪ್ರಕಾಶಂ ಆನಂದ್, ಮಾತನಾಡಿ, ಸಂಯೋಜಿತ ಉತ್ಪಾದನಾ ವಲಯದಲ್ಲಿ ಜಾಗತಿಕ ಮಟ್ಟದ ಒಂದು ಸಹಕಾರ ಸಿಕ್ಕಿದೆ. ಈ ಸಹಯೋಗ ಭಾರತದ ಉತ್ಪಾದನಾ ವಲಯಕ್ಕೆ ಕೊಡುಗೆ ನೀಡಲಿದೆ. ಆ ಮೂಲಕ ಮತ್ತಷ್ಟು ವ್ಯವಹಾರ ಮತ್ತು ಅವಿಷ್ಕಾರ ವೃದ್ಧಿಗೆ ಸಹಾಯ ಮಾಡಲಿದೆ ಎಂದರು.
ಈ ಒಪ್ಪಂದ ನಮ್ಮ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲ ತಂದುಕೊಡಲಿದೆ. ಶೈಕ್ಷಣಿಕ ಮತ್ತು ಕೈಗಾರಿಕೆ ನಡುವಿನ ಅಂತರವನ್ನು ಕಡಿಮೆ ಮಾಡಲಿದೆ. ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣಕ್ಕೆ ಒತ್ತು ನೀಡಲಿದೆ ಎಂದು ಕ್ರೇಂಬಿಡ್ಜ್ ಇನ್‌ಸ್ಟಿಟ್ಯೂಟ್ ಆ್ ಟೆಕ್ನಾಲಜಿ ಅಧ್ಯಕ್ಷ ಡಿ.ಕೆ.ಮೋಹನ್ ಅಭಿಪ್ರಾಯಪಟ್ಟರು.
ಈ ವೇಳೆ ಇಸ್ರೋ ಎಲ್‌ಪಿಎಸ್‌ಸಿ ಉಪ ನಿರ್ದೇಶಕ ಡಾ.ಆರ್ಮುಗಂ , ಇಸ್ರೋ ಪ್ರೊಫೆಸರ್ ಡಾ.ಪಿ.ಜಿ.ದಿವಾಕರ್, ಡಿಆರ್‌ಡಿಒ ವಿಜ್ಞಾನಿ ಡಾ.ಸಂಜಯ್ ಬರದ್ ಇತರರು ಇದ್ದರು.
ಗ್ಲ್ಯಾಟಿಕ್ 3ಡಿ ಮತ್ತು ಜಿಎಂಬಿಎಚ್ ಇಂಡಿಯಾ ಇಒಎಸ್ ನಡುವೆ ಉತ್ಪಾದನೆ ಕುರಿತು ಒಪ್ಪಂದ ಮಾಡಿಕೊಂಡಿದೆ. ಜಾಗತಿಕ ಮಟ್ಟದಲ್ಲಿ ತನ್ನ ಉತ್ಪಾದನೆಯನ್ನು ಮತ್ತಷ್ಟು ವಿಸ್ತರಿಸಲು ಇದು ಸಹಾಯ ಮಾಡಲಿದೆ ಎಂಬ ಉದ್ದೇಶದಿಂದ ಒಪ್ಪಂದ ಮಾಡಿಕೊಂಡಿದೆ.