ಕಾವೇರಿ ನೀರಾವರಿ ನಿಗಮದಲ್ಲೂ ಆಚರಣೆ

27-06-25--krs3
ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮ ಮುಖ್ಯ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಜಯಂತ್, ರಶ್ಮಿ, ಶಿವಕುಮಾರ್, ಲೋಹಿತ್, ಶ್ರೀನಿವಾಸ್, ಲೋಹಿತ್, ಪುನೀತ್, ಸಹನಾ ಇತರರಿದ್ದರು.
Published on

ಕೆ.ಆರ್.ಸಾಗರ: ಇಲ್ಲಿನ ಕಾವೇರಿ ನೀರಾವರಿ ನಿಗಮ ಮತ್ತು ಕೆ.ಆರ್.ಸಾಗರ ಗ್ರಾಪಂ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿಯನ್ನು ಶುಕ್ರವಾರ ಆಚರಣೆ ಮಾಡಲಾಯಿತು.

ಕೆ.ಆರ್.ಸಾಗರ ಕಾವೇರಿ ನೀರಾವರಿ ನಿಗಮ ಮುಖ್ಯ ಕಚೇರಿಯಲ್ಲಿ ನಾಡಪ್ರಭು ಕೆಂಪೇಗೌಡರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಜಯಂತಿ ಆಚರಣೆ ಮಾಡಲಾಯಿತು. ಕಾರ್ಯಪಾಲಕ ಇಂಜಿನಿಯರ್ ಜಯಂತ್ ಪುಷ್ಪಾರ್ಚನೆ ಮಾಡಿ, ಮಾತನಾಡಿ, ನಾಡಪ್ರಭು ಕೆಂಪೇಗೌಡರ ದೂರದೃಷ್ಟಿಯಿಂದ ಬೆಂಗಳೂರು ಇಂದು ದೇಶದಲ್ಲಿ ಅತ್ಯುತ್ತಮ ನಗರವಾಗಿದೆ. ಅವರ ಅಭಿವೃದ್ಧಿ ಕೆಲಸಗಳು ಇಂದಿಗೂ ಮಾರ್ಗದರ್ಶಿಯಾಗಿದೆ ಎಂದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್‌ಗಳಾದ ರಶ್ಮಿ, ಶಿವಕುಮಾರ್, ಲೋಹಿತ್, ಲೆಕ್ಕ ಮುಖ್ಯಾಧಿಕಾರಿ ಶ್ರೀನಿವಾಸ್, ಇಂಜಿನಿಯರ್‌ಗಳಾದ ಲೋಹಿತ್, ಪುನೀತ್, ಸಹನಾ, ಅಭಿಲಾಷ್, ಅಧಿಕಾರಿಗಳಾದ ನಾಗೇಶ್, ಜಯಪ್ರಕಾಶ್, ಯೋಗಾವತಿ ಸೇರಿದಂತೆ ಹಲಾವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net