

ರಾಣೆಬೆನ್ನೂರ: ಅಂದವಾದ ಹಣತೆಗೆ ಗುರಿ ಎಂಬ ಭಕ್ತಿ ಹಾಕಿ ಜ್ಞಾನವೆಂಬ ಎಣ್ಣೆ ಹಾಕಿ ಸುಜ್ಞಾನ ಎಂಬ ಬೆಳಕನು ಹಚ್ಚಿದಾಗ ಎಲ್ಲರ ಹೃದಯದಲ್ಲಿ ಅಡಗಿರುವ ಅಜ್ಞಾನವೆಂಬ ಕತ್ತಲು ತೊಲಗುವುದು. ಕತ್ತಲೆಯಿಂದ ಬೆಳಕಿನೆಡೆಗೆ ಸಾಗುವುದೇ ಕಾತಿರ್ಕ ಎಂದು ತುಮ್ಮಿನಕಟ್ಟಿ ಪದ್ಮಶಾಲಿ ಗುರು ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪ್ರಭುಲಿಂಗ ಸ್ವಾಮೀಜಿ ಹೇಳಿದರು.
ಇಲ್ಲಿಯ ಸಿದ್ದೇಶ್ವರ ನಗರದ ಗುರು ಮಾರ್ಕಂಡೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಬುಧವಾರ ಏರ್ಪಡಿಸಿದ್ದ ಕಾತಿರ್ಕ ಮಹೋತ್ಸವ ಕಾರ್ಯಕ್ರಮ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಪ್ರತಿಯೊಂದು ಧಾಮಿರ್ಕ ಆಚರಣೆಗಳು ಮನುಷ್ಯರನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಸಾಗಿಸುವುದಾಗಿದೆ ಎಂದರು.
ದೇವಸ್ಥಾನದ ಅಧ್ಯಕ್ಷ ನಾಗರಾಜ ಅಗಡಿ, ಉಪಾಧ್ಯಕ್ಷ ಹನುಮಂತಪ್ಪ ಮುಕ್ತೇನಹಳ್ಳಿ, ಲಕ್ಷ$್ಮಣ ಕಡ್ಲಿಬಾಳ, ಕರಿಬಸಪ್ಪ ಹಳ್ಳಳ್ಳಿ, ಶಂಕ್ರಣ್ಣ ಗರಡಿಮನಿ, ಮಾರುತಿ ಗರಡಿಮನಿ, ಬಸವರಾಜ ಐರಣಿ, ಎಲಪ್ಪ ಗುತ್ತಲ, ಶಿವಣ್ಣ ಬಡೆಂಕಲ್ಲ, ನಾಗರಾಜ ಚಳಗೇರಿ, ಬೆನಕೇಶ ಹದಡಿ, ತಿಪ್ಪೇಸ್ವಾಮಿ ಅಗಡಿ, ಕರಿಬಸಪ್ಪ ಕಡ್ಲಿಬಾಳ ಮತ್ತಿತರರು ಉಪಸ್ಥಿತರಿದ್ದರು.