ಸಂಭ್ರಮ ಸಡಗರದಿಂದ ಜರುಗಿದ ಶ್ರೀ ಸಿದ್ದೇಶ್ವರ ದೇವರ ರಥೋತ್ಸವ

13-RNR-06
Published on

ರಾಣೆಬೆನ್ನೂರ: ದವನ ಹುಣ್ಣಿಮೆ ನಿಮಿತ್ತ ಇಲ್ಲಿನ ಸಿದ್ದೇಶ್ವರ ನಗರದ ಐತಿಹಾಸಿಕ ಸಿದ್ದೇಶ್ವರ ದೇವರ ರಥೋತ್ಸವ ಶನಿವಾರ ಸಂಜೆ ಸಂಭ್ರಮ ಸಡಗರದಿಂದ ಜರುಗಿತು.

ದೇವಸ್ಥಾನದಿಂದ ಹೊರಟ ತೇರು ಹಳೆ ಪಿ.ಬಿ. ರಸ್ತೆ ಮೂಲಕ ಕುರುಬಗೇರಿ ಕ್ರಾಸ್​ವರೆಗೆ ಬಂದು ಪುನಃ ದೇವಸ್ಥಾನಕ್ಕೆ ಬಂದು ಸೇರಿತು. ದಾರಿಯುದ್ದಕ್ಕೂ ಭಕ್ತರು ರಥಕ್ಕೆ ಭವ್ಯ ಸ್ವಾಗತ ಕೋರಿ ಹಣ್ಣು ಕಾಯಿ ನೈವೆದ್ಯ ನೆರವೇರಿಸಿದರು. ಅಲ್ಲದೆ ರಥ ವಾಪಸ್​ ತೆರಳುವ ಸಮಯದಲ್ಲಿ ಮಳೆ ಸುರಿದರು. ಭಕ್ತರು ಮಳೆಯಲ್ಲಿಯೆ ರಥ ಎಳೆದು ಭಕ್ತಿ ಭಾವ ಮೆರೆದರು.

ಪ್ರಮುಖರಾದ ಸೋಮಣ್ಣ ಗೌಡಶಿವಣ್ಣನವರ, ಶೇಖಪ್ಪ ಹೊಸಗೌಡ್ರ, ಮಂಜುನಾಥ ಗೌಡಶಿವಣ್ಣನವರ, ಸಿದ್ದಣ್ಣ ಅತಡಕರ, ಬಸಪ್ಪ ಕುರಡಣ್ಣನವರ, ಅರುಣ ಸೊಪ್ಪಿನ, ಪರಮೇಶ ಗೂಳಣ್ಣನವರ, ಮಹೇಶ ಅಗಡಿ, ಮಹೇಶ ಗೌಡಶಿವಣ್ಣನವರ, ಮಲ್ಲೇಶಪ್ಪ ಬಸನಗೌಡ್ರ, ಕುಮಾರ ಕಾಳಮ್ಮನವರ, ನಾಗರಾಜ ಸೊಪ್ಪಿನ ಸೇರಿ ಸಾವಿರಾರು ಜನ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net