

ರಾಣೆಬೆನ್ನೂರ: ತಾಲೂಕಿನ ಸೋಮಲಾಪುರ ಗ್ರಾಮದ ಹೊನ್ನಕೇರಿ ಮಲ್ಲೇಶ್ವರ ದೇವರ ಜಾತ್ರೆ ಹಾಗೂ ಬೆಲ್ಲದ ಬಂಡಿ ಉತ್ಸವ ಸಂಭ್ರಮ ಸಡಗರದಿಂದ ಭಾನುವಾರ ಜರುಗಿತು.
ಹೊಳೆಪೂಜೆ, ಶ್ರೀ ಮಲ್ಲೇಶ್ವರ ದೇವರ ಪಲ್ಲಕ್ಕಿ ಉತ್ಸವ ಸಂಭ್ರಮದಿಂದ ನಡೆಯಿತು. ರೈತರು ಬೆಲ್ಲದ ಬಂಡಿ ಕಟ್ಟಿಕೊಂಡು ತುಂಗಭದ್ರಾ ನದಿಯಿಂದ ಬೆಲ್ಲದ ನೀರನ್ನು ತಂದು ಗ್ರಾಮದಲ್ಲಿ ಹಂಚಿದರು. ಬೆಲ್ಲದ ಬಂಡಿ ಓಡಿಸುವ ದೃಶ್ಯ ನೆರೆದವರ ಗಮನ ಸೆಳೆಯಿತು.