

ಬೆಂಗಳೂರು: ಅಶ್ಲೀಲ ಸಿಡಿಯಲ್ಲಿ ಕಾಣಿಸಿಕೊಂಡಿರುವ ಯುವತಿ ಸಾಲು ಸಾಲು ವಿಡಿಯೋಗಳನ್ನು ಹರಿಬಿಡಲಾರಂಭಿಸಿದ್ದಾಳೆ. ಆಕೆಯ ಕುಟುಂಬಸ್ಥರು ಮಾಧ್ಯಮದ ಎದುರು ಡಿಕೆ ಶಿವಕುಮಾರ್ ಅವರೇ ನಮ್ಮ ಮಗಳನ್ನು ಒತ್ತೆಯಾಳು ಮಾಡಿಕೊಂಡಿದ್ದಾರೆ ಎಂದು ಹೇಳಿದ ಬೆನ್ನಲ್ಲೇ ಯುವತಿ ಮತ್ತೊಂದು ವಿಡಿಯೋ ಹರಿಬಿಟ್ಟಿದ್ದಾಳೆ. ನನ್ನ ಕುಟುಂಬಸ್ಥರ ಮೇಲೆ ಅವರ ಪ್ರಭಾವ ಬೀರಿ ಅವರ ಬಾಯಲ್ಲಿ ಸುಳ್ಳು ಹೇಳಿಸಲಾಗುತ್ತಿದೆ ಎಂದು ಯುವತಿ ದೂರಿದ್ದಾಳೆ.
ನಿಜವಾಗಿಯೂ ಅನ್ಯಾಯವಾಗಿರುವುದು ನನಗೆ. ಮೋಸ ಮಾಡಿರುವವರು ಅವರು. ಅವರ ಮನೆಯವರನ್ನ ಯಾರೂ ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಿಲ್ಲ. ಅದರ ಬದಲು ನಮ್ಮ ಮನೆಯವರನ್ನು ಕರೆದುಕೊಂಡು ಹೋಗಿ ಏನೇನೋ ಹೇಳಿಸುತ್ತಿದ್ದಾರೆ. ಈ ಪ್ರಕರಣನ ಬೇರೆಯದ್ದೇ ರೀತಿಯಲ್ಲಿ ಟರ್ನ್ ಮಾಡಲಾಗುತ್ತಿದೆ. ನ್ಯಾಯ ಸಿಗಬೇಕಾಗಿರುವುದು ನನಗೆ, ಮೊದಲು ನನ್ನ ಬಗ್ಗೆ ಮಾತನಾಡಲಿ. ಅದನ್ನು ಬಿಟ್ಟು ಅವರಿವರ ಬಗ್ಗೆ ಮಾತನಾಡುವುದು ಬೇಡ. ನನಗೆ ಅಲ್ಲಿ ಬಂದು ಹೇಳಿಕೆ ಕೊಡಲು ಹೆದರಿಕೆಯಾಗುತ್ತಿದೆ.
ಇಷ್ಟೊಂದು ಪ್ರಭಾವ ಬೀರಿ ನನ್ನ ಅಪ್ಪ ಅಮ್ಮನ ಬಾಯಿಯಲ್ಲೇ ಏನೇನೋ ಹೇಳಿಸಿದ್ದಾರೆ. ನಾನು ಬಂದರೆ ಇನ್ನು ಏನೇನು ಆಗುತ್ತದೆಯೋ? ಆದ್ದರಿಂದ ನಾನು ಸಿಎಂ ಯಡಿಯೂರಪ್ಪನವರಿಗೆ, ಗೃಹ ಸಚಿವ ಬೊಮ್ಮಾಯಿ ಅವರಿಗೆ, ಸಿದ್ದರಾಮಯ್ಯ ಅವರಿಗೆ, ಡಿಕೆ ಶಿವಕುಮಾರ್ ಅವರಿಗೆ ರಮೇಶ್ ಕುಮಾರ್ ಅವರಿಗೆ ಮನವಿ ಮಾಡ್ತೀನಿ. ನಾನು ನೇರವಾಗಿ ಬಂದು ನ್ಯಾಯಾಧೀಶರ ಎದುರಿಗೇ ಹೇಳಿಕೆ ಕೊಡ್ತೀನಿ. ಇದಕ್ಕೆ ನನಗೆ ಸಹಾಯ ಮಾಡಿ ಎಂದು ಯುವತಿ ವಿಡಿಯೋ ಮೂಲಕ ಮನವಿ ಮಾಡಿದ್ದಾಳೆ.
ವಿಡಿಯೋ ನೋಡಲು ಇಲ್ಲಿ ಕ್ಲಿಕ್ಕಿಸಿ: