ಆದಿತ್ಯ ಆಳ್ವಾ ಮನೆ ಶೋಧಕ್ಕೆ ಸಿಸಿಬಿ ತಂಡ

Aditya alva
Published on

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣ ದಿನೇದಿನೆ ಕುತೂಹಲ ಕೆರಳಿಸುತ್ತಿದ್ದು, ಸಿಸಿಬಿ ಪೊಲೀಸರು ಕೋರ್ಟ್​ನಿಂದ ಸರ್ಚ್​ ವಾರೆಂಟ್ ಪಡೆದು ಆದಿತ್ಯ ಆಳ್ವಾ ಮನೆ ಶೋಧ ಆರಂಭಿಸಿದ್ದಾರೆ. ಇಂದು ಬೆಳಗ್ಗೆಯೇ ಹೆಬ್ಬಾಳದಲ್ಲಿರುವ ಆದಿತ್ಯ ಆಳ್ವಾರ "House of Life" ಮನೆಗೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಮನೆಯ ಪ್ರತಿಯೊಂದು ಭಾಗವನ್ನೂ ಶೋಧಿಸತೊಡಗಿದ್ದಾರೆ.

ಹೆಬ್ಬಾಳ ಸಮೀಪದ ಈ ಮನೆ ರೆಸಾರ್ಟ್​ನಂತೆ ಇದ್ದು ಸುಮಾರು 4 ಎಕರೆ ಪ್ರದೇಶ ವ್ಯಾಪ್ತಿಯಲ್ಲಿದೆ. ಸಿಸಿಬಿ ಪೊಲೀಸರು ಅಲ್ಲಿಗೆ ತೆರಳಿದ ವೇಳೆ ಮನೆಯ ಸದಸ್ಯರು ಯಾರೂ ಇರಲಿಲ್ಲ. ಮನೆಗೆಲಸದವರು ಮಾತ್ರ ಇದ್ದು, ಪೊಲೀಸರು ಶೋಧ ಆರಂಭಿಸಿದ್ದಾರೆ. ಡ್ರಗ್ಸ್ ಕೇಸ್​ನ ಕಾಟನ್​ಪೇಟೆ ಪ್ರಕರಣದಲ್ಲಿ ಎ6 ಆರೋಪಿ ಆದಿತ್ಯ ಆಳ್ವಾ. ಮಾಜಿ ಸಚಿವ ಜೀವರಾಜ್ ಆಳ್ವಾ ಅವರ ಪುತ್ರ ಈ ಆದಿತ್ಯ.

ಸಿಸಿಬಿ ಇನ್​ಸ್ಪೆಕ್ಟರ್ ಪುನೀತ್​, ಇನ್​ಸ್ಪೆಕ್ಟರ್​ ಅಂಜುಮಾಲಾ ಸೇರಿ ಮೂವರು ಇನ್​ಸ್ಪೆಕ್ಟರ್​ಗಳ ನೇತೃತ್ವದ 8 ಸದಸ್ಯರ ತಂಡ ಈ ದಾಳಿಯನ್ನು ನಡೆಸಿದೆ. (ದಿಗ್ವಿಜಯ ನ್ಯೂಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net