

ಬೆಂಗಳೂರು: ರೌಡಿಗಳಿಗೆ ಬಿಲ್ಡಪ್ ಕೊಟ್ಟು ರೀಲ್ಸ್ ಮಾಡುತ್ತಿದ್ದ ರೌಡಿಗಳ ಸಹಚರರಿಗೆ ಸಿಸಿಬಿ ಪೊಲೀಸರು ಶಾಕ್ ನೀಡಿದ್ದಾರೆ. ಈ ಬಗ್ಗೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ೬೦ ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್ ಅಕೌಂಟ್‌ಗಳನ್ನು ಪತ್ತೆ ಮಾಡಿದ್ದಾರೆ.
ರೌಡಿಗಳ ಹೆಸರಿನಲ್ಲಿ ್ಯಾನ್ ಪೇಜ್‌ಗಳನ್ನು ತೆರೆದು ರೌಡಿಗಳ ವಿಡಿಯೋ ಮತ್ತು ೆಟೋಗಳಿಗೆ ಬೆಂಕಿ, ಲಾಂಗು ಮಚ್ಚು, ಎೆಕ್ಟ್‌ಗಳನ್ನು ಹಾಕಿ ಸಿನಿಮಾ ಸ್ಟೈಲ್‌ನಲ್ಲಿ ಹೊಗಳುತ್ತಿದ್ದರು. ಈ ಬಗ್ಗೆ ಸಾರ್ವಜನಿಕರಿಂದ ಸಿಸಿಬಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಎಚ್ಚೆತ್ತ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿದ್ದಾರೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಚಂದ್ರಗುಪ್ತ ಸೂಚನೆ ಮೇರೆಗೆ ಅಡ್ಮಿನ್‌ಗಳನ್ನು ಸಿಸಿಬಿ ಕಚೇರಿಗೆ ಕರೆಸಿ ವಿಚಾರಣೆ ನಡೆಸಿದ್ದಾಗ ಅಡ್ಮಿನ್‌ಗಳ ಪೈಕಿ ಬಹುಪಾಲು ಅಪ್ರಾಪ್ತ ಬಾಲಕರು ಎಂಬುದು ಗೊತ್ತಾಗಿದೆ.
ಆನ್‌ಲೈನ್ ಮೂಲಕ ಸಂಪರ್ಕ:
ವಿಲ್ಸನ್ ಗಾರ್ಡನ್ ನಾಗ, ಮಾರತ್ ಹಳ್ಳಿ ರೋಹಿತ್, ಸೈಲೆಂಟ್ ಸುನೀಲ, ಕುಣಿಗಲ್ ಗಿರಿ ಸೇರಿ ಹಲವಾರು ರೌಡಿಗಳ ಶಿಷ್ಯರು ಯುವಕರನ್ನು ಆನ್‌ಲೈನ್ ಮೂಲಕ ಸಂಪರ್ಕ ಮಾಡುತ್ತಿದ್ದರು.
ಜೈಲಿನಲ್ಲಿರುವ ಹಾಗೂ ಹೊರಗಡೆ ಇರುವ ರೌಡಿಶೀಟರ್‌ಗಳು ಕೆಲವು ಹುಡುಗರನ್ನು ಬಳಸಿಕೊಂಡು ರೌಡಿಗಳ ಪರವಾಗಿ ್ಯಾನ್ ಪೇಜ್‌ಗಳನ್ನು ತೆರೆದು ಅದಕ್ಕೆ ಾಲೋಯಿಂಗ್ ಬರುವಂತೆ ನೋಡಿಕೊತ್ತಿದ್ದರು. ಇದು ಸಿಸಿಬಿ ಅಧಿಕಾರಿಗಳ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ್ಯಾನ್ ಪೇಜ್‌ಗಳ ಕ್ರಿಯೇಟ್ ಮಾಡಿದ್ದ ಅಡ್ಮಿನ್‌ಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಇದರಲ್ಲಿ ಬಹುತೇಕರು ಅಪ್ರಾಪ್ತರು ಎಂದು ತಿಳಿದು ಬಂದಿದ್ದು, ಹೀಗಾಗಿ ಅಪ್ರಾಪ್ತರ ಪಾಲಕರನ್ನು ಕರೆಸಿ ಬುದ್ದಿವಾದ ಹೇಳಿ ಎಚ್ಚರಿ ಕೊಡುವ ಕೆಲಸವನ್ನು ಪೊಲೀಸರು ಮಾಡಿದ್ದಾರೆ. ಈ ಸಂಬಂಧ ಅಭಿಲಾಶ್ ಸೇರಿ ನಾಲ್ವರ ವಿರುದ್ಧ ಪ್ರಕರಣ ಕೂಡ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರಣ್ಯಪುರ ಅಭಿಲಾಶ್ ವಿಲ್ಸನ್ ಗಾರ್ಡನ್ ನಾಗ, ಕಾಡಬಿಸಲಹಳ್ಳಿ ರೋಹಿತನ ಹೆಸರಲ್ಲಿ ಅಕೌಂಟ್‌ಗಳನ್ನು ಹ್ಯಾಂಡಲ್ ಮಾಡುತ್ತಿದ್ದ ಎನ್ನಲಾಗಿದೆ.
೫೦೦ ರೂ.ಪಡೆದು ವಿಡಿಯೋ ಪೋಸ್ಟ್:
ಒಂದು ವಿಡಿಯೋ ಎಡಿಟ್ ಮಾಡಿ ಪೋಸ್ಟ್ ಮಾಡಲು ರೌಡಿಗಳ ಶಿಷ್ಯಂದಿರು ಅಡ್ಮಿನ್‌ಗಳಿಗೆ ೫೦೦ ರೂ.ನೀಡುತ್ತಿದ್ದರು ಎಂಬುದು ತನಿಖೆಯ ವೇಳೆ ಗೊತ್ತಾಗಿದೆ. ರೌಡಿಗಳು ತಮ್ಮ ಇರುವಿಕೆಯ ಬಗ್ಗೆ ಕೆಲವು ಯುವಕರಿಗೆ ತಿಳಿಸುವ ಮತ್ತು ಬ್ರೈನ್ ವಾಶ್ ಮಾಡುವ ಕೆಲಸ ಮಾಡುತ್ತಿದ್ದರು. ಅವರ ಪ್ರಭಾವಕ್ಕೆ ಒಳಗಾದ ಕೆಲವು ಯುವಕರು ರೌಡಿಗಳ ಹೆಸರಿನಲ್ಲಿ ಇನ್‌ಸ್ಟಾಗ್ರಾಂ ಹಾಗೂ ಯೂಟ್ಯೂಬ್ನಲ್ಲಿ ಅಕೌಂಟ್‌ಗಳನ್ನು ತೆರೆದು ರೌಡಿಗಳಿಗೆ ಬಿಲ್ಡಪ್‌ಕೊಟ್ಟು ರೀಲ್ಸ್ ಮಾಡಿ ಅದನ್ನು ಅಪಲೋಡ್ ಮಾಡುತ್ತಿದ್ದರು. ಇದರಿಂದ ರೌಡಿಸಂನತ್ತ ಯುವಕರು ಆಕರ್ಷಿತರಾಗುತ್ತಿದ್ದರು. ಸದ್ಯ ೬೦ ಅಕೌಂಟ್‌ನಿಂದ ೫೦೦ಕ್ಕೂ ಹೆಚ್ಚು ವಿಡಿಯೋಗಳನ್ನು ಸಿಸಿಬಿ ಡಿಲೀಟ್ ಮಾಡಿಸಿದೆ. ಹಣ ಕೊಟ್ಟು ವಿಡಿಯೋ ಮಾಡಿಸಿದ್ದವರಿಗೆ ಸಿಸಿಬಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಈ ಬಗ್ಗೆ ತನಿಖೆ ಮುಂದುವರಿದಿದೆ.
ಸಾಮಾಜಿಕ ಜಾಲತಾಣದಲ್ಲಿ ರೌಡಿಗಳ ಪರವಾಗಿ ರೀಲ್ಸ್ ಮಾಡುತ್ತಿರುವುದು ಇದೊಂದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ರೌಡಿಗಳ ಪರವಾಗಿ ಯಾರು ರೀಲ್ಸ್ ಮಾಡಬಾರದು. ಈ ರೀತಿ ರೀಲ್ಸ್ ಮಾಡುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ. ಈಗಾಗಲೇ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಚಂದ್ರಗುಪ್ತ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ