ಜುಲೈ 1ರಿಂದ ಸಿಬಿಎಸ್​ಇ 12ನೇ ತರಗತಿ ಪರೀಕ್ಷೆ

PUC exam
Published on

ನವದೆಹಲಿ: ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ (ಸಿಬಿಎಸ್​ಇ) ಬಾಕಿ ಉಳಿದಿದ್ದ 10ನೇ ಹಾಗೂ 12ನೇ ತರಗತಿ ವಿದ್ಯಾರ್ಥಿಗಳ ಪರೀಕ್ಷಾ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ರಮೇಶ್​ ಪೋಖ್ರಿಯಾಲ್​ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ. ಅದರಂತೆ ಜುಲೈ 1ರಿಂದ 15ರವರೆಗೆ ವಿವಿಧ ವಿಷಯಗಳ ಪರೀಕ್ಷೆ ನಡೆಯಲಿವೆ.

ಜುಲೈ 1 ರಂದು ಹೋಮ್​ ಸೈನ್ಸ್​, 2ರಂದು ಹಿಂದಿ ಎಲೆಕ್ಟಿವ್​ , ಹಿಂದಿ ಕೋರ್​, 7-ಕಂಪ್ಯೂಟರ್​ ಸೈನ್ಸ್​, ಇನ್​ಫಾರ್ಮೇಶನ್​ ಟೆಕ್​, 9- ಬಿಜಿನೆಸ್​ ಸ್ಟಡೀಸ್​, 10- ಬಯೋಟೆಕ್ನಾಲಜಿ, 11-ಭೂಗೋಳಶಾಸ್ತ್ರ, 13- ಸೋಷಿಯಾಲಜಿ ಪರೀಕ್ಷೆಗಳು ನಡೆಯಲಿವೆ.

ಇನ್ನುಳಿದ ದಿನಗಳಂದು 10ನೇ ತರಗತಿ ಪರೀಕ್ಷೆ ನಡೆಯಲಿದ್ದು, ಅವುಗಳು ಈಶಾನ್ಯ ದೆಹಲಿ ಶಾಲೆಗಳಿಗೆ ಸೀಮಿತವಾಗಿರಲಿವೆ ಎಂದು ಮಂಡಳಿ ಹೇಳಿದೆ.

ಎಲ್ಲ ವಿದ್ಯಾರ್ಥಿಗಳು ಸ್ಯಾನಿಟೈಸರ್​ನ್ನು ಕೊಂಡೊಯ್ಯಬೇಕು. ಮಾಸ್ಕ್​ ಧರಿಸಿರಬೇಕು. ಕರೊನಾ ವ್ಯಾಪಿಸುವುದನ್ನು ತಡೆಯುವ ಕ್ರಮಗಳ ಬಗ್ಗೆ ಪಾಲಕರು ಮಕ್ಕಳಿಗೆ ತಿಳಿಸಿರಬೇಕು. ಪ್ರವೇಶಪತ್ರದಲ್ಲಿ ನೀಡಲಾಗುವ ಎಲ್ಲ ಸೂಚನೆಗಳನ್ನು ಪಾಲಿಸಬೇಕೆಂದು ಸೂಚಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net