

ಕೋಲಾರ: ರಾಜ್ಯದ್ಯಂತ ರೈತರ, ಮಠಗಳ, ದೇವಾಲಯಗಳ ಜಾಗಗಳನ್ನು ವಕ್ಫ್ ಬೋರ್ಡ್ ಹೆಸರಿಗೆ ಬದಲಾಯಿಸುತ್ತಿರುವ ಧೋರಣೆಯನ್ನು ಖಂಡಿಸಿ, ಬಿಜೆಪಿ ಮುಖಂಡರು, ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.
ನಗರದ ಟಮಕ ಬಳಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು, ಮುಖಂಡರು ಜಿಲ್ಲಾಡಳಿತ ಭವನದ ತನಕ ಮೆರವಣಿಗೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿ ಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ಕಾಂಗ್ರೆಸ್‌ನಲ್ಲೇ ನೂರೆಂಟು ಸಮಸ್ಯೆಗಳಿವೆ. ಅದನ್ನು ಪರಿಹರಿಸದೆ ವಕ್ ವಿವಾದಕ್ಕೆ ಬಿಜೆಪಿ ಕಾರಣ ಎಂದು ಆರೋಪ ಮಾಡಲಾಗುತ್ತಿದೆ. ವಕ್ ಹಗರಣವನ್ನು ಸಿಬಿಐಗೆ ವಹಿಸಿದರೆ ಸತ್ಯಾಂಶ ಹೊರಬರುತ್ತದೆ ಎಂದು ತಿಳಿಸಿದರು.
ಸಚಿವ ಜಮೀರ್ ಅಹ್ಮದ್ ಅವರು ಎಲ್ಲ ಆಸ್ತಿಗಳನ್ನು ವಕ್ ಬೋರ್ಡ್ಗೆ ಸೇರಿಸಿ ರೈತರನ್ನು ಹೊರಕ್ಕೆ ತಳ್ಳಬೇಕೆಂದು ಸೂಚನೆ ನೀಡಿದ್ದಾರೆ. ವಕ್ ಬೋರ್ಡ್ನ ನಿರ್ದೇಶಕರಾಗಿದ್ದವರು ವಿಧಾನಸೌಧವೇ ನಮ್ಮದು ಎಂದಿದ್ದಾರೆ. ಇನ್ನೂ ಕೆಲ ಮುಖಂಡರು ಸಂಸತ್ತು ನಮ್ಮದು ಎಂದಿದ್ದಾರೆ. ಇಷ್ಟಾದರೂ ಸಚಿವರಾಗಲೀ, ಮುಖ್ಯಮಂತ್ರಿಯಾಗಲೀ ಇದರ ವಿರುದ್ಧ ಧ್ವನಿ ಎತ್ತಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಎಡವಟ್ಟಿನಿಂದ ಕೋಲಾರದ ಗಣೇಶನ ದೇವಸ್ಥಾನವೇ ವಕ್ ಅಡಿ ಬರುವಂತಾಗಿದೆ. ಮಾರಮ್ಮನ ಗುಡಿ ಹೋಗಿ ಈಗ ವಕ್ ಗುಡಿ ಆಗುತ್ತದೆ. ಯಾವುದೇ ಕಾರಣಕ್ಕೂ ಹಿಂದುಗಳ ಜಾಗ ವಕ್‌ಗೆ ಹೋಗಲು ಬಿಡುವುದಿಲ್ಲ, ಕಾಲಂ ೧೧ರಲ್ಲಿ ವಕ್‌ಬೋರ್ಡ್ ಎಂಬುದನ್ನು ತೆಗೆದುಹಾಕಬೇಕು. ನಮ್ಮ ಪ್ರಾಣವನ್ನಾದರೂ ಕೊಟ್ಟು ರೈತರ ಜಮೀನು ಉಳಿಸುತ್ತೇವೆ ಎಂದು ಭರವಸೆ ನೀಡಿದರು.
ಕೋರ್ಟ್ನಲ್ಲಿ ಕೇಸ್ ನಡೆಯುತ್ತಿರುವಾಗ ನೋಟಿಸ್ ವಾಪಸ್ ಪಡೆದರೆ, ಕೇಸು ಬಿದ್ದುಹೋಗುವುದಿಲ್ಲ. ಅದೇ ರೀತಿ ವಕ್ ನೋಟಿಸ್ ವಾಪಸ್ ಮಾಡಿದರೆ ಸಮಸ್ಯೆ ಬಗೆಹರಿಯುವುದಿಲ್ಲ. ರಾಜ್ಯದ ಪ್ರತಿಯೊಬ್ಬರೂ ಆಸ್ತಿಯ ಪಹಣಿ ಪರಿಶೀಲಿಸಿಕೊಳ್ಳಬೇಕು, ವಕ್ ಅಽಕಾರಿಗಳು ರೈತರ ಬಳಿ ಬಂದರೆ ಜಮೀನಿಗೆ ಕಾಲಿಡಲು ಬಿಡಬಾರದು ಎಂದು ಕರೆ ನೀಡಿದರು.
ಮುಸ್ಲಿಂ ಮತಗಳಿಸಲು ಕಾಂಗ್ರೆಸ್ ಏನು ಬೇಕಾದರೂ ಮಾಡುತ್ತದೆ. ಈಗ ವಕ್ ಮೂಲಕ ರೈತರ ಜಮೀನು ಕಬಳಿಸುತ್ತಿದೆ ಎಂದ ಅವರು, ಕೆಎಸ್‌ಆರ್‌ಟಿಸಿಯ ಬಸ್ ಮೇಲಿನ `ಸ್ಲೀಪ್ ಲೈಕ್ ಎ ಬೇಬಿ' ಎಂಬಂತೆ ಕೈ ಸರ್ಕಾರ ಮುಸ್ಲಿಂ ಮೂಲಭೂತವಾದಿಗಳು ಹಾಗೂ ಭಯೋತ್ಪಾದಕರು ಕರ್ನಾಟಕದಲ್ಲಿ ಆರಾಮವಾಗಿ ನಿದ್ರಿಸುವ ವಾತಾವರಣ ಸೃಷ್ಟಿ ಮಾಡಿದೆ ಎಂದು ಆರೋಪಿಸಿದರು.
ನೋಟಿಸ್ ನೀಡಿದ ಅಧಿಕಾರಿಗಳನ್ನು ಜೈಲಿಗೆ ಹಾಕಲಿ
ರಾಜ್ಯವನ್ನು ಮಿನಿ ಪಾಕಿಸ್ತಾನ ಮಾಡಲು ಹೊರಟಿದ್ದಾರೆ. ಇದು ನಾಡಪ್ರಭು ಕೆಂಪೇಗೌಡರು ಕಟ್ಟಿದ ನಾಡು. ಇದನ್ನು ಪಾಕಿಸ್ತಾನವಾಗಲು ಬಿಡಲ್ಲ. ಅಂಬೇಡ್ಕರ್ ಸಂವಿಧಾನ ಬೇಕಿದ್ದವರು ಮಾತ್ರ ಈ ರಾಜ್ಯದಲ್ಲಿ ಇರಬೇಕು. ಷರಿಯಾ ಕಾನೂನು ಬೇಕು ಎನ್ನುವವರು ಪಾಕಿಸ್ತಾನಕ್ಕೆ ಹೋಗಬೇಕು. ಕಾಂಗ್ರೆಸ್ ಸರ್ಕಾರ ನಗರ ನಕ್ಸಲರನ್ನು ಬಳಸಿಕೊಂಡಿದ್ದು, ಇವರು ಎಲ್ಲದಕ್ಕೂ ಸಂವಿಧಾನ ರಕ್ಷಣೆ ಎಂದು ಹೇಳುತ್ತಾರೆ ಎಂದು ಅಶೋಕ್ ಕಿಡಿಕಾರಿದರು.
ವಕ್ ಬೋರ್ಡ್ ಎಂಬ ರಾಕ್ಷಸ ಕರ್ನಾಟಕಕ್ಕೆ ಬಂದಿದೆ. ಅದಕ್ಕೆ ಊಟ, ಬಟ್ಟೆಯನ್ನು ಸಿಎಂ ಸಿದ್ದರಾಮಯ್ಯ ನೀಡಿದ್ದಾರೆ. ಆದರೆ, ರೈತರು ಹೆದರಬೇಕಿಲ್ಲ. ರಾಜ್ಯದಲ್ಲಿ ಲವ್ ಜಿಹಾದ್ ಮುಗಿದು ಲ್ಯಾಂಡ್ ಜಿಹಾದ್ ಬಂದಿದೆ. ಕರ್ನಾಟಕವೀಗ ಮತಾಂಧರಿಗೆ ಸ್ಲೀಪರ್ ಸೆಲ್ ಆಗಿದೆ ಎಂದು ಕಿಡಿಕಾರಿದ ಅವರು, ನೋಟಿಸ್ ನೀಡಿದ ಅಧಿಕಾರಿಗಳನ್ನು ಸರ್ಕಾರ ಒದ್ದು ಜೈಲಿಗೆ ಹಾಕಲಿ ಎಂದರು.
ಮುಸ್ಲಿಂ ಓಲೈಗೆಗಾಗಿ ಅಧಿಕಾರ
ಅಕ್ರಂಪಾಷಾ ಜಿಲ್ಲಾಧಿಕಾರಿಯಾಗಿರುವುದು ಮುಸ್ಲಿಂ ಓಲೈಕೆಗಾ?, ಅವರು ಇಡೀ ಜಿಲ್ಲೆಗೆ ಜಿಲ್ಲಾಽಕಾರಿಯೋ ಅಥವಾ ಒಂದು ಸಮುದಾಯಕ್ಕೋ ತಿಳಿಯುತ್ತಿಲ್ಲ. ಎಲ್ಲೆಲ್ಲಿ ಜಮೀನು ವಕ್‌ಗೆ ಸೇರ್ಪಡೆ ಆಗಿದೆ ಎಂಬುದರ ಬಗ್ಗೆ ನರೇಂದ್ರ ಮೋದಿ, ಅಮಿತ್ ಷಾ ಅವರಿಗೆ ಈಗಾಗಲೇ ಪಟ್ಟಿ ನೀಡಲಾಗಿದೆ. ತಪ್ಪು ಮಾಡುವ ಅಽಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮಾಜಿ ಸಂಸದ ಎಸ್.ಮುನಿಸ್ವಾಮಿ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಕೆ.ಎನ್.ವೇಣುಗೋಪಾಲ್, ಮಾಜಿ ಶಾಸಕರಾದ ವರ್ತೂರು ಆರ್. ಎಂ.ನಾರಾಯಣಸ್ವಾಮಿ, ಪ್ರಕಾಶ್, ಬಿ.ಪಿ.ವೆಂಕಟಮುನಿಯಪ್ಪ, ವೈ.ಸಂಪಂಗಿ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಿ.ವಿ.ಮಹೇಶ್, ಮಾಧ್ಯಮ ಪ್ರಮುಖï ಎನ್.ಎಸ್.ಪ್ರವೀಣ್‌ಗೌಡ, ಕೆಂಬೋಡಿ ನಾರಾಯಣಸ್ವಾಮಿ, ಮಾಗೇರಿ ನಾರಾಯಣಸ್ವಾಮಿ, ವೆಂಕಟೇಗೌಡ, ಸತ್ಯನಾರಾಯಣ ಇದ್ದರು.