ಮನೀಶ್​ ಸಿಸೋಡಿಯಾ ಸ್ವಯಂ ಕ್ಲೀನ್​ಚಿಟ್​: ಸಿಬಿಐ ವಾಪಸ್​

Sisodiaya
Published on

ನವದೆಹಲಿ: ವಿವಾದಾತ್ಮಕ ಅಬಕಾರಿ ನೀತಿಗೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಗಾಜಿಯಾಬಾದ್​ನ ಪಂಜಾಬ್​ ನ್ಯಾಷನಲ್​ ಬ್ಯಾಂಕ್​ (ಪಿಎನ್​ಬಿ) ಶಾಖೆಗೆ ಮಂಗಳವಾರ ತೆರಳಿ ದೆಹಲಿಯ ಉಪಮುಖ್ಯಮಂತ್ರಿ ಮನೀಶ್​ ಸಿಸೋಡಿಯಾ ಅವರ ಲಾಕರ್​ ಪರಿಶೀಲಿಸಿದರು.

ಆದರೆ ಅದರಲ್ಲಿ ಏನೂ ಸಿಗದೆ ವಾಪಸದರು. ಈ ಕುರಿತು ಪ್ರತಿಕ್ರಿಯೆ ನೀಡಿದ ಸಿಸೋಡಿಯಾ, ಇದು ತಮಗೆ ಸಿಕ್ಕ "ಕ್ಲೀನ್​ ಚಿಟ್​' ಎಂದು ಸಂತೋಷ ವ್ಯಕ್ತಪಡಿಸಿದರು. ತಮ್ಮ ಮನೆ ಮೇಲೆ ದಾಳಿ ಮಾಡಿದಾಗಲೂ ಏನೂ ದೊರೆತಿರಲಿಲ್ಲ. ಇದು ನಿದೋರ್ಷಿ ಎನ್ನುವುದನ್ನು ತೋರಿಸುತ್ತದೆ ಎಂದು ಹೇಳಿದರು. 2021&22ರ ಅಬಕಾರಿ ನೀತಿಯಲ್ಲಿ ಭ್ರಷ್ಟಾಚಾರ ಕುರಿತು ಸಿಬಿಐ ಪ್ರಕರಣ ದಾಖಲಿಸಿದ್ದು ಸಿಸೋಡಿಯಾ ಹಗರಣದ ಕೇಂದ್ರ ಬಿಂದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net