ಕಾವೇರಿ ನೀರು ಸಮಸ್ಯೆಗೆ ಇದೆ ಪರಿಹಾರ

MUNIYAPPA KH
Published on

ಸಿರಿಗೆರೆ: ಕಾವೇರಿ ಪ್ರಾಧಿಕಾರದ ಆದೇಶದಂತೆ ಪ್ರತಿ ವರ್ಷ 177 ಟಿಎಂಸಿ ಅಡಿ ನೀರನ್ನು ತಮಿಳುನಾಡಿಗೆ ಹರಿಸಬೇಕು ಎಂದು ಸಚಿವ ಕೆ.ಎಚ್.ಮುನಿಯಪ್ಪ ಹೇಳಿದರು.

ಗ್ರಾಮದ ಗುರುಶಾಂತೇಶ್ವರ ಭವನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶ್ರೀ ಶಿವಕುಮಾರ ಸ್ವಾಮೀಜಿ ಅವರ 31ನೇ ವರ್ಷದ ಶ್ರದ್ಧಾಂಜಲಿಯ 4ನೇ ದಿನದ ಕಾರ್ಯಕ್ರಮದ ಶನಿವಾರ ಮಾತನಾಡಿದರು.

ಕಳೆದ ವರ್ಷ 600 ಟಿಎಂಸಿ ಅಡಿ ನೀರು ವೃರ್ಥವಾಗಿ ಸಮುದ್ರ ಸೇರಿದೆ. ಹೆಚ್ಚುವರಿ ನೀರು ಸಂಗ್ರಹಕ್ಕೆ ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬದ್ದರಾಗಿದ್ದಾರೆ. ಮೇಕದಾಟು ಅಣೆಕಟ್ಟು ನಿರ್ಮಾಣವೇ ಕಾವೇರಿ ನದಿ ನೀರು ಸಮಸ್ಯೆ ಪರಿಹಾರವಾಗಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net