

Model : ಸೈಬರ್ ಸಿಟಿ ಗುರುಗ್ರಾಮ್‌ನ ಅತ್ಯಂತ ಜನನಿಬಿಡ ಸ್ಥಳ ರಾಜೀವ್ ಚೌಕ್‌ನಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. ಕ್ಯಾಬ್‌ಗಾಗಿ ಕಾಯುತ್ತಿದ್ದ ಮಾಡೆಲ್ ಮುಂದೆ ಹಗಲು ಹೊತ್ತಿನಲ್ಲೇ ಯುವಕನೊಬ್ಬ ಹಸ್ತಮೈಥುನ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.
ಯುವಕನ ಕೃತ್ಯವನ್ನು ಸಂತ್ರಸ್ತ ಮಾಡೆಲ್ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದ್ದು, ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಯಾವುದೇ ಕ್ರಮ ಕೈಗೊಳ್ಳದಿದ್ದಾಗ, ತನ್ನ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಸಂತ್ರಸ್ತೆ, ಯುವಕನ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ವಿಡಿಯೋದಲ್ಲಿ ತಾನು ಜೈಪುರದಿಂದ ಗುರುಗ್ರಾಮಕ್ಕೆ ವಾಪಸ್ಸಾಗಿ, ಮನೆಗೆ ಹೋಗಲೆಂದು ಕ್ಯಾಬ್‌ಗಾಗಿ ಕಾಯುವಾಗ ಈ ಘಟನೆ ನಡೆಯಿತು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.
ಆಗಸ್ಟ್ 3ರ ಬೆಳಗ್ಗೆ ಜೈಪುರದಿಂದ ಬಸ್ ಹತ್ತಿ ದೆಹಲಿ-ಜೈಪುರ ಹೆದ್ದಾರಿಯಲ್ಲಿರುವ ಗುರುಗ್ರಾಮದ ರಾಜೀವ್ ಚೌಕ್ ಅನ್ನು ಸಂತ್ರಸ್ತೆ ತಲುಪಿದ್ದಾರೆ. ಈ ವೇಳೆ ಮನೆಗೆ ಹೋಗಲು ಕ್ಯಾಬ್‌ಗಾಗಿ ಕಾಯುವಾಗ ಅದೇ ಸಮಯದಲ್ಲಿ, ಓರ್ವ ಯುವಕ ತನ್ನನ್ನು ನೋಡುತ್ತಾ ಹಸ್ತಮೈಥುನ ಮಾಡುತ್ತಿದ್ದುದನ್ನು ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಮೊದಲಿಗೆ ಅವನನ್ನು ನಿರ್ಲಕ್ಷಿಸಿದ್ದಾರೆ. ಆದರೆ, ಆತನ ಕೃತ್ಯ ಹೆಚ್ಚಾದ ಹಿನ್ನೆಲೆಯಲ್ಲಿ ವಿಡಿಯೋ ಮಾಡಬೇಕಾಯಿತು ಎಂದು ಸಂತ್ರಸ್ತೆ ಹೇಳಿದ್ದಾರೆ. ಘಟನೆ ವೇಳೆ ಆರೋಪಿ ಯುವಕ ಮುಖಕ್ಕೆ ಮಾಸ್ಕ್ ಧರಿಸಿದ್ದ. ತನ್ನ ಭುಜದಿಂದ ಒಂದು ಬ್ಯಾಗ್ ನೇತುಹಾಕಿ ತನ್ನ ಪ್ಯಾಂಟ್‌ನ ಜಿಪ್ ಅನ್ನು ತೆರೆದು ತನ್ನ ಮುಂದೆಯೇ ಹಸ್ತಮೈಥುನ ಮಾಡಲು ಪ್ರಾರಂಭಿಸಿದನು ಎಂದು ಸಂತ್ರಸ್ತೆ ಹೇಳಿದ್ದಾರೆ.
ನಾನು ಅವನನ್ನು ನೋಡಿ ಕಿರುಚಬೇಕಿತ್ತು ಅಥವಾ ಕಪಾಳಮೋಕ್ಷ ಮಾಡಬೇಕಿತ್ತು ಎಂದು ಜನರು ಹೇಳುತ್ತಾರೆ. ಆದರೆ, ಆ ಕ್ಷಣದಲ್ಲಿ ಮಹಿಳೆಯ ಮನಸ್ಸಿನಲ್ಲಿ ಏನಾಗುತ್ತದೆ ಎಂದು ಯಾರಿಗೂ ನಿಜವಾಗಿಯೂ ಅರ್ಥವಾಗುವುದಿಲ್ಲ. ನಾನು ಸುರಕ್ಷಿತವಾಗಿರಲು ಬಯಸಿದ್ದೆ ಎಂದು ಸಂತ್ರಸ್ತೆ ಹೇಳಿದ್ದಾರೆ. ಆದರೆ, ತನ್ನ ಸಂಕಷ್ಟ ಅಲ್ಲಿಗೆ ಮುಗಿಯಲಿಲ್ಲ. ಪೊಲೀಸರು ಮತ್ತು ಮಹಿಳಾ ಸಹಾಯವಾಣಿಯನ್ನು ಹಲವಾರು ಬಾರಿ ಸಂಪರ್ಕಿಸಿದರೂ, ತಕ್ಷಣದ ಸಹಾಯ ಸಿಗಲಿಲ್ಲ ಎಂದು ಆರೋಪ ಮಾಡಿದ್ದಾರೆ.
ಕೊನೆಗೆ ಪೊಲೀಸರನ್ನು ಸಂಪರ್ಕಿಸಲು ಸಾಧ್ಯವಾದಾಗ, ತಮ್ಮ ದೂರನ್ನು ಆನ್‌ಲೈನ್‌ನಲ್ಲಿ ನೋಂದಾಯಿಸಲು ನಿರಾಕರಿಸಿದರು. ನಾನು ಮನೆಗೆ ತಲುಪಿದ ನಂತರ, ಇಡೀ ಘಟನೆಯನ್ನು ಟ್ವೀಟ್ ಮಾಡಿ ಪೊಲೀಸರು, ಮಹಿಳಾ ಸಹಾಯವಾಣಿ ಮತ್ತು ಸರ್ಕಾರವನ್ನು ಟ್ಯಾಗ್ ಮಾಡಿದ್ದೇನೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಕೊನೆಗೆ ನಾನು ಪೊಲೀಸರನ್ನು ತಲುಪಲು ಯಶಸ್ವಿಯಾದಾಗ, ಅವರು ಎಫ್‌ಐಆರ್ ದಾಖಲಿಸಲು ಪೊಲೀಸ್ ಠಾಣೆಗೆ ಬರಬೇಕು ಎಂದು ಹೇಳಿದರು ಎಂದು ಸಂತ್ರಸ್ತೆ ಹೇಳಿದ್ದಾರೆ.
ಈ ಮಾಡೆಲ್ ಡಿಜಿಟಲ್ ಕಂಟೆಂಟ್ ಕ್ರಿಯೆಟರ್ ಆಗಿದ್ದು, ಇನ್‌ಸ್ಟಾಗ್ರಾಮ್‌ನಲ್ಲಿ 38,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ. ಸಿಸಿಟಿವಿ ದೃಶ್ಯಗಳ ಮೂಲಕ ಅಪರಾಧಿಯನ್ನು ಗುರುತಿಸಲು ಕೆಲಸ ಮಾಡುತ್ತಿದ್ದೇವೆ ಮತ್ತು ಶೀಘ್ರದಲ್ಲೇ ಆತನನ್ನು ಬಂಧಿಸುತ್ತೇವೆ ಎಂದು ಗುರುಗ್ರಾಮದ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)