ಕೋಸಲ್ಲಿ ಸಿಕ್ಕ ಹುಳದ ಮೇಲೆ ಪ್ರೀತಿ ಹುಟ್ಟಿದ ಈತ ಮಾಡಿದ್ದೇನು ಗೊತ್ತಾ?

hula
Published on

ಲಂಡನ್‌: ಸೊಪ್ಪು, ತರಕಾರಿಗಳನ್ನು ಮನೆಗೆ ತಂದಾಗ, ಅದರಲ್ಲಿ ಹುಳ ಕಾಣಿಸುವುದು ದೊಡ್ಡ ವಿಷಯವೇನಲ್ಲ. ಒಂದು ವೇಳೆ ಹುಳುಗಳನ್ನು ಕಂಡರೆ ಅದನ್ನು ಕಂಡು ಅಸಹ್ಯ ಪಟ್ಟುಕೊಂಡು ಡಸ್ಟ್‌ಬಿನ್‌ಗೆ ಹಾಕುವವರೇ ಎಲ್ಲರೂ.

ಆದರೆ ಇಲ್ಲೊಬ್ಬ ವ್ಯಕ್ತಿಯ ಕಥೆ ಮಾತ್ರ ಸ್ವಲ್ಪ ಡಿಫರೆಂಟ್‌ ಆಗಿದೆ. ಈತನ ಹೆಸರು ಸ್ಯಾಮ್ ಡರ್ಲಾಸ್ಟಾನ್. ಸೂಪರ್‌ ಮಾರ್ಕೆಟ್‌ನಿಂದ ಕೋಸನ್ನು ಖರೀದಿಸಿದ ಈತ ಸಾಮಾನ್ಯವಾಗಿ ಕೋಸಲ್ಲಿ ಹುಳ ಇದ್ದೇ ಇರುತ್ತದೆ. ಕೋಸನ್ನು ಕಟ್‌ ಮಾಡಲು ಹೋದಾಗ ಸ್ಯಾಮ್‌ಗೆ ಹುಳ ಕಾಣಿಸಿತು.

ಆದರೆ ಈ ಹುಳವನ್ನು ಕಂಡ ಸ್ಯಾಮ್‌ ಇತರರಂತೆ ಅಸಹ್ಯ ಪಟ್ಟುಕೊಳ್ಳಲಿಲ್ಲ, ಕೊಲ್ಲಲಿಲ್ಲ, ತೆಗೆದು ಡಸ್ಟ್‌ಬಿನ್‌ಗೂ ಹಾಕಲಿಲ್ಲ. ಬದಲಿಗೆ ಆತನಿಗೆ ಅದರ ಮೇಲೆ ಪ್ರೀತಿ ಹುಟ್ಟಿತು.

ಇದನ್ನೂ ಓದಿ: ಮೊಳಕೆ ಬಾರದ ಬೀಜ, ಚಿಂತೆಯಲ್ಲಿ ರೈತರು

ಅದಕ್ಕಾಗಿಯೇ ಆತ ಆ ಹುಳವನ್ನು ತೆಗೆದುಕೊಂಡು ಹೋಗಿ ಮನೆಯಲ್ಲಿರುವ ಗ್ಲಾಸ್‌ನಲ್ಲಿ ಬಿಟ್ಟ. ದಿನವೂ ಅದರ ಆರೈಕೆ ಮಾಡುತ್ತಿದ್ದ. ತನ್ನ ಮನೆಯ ಸಾಕುಪ್ರಾಣಿಗೆ ತೋರಿಸುವ ಪ್ರೀತಿಯನ್ನೇ ಅದಕ್ಕೂ ತೋರಿಸತೊಡಗಿದ. ಅದಕ್ಕೆ ಸೆಡ್ರಿಕ್ ಎಂದು ನಾಮಕರಣವನ್ನೂ ಮಾಡಿದ.

ದಿನಕಳೆದಂತೆ ಹುಳ ಈತ ಕೊಟ್ಟಿದ್ದನ್ನೆಲ್ಲಾ ತಿನ್ನುತ್ತ ಚೆನ್ನಾಗಿ ಬೆಳೆದು ಕೊನೆಗೆ ಚಿಟ್ಟೆಯಾಗಿ ಮಾರ್ಪಟ್ಟಿತು. ಈ ಹುಳುಗಳು ಚಿಟ್ಟೆಯಾಗಿ ಬದಲಾಗುವ ಎಲ್ಲ ಬೆಳವಣಿಗೆಯ ಹಂತಗಳನ್ನು ಸ್ಯಾಮ್‌ ವಿಡಿಯೋ ಮಾಡಿ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾನೆ.

ನಂತರ ಈ ವಿಷಯ ಕೋಸು ಕೊಟ್ಟ ಸೂಪರ್‌ ಮಾರ್ಕೆಟ್‌ನವರಿಗೂ ತಿಳಿಯಿತು. ತಾನು ಕೊಟ್ಟ ಕೋಸಿನಲ್ಲಿ ಹುಳ ಇರುವ ವಿಷಯ ತಿಳಿದು, ಆತನ ಕ್ಷಮೆ ಕೋರಿ ಹಣವನ್ನೂ ವಾಪಸ್‌ ಮಾಡಿದೆ.

ಆದರೆ ಈ ಹುಳು ಮಾತ್ರ ಸ್ಯಾಮ್‌ನ ಆರೈಕೆಯಿಂದ ಚಿಟ್ಟೆಯಾಗಿ ಪರಿವರ್ತನೆಗೊಂಡು ಆರಾಮಾಗಿ ಹಾರಾಟ ನಡೆಸುತ್ತಿದೆ. ಈತನ ಈ ಕೆಲಸ ಕಂಡು ಅನೇಕ ಟ್ವಿಟ್ಟಿಗರು ಶ್ಲಾಘನೆಗಳ ಮಹಾಪೂರವನ್ನೇ ಹರಿಸಿದ್ದಾರೆ. ಹಾಡಿ ಹೊಗಳಿದ್ದಾರೆ. (ಏಜೆನ್ಸೀಸ್‌)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net