ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್​ನಲ್ಲಿ ಪ್ರಕರಣ ದಾಖಲು

tejaswi
Published on

ಹೈದರಾಬಾದ್​: ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಮತ್ತು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹೈದರಾಬಾದ್​ನಲ್ಲಿ ಪ್ರಕರಣ ದಾಖಲಾಗಿದೆ. ಇತ್ತೀಚೆಗೆ ತೇಜಸ್ವಿ ಅವರು ಉಸ್ಮೇನಿಯಾ ವಿಶ್ವವಿದ್ಯಾಲಯದ ಮೇಲೆ ಅತಿಕ್ರಮಣ ಮಾಡಿದ್ದಾಗಿ ದೂರಿನಲ್ಲಿ ತಿಳಿಸಲಾಗಿದೆ.

ಬಿಜೆಪಿ ಪರ ಪ್ರಚಾರಕ್ಕೆ ಹೈದರಾಬಾದ್​ ತೆರಳಿದ್ದ ತೇಜಸ್ವಿ ಅವರು ತಮ್ಮ ಪಕ್ಷದ ಬೆಂಬಲಿಗರೊಂದಿಗೆ ಉಸ್ಮೇನಿಯಾ ವಿಶ್ವವಿದ್ಯಾಲಯಕ್ಕೆ ತೆರಳಿದ್ದರು. ಆದರೆ ವಿಶ್ವವಿದ್ಯಾಲಯದ ಪ್ರವೇಶದ್ವಾರದಲ್ಲಿ ಬೇಲಿ ಹಾಕಿ ಸಂಸದರನ್ನು ತಡೆಯಲಾಗಿತ್ತು. ತೇಜಸ್ವಿ ಮತ್ತು ಅವರ ಬೆಂಬಲಿಗರು ಬೇಲಿಯನ್ನು ತೆರವುಗೊಳಿಸಿ ವಿವಿ ಪ್ರವೇಶಿಸಿದ್ದರು.

ಸಂಸದರು ತಮ್ಮ ಅನುಮತಿ ಇಲ್ಲದೆಯೆ ಬೇಲಿ ತೆರವುಗೊಳಿಸಿ ವಿವಿಗೆ ನುಗ್ಗಿರುವುದಾಗಿ ವಿಶ್ವವಿದ್ಯಾಲಯ ದೂರಿದೆ. ತೇಜಸ್ವಿ ಸೂರ್ಯ ಮತ್ತು ಅವರ ಬೆಂಬಲಿಗರ ವಿರುದ್ಧ ದೂರು ದಾಖಲಿಸಿರುವುದಾಗಿ ವಿವಿ ನುಡಿದಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net