ಭಕ್ತರಿಗೆ ಮೂತ್ರ ಕುಡಿಸುತ್ತಿದ್ದ ಸ್ವಯಂ ಘೋಷಿತ ಬಾಬಾ ವಿರುದ್ಧ ಪ್ರಕರಣ ದಾಖಲು| baba

baba
Published on

ಮುಂಬೈ; ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿ ಸಂಜಯ್ ಪಗಾರೆಯೆಂಬ ಬಾಬಾ, ಆಧ್ಯಾತ್ಮಿಕತೆಯ ನೆಪದಲ್ಲಿ ಗ್ರಾಮಸ್ಥರಿಗೆ ಕ್ರೂರ ಆಚರಣೆಗಳನ್ನು ಮಾಡುತ್ತಿದ್ದ ಕಾರಣ ಆತನ ವಿರುದ್ಧ ಎಫ್‌ಐಆರ್‌ ದಾಖಲು ಮಾಡಿಕೊಳ್ಳಲಾಗಿದೆ.

ಕಷ್ಟ ಎಂದು ಹೇಳಿಕೊಂಡು ಬರುವ ಸಂತ್ರಸ್ತರಿಗೆ ಕೋಲುಗಳಿಂದ ಹೊಡೆಯಲಾಗುತ್ತಿತ್ತು. ಬೂಟುಗಳನ್ನು ಬಾಯಿಗೆ ಹಾಕಲಾಗುತ್ತಿತ್ತು. ಮರದ ಎಲೆಗಳನ್ನು ತಿನ್ನಲು ಹೇಳುತ್ತಿದ್ದ. ಜೊತೆಗೆ ಆತನ ಮೂತ್ರ ಕುಡಿಯುವಂತೆ ಹೇಳುತ್ತಿದ್ದ ಎನ್ನಲಾಗಿದೆ. ಈ ಬಾಬಾ ದೆವ್ವ ಬಿಡಿಸುವುದು, ಮದುವೆ ಮಾಡಿಸುವುದು, ಮಕ್ಕಳಾಗದ ದಂಪತಿಗಳಿಗೆ ಮಕ್ಕಳಾಗುವಂತೆ ಮಾಡುವುದಾಗಿ ಹೇಳಿದ್ದ. ಇದಕ್ಕಾಗಿ ಅಘೋರಿ ಪೂಜೆಗಳನ್ನು ಮಾಡುತ್ತಿದ್ದ. ಕಷ್ಟ ಎಂದು ಹೇಳಿಕೊಂಡ ಅವನ ಬಳಿ ಬರುವ ಜನರನ್ನು ಕ್ರೂರವಾಗಿ ನಡೆಸಿಕೊಳ್ಳುತ್ತಿದ್ದ ಎನ್ನಲಾಗಿದೆ.

(ಏಜೆನ್ಸೀಸ್)

ಈ ಸ್ವಯಂ ಘೋಷಿತ ಬಾಬಾ ಸುಮಾರು ಎರಡು ವರ್ಷಗಳಿಂದ ವೈಜಾಪುರ ತಹಸಿಲ್‌ನ ಶಿಯೂ‌ರ್ ಗ್ರಾಮದ ದೇವಸ್ಥಾನದಲ್ಲಿ ಈ ಮೌಡ್ಯ ಮತ್ತು ಹಿಂಸೆಯನ್ನು ನಡೆಯುತ್ತಿದ್ದಾನೆ ಎಂದು ವರದಿಯಾಗಿದೆ. ಮೌಡ್ಯ ವಿರೋಧಿ ಸಂಘಟನೆಯ ಕಾರ್ಯಕರ್ತರು ಗುಪ್ತ ಕ್ಯಾಮೆರಾಗಳನ್ನು ಬಳಸಿ ಈತನ ಈ ಕ್ರೂರ ಕೃತ್ಯವನ್ನು ಚಿತ್ರೀಕರಿಸಿದ್ದಾರೆ. ಸದ್ಯ ಮೌಡ್ಯ ವಿರೋಧಿ ಸಂಘಟನೆಯ ಕಾರ್ಯಕರ್ತರ ದೂರಿನ ಆಧಾರದಲ್ಲಿ ಭಾರತೀಯ ದಂಡ ಸಂಹಿತೆಯಡಿ ಪ್ರಕರಣ ದಾಖಲಿಸಲಾಗಿದೆ. ವಂಚನೆ, ಹಲ್ಲೆ ಮತ್ತು ಮೌಡ್ಯ ಪ್ರಚಾರಕ್ಕಾಗಿ ಸಂಜಯ್ ಪಗಾರೆ ವಿರುದ್ಧ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net