

ಬಾಗಲಕೋಟೆ: ಬಹುಭಾಷಾ ನಟ ಪ್ರಕಾಶ್ ರಾಜ್ ಚಂದ್ರಯಾನ 3 ಮಿಷನ್ ಕುರಿತು ಮಾಡಿದ ಟ್ವೀಟ್ಗೆ ಭಾರೀ ವಿರೋಧಗಳು ವ್ಯಕ್ತವಾಗಿತ್ತು. ಇದೀಗ ನಟನ ವಿರುದ್ಧ ಹಿಂದೂ ಸಂಘಟನೆಯ ಮುಖಂಡ ನಂದು ಗಾಯಕವಾಡ ಹಾಗೂ ಇತರರು ಬಾಗಲಕೋಟೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಮೂಲಕ ಶೀಘ್ರವೇ ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಆಗಸ್ಟ್ 20 ರಂದು, ಪ್ರಕಾಶ್ ರಾಜ್ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ "ಇದೀಗ ಬಂದ ಸುದ್ದಿ, ಚಂದ್ರನಿಂದ ಬಂದ ಮೊದಲ ಚಿತ್ರ" ಎಂದು ಚಾಯ್‌ವಾಲಾ ಫೋಟೋ ಪೋಸ್ಟ್ ಮಾಡುವ ಮೂಲಕ ವ್ಯಂಗ್ಯವಾಡಿದ್ದರು. ಸದ್ಯ ಈ ವಿಚಾರವಾಗಿ ಭುಗಿಲೆದ್ದ ಆಕ್ರೋಶದ ಬೆನ್ನಲ್ಲೇ ಇದೀಗ ನಟನ ವಿರುದ್ಧ ದೂರು ದಾಖಲಾಗಿದೆ. ಭಾರತದ ಮಹತ್ವಾಕಾಂಕ್ಷೆಯ ಚಂದ್ರನ ಕಾರ್ಯಾಚರಣೆಯನ್ನು ಅಪಹಾಸ್ಯ ಮಾಡಿದ್ದಾರೆ ಎಂದು ಹಲವರು ತೀವ್ರವಾಗಿ ಟ್ವೀಟ್ನ ಖಂಡಿಸಿದ್ದಾರೆ.
ತಮ್ಮ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾದ ಹಿನ್ನಲೆ ಪ್ರತಿಕ್ರಿಯೆ ನೀಡಿದ ಪ್ರಕಾಶ್ ರಾಜ್, "ಹೇಟ್ ಸೀಸ್ ಓನ್ಲಿ ಹೇಟ್..ನಾನು ಆರ್ಮ್‌ಸ್ಟ್ರಾಂಗ್ ಕಾಲದ ಜೋಕ್ ಅನ್ನು ಉಲ್ಲೇಖಿಸುತ್ತಿದ್ದೆ. ನಮ್ಮ ಕೇರಳದ ಚಾಯ್‌ವಾಲಾವನ್ನು ಸಂಭ್ರಮಿಸುತ್ತಿದೆ. ಆದ್ರೆ, ಟ್ರೋಲಿಗರು ಯಾವ ಚಾಯ್‌ವಾಲಾ ಅನ್ನು ನೋಡಿದ್ದಾರೆ? ನಿಮಗೆ ಜೋಕ್ ಸಿಗದಿದ್ದರೆ, ಆ ಜೋಕ್ ನಿಮ್ಮ ಮೇಲಿದೆ. ಗ್ರೋ ಅಪ್" ಎಂದು ರಿ-ಟ್ವೀಟ್ ಮಾಡುವ ಮೂಲಕ ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.