ಚಳಗೇರಿ ಟೋಲ್​ನಾಕಾದಲ್ಲಿ ಉಚಿತವಾಗಿ ಬಿಡಿ; ಮನವಿ ಸಲ್ಲಿಕೆ

17-RNR-04
Published on

ರಾಣೆಬೆನ್ನೂರ: ತಾಲೂಕಿನ ಚಳಗೇರಿ ಟೋಲ್​ನಾಕಾದಲ್ಲಿ ಸ್ಥಳಿಯ ವಾಹನಗಳಿಗೆ ಉಚಿತವಾಗಿ ಬಿಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಟಕದ ವತಿಯಿಂದ ಟೋಲ್​ನಾಕಾ ವ್ಯವಸ್ಥಾಪಕ ಕೇಶವರೆಡ್ಡಿ ಅವರಿಗೆ ಮನವಿ ಸಲ್ಲಿಸಲಾಯಿತು.

ಸಂಟನೆ ಅಧ್ಯಕ್ಷ ಕೋಟ್ರೇಶ ಗುತ್ತೂರ ಮಾತನಾಡಿ, ಸ್ಥಳಿಯ ನಿವಾಸಿಗಳು ಹೆದ್ಧಾರಿ ಮೂಲಕ ಓಡಾಡಬೇಕಾದರೆ ಚಳಗೇರಿ ಟೋಲ್​ನಾಕಾದಲ್ಲಿ ಹಣ ಪಾವತಿ ಮಾಡಬೇಕಿದೆ. ಈ ಹಿಂದಿನ ವ್ಯವಸ್ಥಾಪಕರು ಉಚಿತವಾಗಿ ಬಿಡುತ್ತಿದ್ದರು. ಆದರೆ, ಈಗ ಹಣ ವಸೂಲಿ ಮಾಡಲಾಗುತ್ತಿದೆ.

ಸ್ಥಳಿಯರಿಗೆ ಈ ರೀತಿ ಮಾಡಿದರೆ ಸರಿಯಲ್ಲ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸೂಕ್ತ ಕ್ರಮ ಕೈಗೊಂಡು ಸ್ಥಳಿಯ ವಾಹನಗಳಿಗೆ ಉಚಿತವಾಗಿ ಬಿಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.

ಪ್ರಮುಖರಾದ ಪುಟ್ಟಪ್ಪ ಕವಲೆತ್ತು, ಮಂಜಣ್ಣ ಬೇವಿನಮರದ, ಹನುಮಂತಪ್ಪ ಮೇಡ್ಲೇರಿ, ಅನೀಲ ಹೆಗ್ಗಪ್ಪನವರ, ಬಿ.ಪಿ. ಚಂದ್ರಶೇಖರ, ರಾಜೇಶ ಹರಿಹರ ಮತ್ತಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net