ಆಟಿಕೆಗಳಂತೆ ಸಮುದ್ರಕ್ಕೆ ಕೊಚ್ಚಿಹೋದ ಕಾರುಗಳು: ಮೆಕ್ಸಿಕೋದಲ್ಲಿ 'ವ್ಯಾನ್ಸ್' ಅಬ್ಬರ | Mexico Floods

Mexico Flash Floods
ಮೆಕ್ಸಿಕೋದಲ್ಲಿ ವ್ಯಾನ್ಸ್ ಚಂಡಮಾರುತದ ಅಟ್ಟಹಾಸಕ್ಕೆ ಕೊಚ್ಚಿಹೋದ ಕಾರುಗಳು
Published on: 
Summary

ಮೆಕ್ಸಿಕೋದ ಲಾಸ್ ಕಾಬೊಸ್‌ನಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹ

'ವ್ಯಾನ್ಸ್' ಚಂಡಮಾರುತದಿಂದಾಗಿ ಕೇವಲ 1 ಗಂಟೆಯಲ್ಲಿ 138 ಮಿಲಿಮೀಟರ್ ಮಳೆ

ಕೋಸ್ಟಾ ಅಜುಲ್ ಬೀಚ್ ಮೂಲಕ ಸಮುದ್ರಕ್ಕೆ ಕೊಚ್ಚಿಹೋದ ಸಾಲು ಸಾಲು ಕಾರುಗಳು

Mexico Flash Floods: ವಿಶ್ವಪ್ರಸಿದ್ಧ ಪ್ರವಾಸಿ ತಾಣವಾದ ಮೆಕ್ಸಿಕೋದ ಲಾಸ್ ಕಾಬೊಸ್ (Los Cabos) ಪ್ರದೇಶದಲ್ಲಿ ಭೀಕರ ದಿಢೀರ್ ಪ್ರವಾಹ ಉಂಟಾಗಿದ್ದು, ಸಾಲು ಸಾಲು ವಾಹನಗಳು ಪ್ರವಾಹದ ರಭಸಕ್ಕೆ ನದಿಯಂತೆ ಹರಿದು ಕೋಸ್ಟಾ ಅಜುಲ್ ಬೀಚ್ ಮೂಲಕ ಸಮುದ್ರಕ್ಕೆ ಕೊಚ್ಚಿಹೋಗಿರುವ ಆಘಾತಕಾರಿ ಘಟನೆ ನಡೆದಿದೆ.

ಬಾಹಾ ಕ್ಯಾಲಿಫೋರ್ನಿಯಾ ಸುರ್ ಪ್ರಾಂತ್ಯದ ದಕ್ಷಿಣ ತುದಿಯಲ್ಲಿರುವ ಸ್ಯಾನ್ ಜೋಸ್ ಡೆಲ್ ಕಾಬೊ ಮತ್ತು ಲಾಸ್ ಕಾಬೊಸ್ ಪ್ರದೇಶಗಳಲ್ಲಿ ಅಕ್ಟೋಬರ್ 30ರ ಶುಕ್ರವಾರದಂದು ಈ ದುರಂತ ಸಂಭವಿಸಿದೆ.

ಆಟಿಕೆಗಳಂತೆ ತೇಲಿ ಹೋದ ವಾಹನಗಳು

ವ್ಯಾನ್ಸ್' ಉಷ್ಣವಲಯದ ಚಂಡಮಾರುತದ ಕಾರಣದಿಂದಾಗಿ ಕೇವಲ ಒಂದು ಗಂಟೆಯಲ್ಲೇ ಸುಮಾರು 138 ಮಿಲಿಮೀಟರ್ ನಷ್ಟು ದಾಖಲೆಯ ಮಳೆ ಸುರಿದು ಅನಾಹುತ ಸೃಷ್ಟಿಸಿದೆ. ಕ್ಷಣಾರ್ಧದಲ್ಲಿ ನದಿಗಳಂತೆ ಹರಿದ ಪ್ರವಾಹಕ್ಕೆ ರಸ್ತೆಗಳೆಲ್ಲ ಜಲಾವೃತಗೊಂಡವು. ನೀರಿನ ಪ್ರಚಂಡ ರಭಸಕ್ಕೆ ರಸ್ತೆ ಬದಿಯಲ್ಲಿದ್ದ ಕಾರು ಹಾಗೂ ಮೋಟಾರ್ ಬೈಕ್‌ಗಳು ಆಟಿಕೆಗಳಂತೆ ತೇಲುತ್ತಾ, ಕೋಸ್ಟಾ ಅಜುಲ್ ಬೀಚ್ ಮೂಲಕ ನೇರವಾಗಿ ಸಮುದ್ರ ಸೇರಿದವು.

ಶಾಲಾ-ಕಾಲೇಜುಗಳಿಗೆ ರಜೆ

ವಿಶ್ವಪ್ರಸಿದ್ಧ ಪ್ರವಾಸಿ ತಾಣ ಲಾಸ್ ಕಾಬೊಸ್‌ನಲ್ಲಿ ಸಂಭವಿಸಿದ ಭೀಕರ ದಿಢೀರ್ ಪ್ರವಾಹಕ್ಕೆ ಸಾಲು ಸಾಲು ವಾಹನಗಳು ಕೋಸ್ಟಾ ಅಜುಲ್ ಬೀಚ್ ಮೂಲಕ ನೇರವಾಗಿ ಸಮುದ್ರಕ್ಕೆ ಕೊಚ್ಚಿಹೋಗಿವೆ.

ಇದನ್ನೂ ಓದಿ: ಆಂಬುಲೆನ್ಸ್ ಬಾರದ ರಸ್ತೆ.. ಜೀವನ್ಮರಣ ಹೋರಾಟ: ಗರ್ಭಿಣಿಯನ್ನು 3 ಕಿ.ಮೀ ಹೊತ್ತೊಯ್ದ ಗ್ರಾಮಸ್ಥರು | Pregnant woman stretcher

ಇನ್ನು, ಮುನ್ನೆಚ್ಚರಿಕೆಯಾಗಿ ಸರ್ಕಾರಿ ಆಸ್ಪತ್ರೆಯಿಂದ 350 ಜನರನ್ನು ಸ್ಥಳಾಂತರಿಸಲಾಗಿದ್ದು, ಶಾಲಾ-ಕಾಲೇಜುಗಳಿಗೆ ರಜೆ ನೀಡಲಾಗಿದೆ. ಅದೃಷ್ಟವಶಾತ್ ಈ ದುರಂತದಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.