ಮಾಲೀಕರ ಚಿನ್ನ ಕದ್ದ ಕೇರ್ ಟೇಕರ್ ಸೆರೆ

Arrest Kaidhi
Published on

ಬೆಂಗಳೂರು: ವೃದ್ಧೆಯ ಆರೈಕೆಗೆ ಬಂದಿದ್ದ ಕೇರ್ ಟೇಕರ್, ಮಾಲೀಕರ ಚಿನ್ನಾಭರಣ ಕದ್ದು ಪೊಲೀಸರ ಬಂಧನಕ್ಕೆ ಒಳಗಾಗಿದ್ದಾರೆ.

ಸಿ.ಕೆ.ಪಾಳ್ಯ ನಿವಾಸಿ ಸೋನಿಯಾ (25) ಬಂಧಿತ ಕೇರ್ ಟೇಕರ್. ಅಂಜನಾದ್ರಿ ಲೇಔಟ್‌ನ ಅಪಾರ್ಟ್‌ಮೆಂಟ್‌ನಲ್ಲಿ ನೆಲೆಸಿದ್ದ ಮಹಿಳೆಯೊಬ್ಬರು ತಮ್ಮ ಅತ್ತೆಯ ಆರೈಕೆಗಾಗಿ ಏಜೆನ್ಸಿ ಮೂಲಕ ಸೋನಿಯಾಳನ್ನು ನೇಮಕ ಮಾಡಿಕೊಂಡಿದ್ದರು. ಈ ವೇಳೆ ಕಳವು ಮಾಡಿದ್ದ 108 ಗ್ರಾಂ ಭರಣ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಕ್ಟೋಬರ್ 10ರಂದು ಮನೆ ಮಾಲೀಕರು ದಸರ ಹಿನ್ನೆಲೆಯಲ್ಲಿ ಆನಂತಪದ್ಮನಾಭ ದೇವರ ವ್ರತ ಮಾಡಿದ್ದ ಹಿನ್ನೆಲೆಯಲ್ಲಿ ಚಿನ್ನಾಭರಣ ಬಿಚ್ಚಿ ರೂಮ್‌ನಲ್ಲಿ ಇಟ್ಟಿದ್ದರು. ಈ ಸಮಯವನ್ನು ದುರ್ಬಳಕ್ಕೆ ಮಾಡಿಕೊಂಡ ಸೋನಿಯಾ, ಮಾಲೀಕರು ಇಲ್ಲದೆ ಇದ್ದಾಗ ಚಿನ್ನಾಭರಣ ಕಳವು ಮಾಡಿ ಆರ್‌ಬಿಐ ಲೇಔಟ್‌ನಲ್ಲಿನ ಚಿನ್ನದಂಗಡಿಯಲ್ಲಿ ಗಿರವಿ ಇಟ್ಟು ಹಣ ಪಡೆದಿದ್ದಳು.

ವ್ರತ ಮುಗಿದ ಮೇಲೆ ಮನೆ ಮಾಲೀಕರು ಚಿನ್ನಾಭರಣ ನೋಡಿದಾಗ ಕಳವಾಗಿರುವುದು ಬೆಳಕಿಗೆ ಬಂದಿದೆ. ಕೇರ್ ಟೇಕರ್ ಮೇಲೆ ಅನುಮಾನ ಬಂದು ಮನೆ ಮಾಲೀಕರು ದೂರು ಸಲ್ಲಿಸಿದಾಗ ಕೋಣನಕುಂಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯಾಂಶ ಹೊರಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net