ಆರೈಕೆದಾರರ ಪಾತ್ರ ಮಹತ್ತರ: ನ್ಯಾಯಾಧೀಶ ಸಂತೋಷ್

Caregiver's Day
ಶಿವಮೊಗ್ಗದ ಶ್ರೀ ಗಾನಯೋಗಿ ಪಂಚಾಕ್ಷರಿ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ವಿಶ್ವ ಆರೈಕೆದಾರರ ದಿನ ಆಚರಿಸಲಾಯಿತು. ಎಂ.ಎಸ್.ಸಂತೋಷ್, ಡಾ. ಎಚ್.ಎಲ್.ಪ್ರಮೋದ್, ಶಶಿರೇಖಾ ಇತರರಿದ್ದರು.
Published on

ಶಿವಮೊಗ್ಗ: ಅಂಗವಿಕಲರಿಗೆ ದೈಹಿಕವಾಗಿ, ಮಾನಸಿಕವಾಗಿ ಸದೃಢರನ್ನಾಗಿಸುವಲ್ಲಿ ಆರೈಕೆದಾರರ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್ ಹೇಳಿದರು.

ನಗರದ ಸಾಗರ ರಸ್ತೆಯ ಶ್ರೀ ಗಾನಯೋಗಿ ಪಂಚಾಕ್ಷರಿ ಸೇವಾ ಟ್ರಸ್ಟ್ ಸಭಾಂಗಣದಲ್ಲಿ ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆಯಿಂದ ಮಂಗಳವಾರ ಆಯೋಜಿಸಿದ್ದ ವಿಶ್ವ ಆರೈಕೆದಾರರ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಅಂಗವಿಕಲರ ಬದುಕು, ಅವರ ಸಾಮರ್ಥ್ಯ ಆರೋಗ್ಯವಂತರಿಗೆ ಕೂಡ ಸ್ಪೂರ್ತಿದಾಯಕ ಎಂದು ತಿಳಿಸಿದರು.

ಮಾನಸಿಕ ತಜ್ಞ ಡಾ. ಎಚ್.ಎಲ್.ಪ್ರಮೋದ್ ಮಾತನಾಡಿ, 21 ವಿಕಲತೆಗಳ ಸ್ವರೂಪದ ಬಗ್ಗೆ ಎಂಆರ್‌ಡಬ್ಲುೃ, ವಿಆರ್‌ಡಬ್ಲುೃ ಹಾಗೂ ವಿಆರ್‌ಡಬ್ಲುೃ ಆರೈಕೆದಾರರಿಗೆ ಮಾಹಿತಿ ನೀಡಿದರು. ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಶಶಿರೇಖಾ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net