VIDEO | ಚಾಲಕನಿಲ್ಲದೆ ಚಲಿಸಿದ ಕಾರು!; ಅನುಮಾನಕ್ಕೆ ಸಾಕ್ಷಿಯಾಯ್ತು ಈ ದೃಶ್ಯ

Untitled design (39)
Published on

ನವದೆಹಲಿ: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುವ ವಿಡಿಯೋಗಳು ನೆಟ್ಟಿಗರನ್ನು ಬಹಳ ವೇಗವಾಗಿ ತಲುಪುವ ಮೂಲಕ ಕೆಲವೇ ನಿಮಿಷಗಳಲ್ಲಿ ಭಾರೀ ವೈರಲ್​ ಆಗುತ್ತದೆ. ಕೆಲವು ಘಟನೆಗಳ ದೃಶ್ಯಗಳು ನೋಡುಗರಲ್ಲಿ ಸಾಕಷ್ಟು ಗೊಂದಲ, ಅನುಮಾನ ಮತ್ತು ಚರ್ಚೆಗಳನ್ನು ಹುಟ್ಟುಹಾಕುತ್ತದೆ. ಆ ಸಾಲಿಗೆ ಈ ವಿಡಿಯೋ ಕೂಡ ಸೇರ್ಪಡೆಗೊಂಡಿದೆ ಎನ್ನಬಹುದು.

ದೃಶ್ಯದಲ್ಲಿ ರಸ್ತೆಯ ಬದಿ ಬಿಳಿ ಬಲೀನೋ ಕಾರು ನಿಂತಿದೆ. ಈ ಕಾರು ನೋಡ ನೋಡುತ್ತಿದ್ದಂತೆ ಮಂದಗತಿಯಲ್ಲಿ ರಸ್ತೆಯ ಬಲ ಭಾಗದಿಂದ ಎಡಭಾಗಕ್ಕೆ ಸಾಗುವುದನ್ನು ವಿಡಿಯೋದಲ್ಲಿ ನೋಡಬಹುದು. ದೃಶ್ಯ ಕಂಡಾಗ ಚಾಲಕರೊಬ್ಬರು ಕಾರನ್ನು ನಿಧಾನವಾಗಿ ತಿರುಗಿಸುತ್ತಿದ್ದಾರೆ ಎಂದು ಭಾಸವಾಗುತ್ತದೆ. ಆದ್ರೆ, ಅಚ್ಚರಿ ಎಂದರೆ ಕಾರು ತನ್ನಷ್ಟಕ್ಕೆ ತಾನೇ ಚಾಲನೆಯಾಗಿದೆ!

ತಾನು ನಿಲ್ಲಿಸಿದ ಕಾರು ರಸ್ತೆಯ ಮಧ್ಯೆ ಚಲಿಸುತ್ತಿರುವುದನ್ನು ಕಂಡ ಚಾಲಕ, ಗಾಬರಿಯಿಂದ ಓಡಿಬಂದು ಕಾರಿನೊಳಗೆ ಕುಳಿತು, ತಕ್ಷಣವೇ ಕಾರನ್ನು ನಿಲ್ಲಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ನಿಬ್ಬೆರಗಾಗಿದ್ದು, ಕಾರನ್ನು ಚಾಲಕನೇ ಒಳಗೆ ಕುಳಿತು ಚಲಾಯಿಸಿದಂತೆ ಕಾಣಿಸಿದೆ. ಆದ್ರೆ, ಇದು ನಿಜವಲ್ವಾ? ಎಂಬ ಹತ್ತು ಹಲವು ಪ್ರಶ್ನೆಗಳನ್ನು ತಮ್ಮಲ್ಲೇ ತಾವು ಕೇಳಿಕೊಳ್ಳುವಂತೆ ಮಾಡಿದೆ. ಸದ್ಯ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net