ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಡಿಕ್ಕಿಯಾದ ಕಾರು; ಬಾಲಕ ಸಾವು, ಇನ್ನಿಬ್ಬರಿಗೆ ಗಂಭೀರ ಗಾಯ

Accident 2 nov
Published on

ಪುತ್ತೂರು: ಕೇರಳ ರಿಜಿಸ್ಟ್ರೇಶನ್​ ಇರುವ ಕಾರು ಪುತ್ತೂರಿನ ದರ್ಭೆ ಬೈಪಾಸ್​ ಬಳಿ ಪಾದಚಾರಿಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ವರ್ಷದ ಬಾಲಕ ಮೃತಪಟ್ಟಿದ್ದಾನೆ.

ಈ ಕಾರು ರಸ್ತೆ ಪಕ್ಕದಲ್ಲಿ ಹೋಗುತ್ತಿದ್ದ ಮಹಿಳೆ ಹಾಗೂ ಇಬ್ಬರು ಮಕ್ಕಳಿಗೆ ಡಿಕ್ಕಿ ಹೊಡೆದಿದೆ. ಗಾಯಗೊಂಡ ಮೂವರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರಲ್ಲಿ ಆರು ವರ್ಷದ ಮಗು ಸಾವನ್ನಪ್ಪಿದ್ದು, ಇನ್ನೊಂದು ಮಗು ಕೂಡ ಗಂಭೀರವಾಗಿ ಗಾಯಗೊಂಡಿದೆ. ಮಹಿಳೆಗೆ ಪುತ್ತೂರಿನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದ್ದು, ಗಂಭೀರವಾಗಿ ಗಾಯಗೊಂಡಿರುವ ಇನ್ನೊಂದು ಮಗುವನ್ನು ಮಂಗಳೂರಿಗೆ ಕರೆದುಕೊಂಡುಹೋಗಲಾಗುತ್ತಿದೆ. ಇದನ್ನೂ ಓದಿ: ಕಳೆದ 10 ತಿಂಗಳಲ್ಲಿ ನಡೆದ ಎನ್​ಕೌಂಟರ್, ಉಗ್ರರ ಹತ್ಯೆಯ ಅಂಕಿ-ಅಂಶ ಇಲ್ಲಿದೆ…

ಸ್ವಿಫ್ಟ್​ ಕಾರು (ಕೆಎಲ್‌ 14ಆರ್‌ 5717) ಮಂಗಳೂರಿನಿಂದ ಸುಳ್ಯದ ಕಡೆಗೆ ಹೋಗುತ್ತಿತ್ತು. ದರ್ಭೆ ಬೈಪಾಸ್​ ಬಳಿ ಈ ಮೂವರಿಗೆ ಡಿಕ್ಕಿ ಹೊಡೆದ ಬಳಿಕ ಎದುರಿನಲ್ಲಿದ್ದ ಎಕ್ಸ್‌ ಕ್ರಾಸ್‌ (ಕೆಎ3ಎನ್‌ ಎಕ್ಸ್‌ 5100) ಕಾರಿಗೂ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎಕ್ಸ್‌ ಕ್ರಾಸ್‌ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ.

ಸ್ಥಳಕ್ಕೆ ಪುತ್ತೂರು ನಗರ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಮೃತ ಬಾಲಕ ಪುತ್ತೂರಿನ ಮಾಜಿ ಕೌನ್ಸಿಲರ್ ಒಬ್ಬರ ಸಂಬಂಧಿ ಎಂದು ಪೊಲೀಸರು ವಿಜಯವಾಣಿಗೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net