ರೀಲ್ಸ್‌ ಹುಚ್ಚಿಗಾಗಿ ಸ್ಟಂಟ್‌ ಮಾಡಲು ಹೋಗಿ 300 ಅಡಿ ಆಳದ ಕಣಿವೆಗೆ ಬಿದ್ದ ಕಾರು; ಚಾಲಕನ ಸ್ಥಿತಿ ಗಂಭೀರ..! Car Stunt

Car Stunt
Published on

Car Stunt: ಇನ್‌ಸ್ಟಾಗ್ರಾಮ್ ರೀಲ್ಸ್‌ಗಾಗಿ ಕಾರು ಚಾಲಕನೊಬ್ಬ ಸ್ಟಂಟ್‌ ಮಾಡಲು ಹೋಗಿ ಕಾರು ಸಮೇತ 300 ಅಡಿ ಆಳದ ಕಣಿವೆಗೆ ಉರುಳಿದ ಘಟನೆ ಸತಾರದ ಪಟಾನ್ ತಾಲೂಕಿನಲ್ಲಿ ನಡೆದಿದೆ.

ಬುಧವಾರ ಸಂಜೆ 4 ಗಂಟೆಗೆ ಸದಾವಾಗಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಚಾಲಕನನ್ನು ಸಾಹಿಲ್ ಜಾಧವ್ (20) ಎಂದು ಗುರುತಿಸಲಾಗಿದ್ದು, ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿಡಿಯೋ

ಘಟನೆಯ ವಿಡಿಯೋವೊಂದು ಇದೀಗ ವೈರಲ್‌ ಆಗಿದೆ. ಸಾಹಸ ಪ್ರದರ್ಶನದ ನಡುವೆ ಕಾರು ನಿಯಂತ್ರಣ ಕಳೆದುಕೊಂಡು ಇದ್ದಕ್ಕಿದ್ದಂತೆ ಕಣಿವೆಗೆ ಬೀಳುತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಘಟನೆ ನಡೆದ ಈ ಪ್ರದೇಶವನ್ನು 'ಟೇಬಲ್ ಪಾಯಿಂಟ್' ಎಂದು ಕರೆಯಲಾಗುತ್ತದೆ, ಇದು ಪ್ರವಾಸಿಗರಲ್ಲಿ ಜನಪ್ರಿಯವಾಗಿದೆ, ಅಪಘಾತದ ವಿಡಿಯೋ ವೈರಲ್ ಆದ ನಂತರ, ಸ್ಥಳೀಯರು ತಕ್ಷಣದ ಸುರಕ್ಷತಾ ಕ್ರಮಗಳು ಮತ್ತು ರೇಲಿಂಗ್‌ಗಳನ್ನು ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net