ದೆಹಲಿ ಕಾರು ಸ್ಫೋಟ ದುರಂತ: i20 ಕಾರಿನ ಮೂಲ ಮಾಲೀಕ ಮೊಹಮ್ಮದ್ ಸಲ್ಮಾನ್ ಬಂಧನ! | Car explosion

Bbau - 2025-11-11T070647.401
Published on

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪುಕೋಟೆಯ ಮೆಟ್ರೋ ನಿಲ್ದಾಣದ ಬಳಿ ಸೋಮವಾರ(ನ.10) ಸಂಜೆ 6.30ರ ಸುಮಾರಿಗೆ ನಡೆದ ಕಾರು ಸ್ಫೋಟದ(Car explosion) ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಕಾರು ಹರಿಯಾಣದ ಗುರುಗ್ರಾಮ್ ಪೊಲೀಸರು HR26 CE 7674 ನಂಬರ್ ಪ್ಲೇಟ್ ಹೊಂದಿರುವ i20 ಕಾರಿನ ಮೂಲ ಮಾಲೀಕ ಮೊಹಮ್ಮದ್ ಸಲ್ಮಾನ್ ಬಂಧನವನ್ನು ದೃಢಪಡಿಸಿದರು.

ಕೆಲವು ನಿಮಿಷಗಳ ಮೊದಲು ಹರಿಯಾಣದ ಗುರುಗ್ರಾಮ್ ಪೊಲೀಸರು HR26 CE 7674 ನಂಬರ್ ಪ್ಲೇಟ್ ಹೊಂದಿರುವ i20 ಕಾರಿನ ಮೂಲ ಮಾಲೀಕ ಮೊಹಮ್ಮದ್ ಸಲ್ಮಾನ್ ಬಂಧನವನ್ನು ದೃಢಪಡಿಸಿದರು. ಆದರೆ, ಸಲ್ಮಾನ್ ಪೊಲೀಸರಿಗೆ ಕಾರನ್ನು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದ ತಾರಿಕ್ ಎಂಬ ವ್ಯಕ್ತಿಗೆ ಮಾರಾಟ ಮಾಡಿರುವುದಾಗಿ ಹೇಳಿದ್ದರು. ತಾರಿಕ್ ಕಾರನ್ನು ಮೂರನೇ ವ್ಯಕ್ತಿಗೆ ಮರುಮಾರಾಟ ಮಾಡಿದನೇ ಎಂಬುದು ಈ ಹಂತದಲ್ಲಿ ಸ್ಪಷ್ಟವಾಗಿಲ್ಲ.

ಘಟನೆಯ ಹಿನ್ನೆಲೆ

ಕೆಂಪುಕೋಟೆಯ ಮೆಟ್ರೋ ಸ್ಟೇಷನ್ ಬಳಿ ಸಂಜೆ 6.30ರ ಸುಮಾರಿಗೆ ಕಾರೊಂದು ಸ್ಫೋಟಗೊಂಡಿದ್ದು, ಪಕ್ಕದಲ್ಲಿ 7ರಿಂದ 8 ಕಾರುಗಳು ಬೆಂಕಿಗಾಹುತಿಯಾಗಿವೆ. ಘಟನೆಯಲ್ಲಿ 8 ಮಂದಿ ಮೃತಪಟ್ಟಿದ್ದು, 30ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.

ಮೆಟ್ರೋ ನಿಲ್ದಾಣದ ಗೇಟ್ ಸಂಖ್ಯೆ 1 ರ ಬಳಿ ಕಾರಿನಲ್ಲಿ ಸ್ಫೋಟ ಸಂಭವಿಸಿದೆ. ನಂತರ ಪಕ್ಕದಲ್ಲಿದ್ದ 7 ರಿಂದ 8 ವಾಹನಗಳು ಸಹ ಬೆಂಕಿಗೆ ಆಹುತಿಯಾಗಿ ಹಾನಿಯಾಗಿವೆ. ತಕ್ಷಣ ಸ್ಥಳಕ್ಕೆ ಸುಮಾರು 20 ಅಗ್ನಿಶಾಮಕದಳ ವಾಹನಗಳು ಧಾವಿಸಿ ಬೆಂಕಿಯನ್ನು ನಂದಿಸಿವೆ. ಗಾಯಾಳುಗಳಮನ್ನು ಹತ್ತಿರದ ಎಲ್​ಎನ್​ಜೆಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net