ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ: ಸವಾರ ಸ್ಥಳದಲ್ಲಿಯೇ ಸಾವು

Accident
Published on

ಬೆಂಗಳೂರು: ಅತಿ ವೇಗವಾಗಿ ಹೋಗುತ್ತಿದ್ದ ಕಾರು ನಿಯಂತ್ರಣ ತಪ್ಪಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದು, ಚಾಲಕ ಕಾರು ನಿಲ್ಲಿಸದೆ ಪರಾರಿಯಾಗಿರುವ ಪ್ರಕರಣ ಕೆಂಗೇರಿ ಸಮೀಪದ ಗಾಣಕಲ್ ರಸ್ತೆಯಲ್ಲಿ ನಡೆದಿದೆ.
ಎಲೆಕ್ಟ್ರಿಷಿಯನ್ ಅಜಯ್ ಕುಮಾರ್(೨೦) ಮೃತಪಟ್ಟವರು.
ಅಜಯ್‌ಕುಮಾರ್ ಕೆಲಸ ನಿಮಿತ್ತ ಉತ್ತರಹಳ್ಳಿ ರಸ್ತೆಯಿಂದ ಚಿಕ್ಕೇಗೌಡನಪಾಳ್ಯ ಕಡೆಗೆ ಹೋಗುತ್ತಿದ್ದಾಗ ಗಾಣಕಲ್ ಸೇತುವೆ ಬಳಿ ಅತಿ ವೇಗವಾಗಿ ತೆರಳುತಿದ್ದ ಕಾರು ಈ ವೇಳೆ ಮುಂದೆ ಬರುತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ದ್ವಿಚಕ್ರ ವಾಹನ ಸಂಪೂರ್ಣ ಜಖಂ ಆಗಿದೆ. ಗಂಭೀರವಾಗಿ ಗಾಯಗೊಂಡ ಸವಾರ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಘಟನೆ ಸಂಬಂಧ ಕೆಂಗೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಾರಿನ ನಂಬರ್ ಪತ್ತೆಯಾಗಿದ್ದು ಪರಾರಿಯಾಗಿರುವ ಕಾರು ಚಾಲಕನ ಪತ್ತೆಗಾಗಿ ಶೋಧ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net