ಬೀಡಿ ಬಳಿ ಕಾರು ಮರಕ್ಕೆ ಡಿಕ್ಕಿಯಾಗಿ 6 ಜನ ಸಾವು; ತಾಯಿ, ಹೆಣ್ಣು ಮಕ್ಕಳಿಬ್ಬರು ಮೃತ

22 Dwd 7
Published on

ಧಾರವಾಡ: ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಬೀಡಿ ಬಳಿಯ ಮಂಗ್ಯಾನಕೊಪ್ಪ ಗ್ರಾಮದ ಹತ್ತಿರ ಕಾರು ಅಪಘಾತ ಸಂಭವಿಸಿ ೬ ಜನ ಮೃತಪಟ್ಟಿದ್ದಾರೆ. ಅದರಲ್ಲಿ ನಗರದ ಭೂಸಪ್ಪ ಚೌಕ್ ಬಳಿಯ ಲಂಗೋಟಿ ಓಣಿಯ ತಾಯಿ ಹಾಗೂ ಇಬ್ಬರು ಹೆಣ್ಣು ಮಕ್ಕಳು ನಿಧನರಾಗಿದ್ದಾರೆ.
ಶಬಾನಾ ಅಸ್ಲಂ ಲಂಗೋಟಿ (೩೮) ಅವರ ಮಕ್ಕಳಾದ ಸಾನಿಯಾ ಲಂಗೋಟಿ (೧೭), ಉಮ್ರಾಬೇಗಂ ಲಂಗೋಟಿ (೧೬) ಮೃತಪಟ್ಟಿದ್ದಾರೆ. ಕಿತ್ತೂರಿನಲ್ಲಿ ಬುಧವಾರ ಅಸ್ಲಂ ಲಂಗೋಟಿ ಸಂಬAಽಕರ ಮದುವೆ ಇತ್ತು. ಗುರುವಾರ ವರನ ಮನೆಯಲ್ಲಿ ನಿಗದಿಯಾಗಿದ್ದ ಆರತಕ್ಷತೆಗಾಗಿ ಲಂಗೋಟಿ ಕುಟುಂಬದವರು ಬೀಡಿಗೆ ಹೊರಟಿದ್ದರು. ಕಾರ್‌ನಲ್ಲಿ ಹೊರಟಿದ್ದ ವೇಳೆ ನಂದಗಡ ಪೊಲೀಸ್ ಠಾಣೆ ವ್ಯಾಪ್ತಿಯ ಮಂಗ್ಯಾನಕೊಪ್ಪ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಾರ್ ಮರಕ್ಕೆ ಡಿಕ್ಕಿ ಹೊಡೆದಿದೆ. ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಚಾಲಕ ಸಹಿತ ೬ ಜನ ಮೃತಪಟ್ಟಿದ್ದಾರೆ.
ಮೃತ ಸಾನಿಯಾ ಪಿಯುಸಿ ಹಾಗೂ ಉಮ್ರಾಬೇಗಂ ೧೦ನೇ ತರಗತಿ ಓದುತ್ತಿದ್ದರು. ಸಂಬAಽಕರ ಮದುವೆಗೆ ಖುಷಿಯಿಂದ ಹೋಗಿದ್ದ ಮಕ್ಕಳು ಹಾಗೂ ತಾಯಿ ದಾರುಣವಾಗಿ ಮೃತಪಟ್ಟಿರುವುದನ್ನು ತಿಳಿದು ಅಕ್ಕಪಕ್ಕದ ಜನ ಲಂಗೋಟಿಯವರ ಮನೆ ಎದುರು ಜಮಾಯಿಸಿದ್ದರು. ಮನೆಯತ್ತ ದೌಡಾಯಿಸಿ ಸಂಬAಽಕರು ರೋದನ ಮನ ಕರುಗುವಂತಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net