ಕಾರು ಅಪಘಾತ: ಯಕ್ಷಗಾನ ಭಾಗವತ ತಿಮ್ಮಪ್ಪ ಬಾಳೆಹದ್ದ ಇನ್ನಿಲ್ಲ

Yakshagana Bhagavata Thimmappa Balehada
Published on

ಯಲ್ಲಾಪುರ: ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ಹಿರಿಯ ಯಕ್ಷಗಾನ ಭಾಗವತ ತಿಮ್ಮಪ್ಪ ಭಾಗ್ವತ ಬಾಳೆಹದ್ದ (59) ನಿಧನರಾದರು.

ಹಿತ್ಲಳ್ಳಿ ಬಳಿ ಮಂಗಳವಾರ ರಾತ್ರಿ ಎರಡು ಕಾರುಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ತಿಮ್ಮಪ್ಪ ಭಾಗ್ವತ ಬಾಳೆಹದ್ದ ಅವರು ಕೊನೆಯುಸಿರೆಳೆದರು. ಅವರಿಗೆ ಪುತ್ರ, ಪುತ್ರಿ ಇದ್ದಾರೆ.

ತಿಮ್ಮಪ್ಪ ಭಾಗ್ವತ ಬಾಳೆಹದ್ದ ಅವರು ತಂದೆ ಕೃಷ್ಣ ಭಾಗ್ವತ ಅವರ ಬಳಿ ಯಕ್ಷಗಾನ ಭಾಗವತಿಕೆ ಹಾಗೂ ಶ್ರೀಪಾದ ಹೆಗಡೆ ಕಂಪ್ಲಿ ಅವರ ಬಳಿ ಸಂಗೀತ ಅಭ್ಯಾಸ ಮಾಡಿದ್ದರು. ಮೂರೂವರೆ ದಶಕಗಳಿಂದ ಯಕ್ಷಗಾನ ಭಾಗವತರಾಗಿ, ಯಕ್ಷ ಗುರುವಾಗಿ, ಹಿಂದುಸ್ತಾನಿ ಗಾಯಕರಾಗಿ, ಹಾರ್ಮೋನಿಯಂ ವಾದಕರಾಗಿ, ಸಂಗೀತ ಸಂಯೋಜಕರಾಗಿ ಯಕ್ಷಗಾನ ಹಾಗೂ ಸಂಗೀತ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದರು. ಅಪಾರ ಅಭಿಮಾನಿ ವರ್ಗವಿದೆ. ರಂಗಾಯಣ ತಂಡದಲ್ಲಿ ಖೈದಿಗಳಿಗೆ ನಾಟಕ ಕಲಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net