ಕೂಲಿ ಕಾರ್ಮಿಕರಿಗೆ ಮದ್ಯ ಹಂಚಿ ಆ ದೃಶ್ಯವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿದ್ದವರ ಸೆರೆ

hydrabad april
Published on

ಹೈದರಾಬಾದ್: ಕೂಲಿ ಕಾರ್ಮಿಕರಿಗೆ ಮದ್ಯ ವಿತರಣೆ ಮಾಡಿದ ಘಟನೆ ಚಿತ್ರೀಕರಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಹಂಚಿಕೆ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ಬಾಗಿಲು ಮುಚ್ಚಿದ ಅಂಗಡಿ ಮಳಿಗೆ ಮುಂದೆ ಕುಳಿತಿದ್ದ ಕಾರ್ಮಿಕರ ಬಳಿಗೆ ತೆರಳಿದ ಇಬ್ಬರು ವ್ಯಕ್ತಿಗಳು ತಮ್ಮ ಬಳಿ ಇದ್ದ ಬಾಟಲಿಯಿಂದ ಪ್ಲಾಸ್ಟಿಕ್​ ಲೋಟಕ್ಕೆ ಮದ್ಯ ಸುರಿದು ಕಾರ್ಮಿಕರಿಗೆ ವಿತರಣೆ ಮಾಡುತ್ತಾರೆ. ಈ ದೃಶ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಅಪ್​ಲೋಡ್​ ಮಾಡಿ ಜನಪ್ರಿಯತೆ ಗಳಿಸಲು ಮುಂದಾಗಿದ್ದರು.

ಇದನ್ನು ಗಮನಿಸಿದ ಅಬಕಾರಿ ಸಚಿವರು ಪೊಲೀಸರಿಗೆ ಮಾಹಿತಿ ನೀಡಿ ಇಬ್ಬರನ್ನು ಬಂಧಿಸುವಂತೆ ಸೂಚಿಸಿದರು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net