

ತಮಿಳುನಾಡು: ನಟ ಧನುಷ್ ಅಭಿನಯದ ಬಹುನಿರೀಕ್ಷಿತ ಚಿತ್ರ 'ಕ್ಯಾಪ್ಟನ್ ಮಿಲ್ಲರ್' ಚಿತ್ರದ ಮಾಸ್ ಪೋಸ್ಟರ್ ಇಂದು ರಿಲೀಸ್ ಆಗಿದ್ದು, ಇದರ ಜತೆಯಲ್ಲೇ ಚಿತ್ರದ ಟೀಸರ್ ಬಿಡುಗಡೆ ಸಮಯವನ್ನು ಇದೀಗ ಚಿತ್ರತಂಡ ಅಭಿಮಾನಿಗಳ ಮುಂದೆ ರಿವೀಲ್ ಮಾಡಿದೆ.
ಧನುಷ್ ನಟನೆಯ 'ಕ್ಯಾಪ್ಟನ್ ಮಿಲ್ಲರ್' ಚಿತ್ರ ಕಾಲಿವುಡ್ ಅಂಗಳದಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ, ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಈ ಮಧ್ಯೆ ಚಿತ್ರದ ಹೊಸ ಅಪ್ಡೇಟ್ಗಾಗಿ ಕಾಯುತ್ತಿದ್ದ ಧುನುಷ್ ಫ್ಯಾನ್ಸ್ಗೆ ಚಿತ್ರತಂಡ ಮಾಸ್ ಪೋಸ್ಟರ್ವೊಂದನ್ನು ಬಿಡುಗಡೆಗೊಳಿಸಿದ್ದು, ಇದನ್ನು ಕಂಡು ಫ್ಯಾನ್ಸ್ ಫಿದಾ ಆಗಿದ್ದಾರೆ.
ಚಿತ್ರದ ಟೀಸರ್ ಅನ್ನು ಜುಲೈ 28 ರಂದು ಬಿಡುಗಡೆಗೊಳಿಸಲಿದ್ದೇವೆ ಎಂದು ಚಿತ್ರತಂಡ ಈ ಹಿಂದೆಯೆ ತಿಳಿಸಿತ್ತು. ಇದೀಗ ರಿಲೀಸ್ ಸಮಯವನ್ನು ಘೋಷಿಸಿರುವ ತಂಡ, ಟೀಸರ್ ಮಧ್ಯಾಹ್ನ 12:01ಕ್ಕೆ ಅಧಿಕೃತವಾಗಿ ಅಭಿಮಾನಿಗಳ ಎದುರು ಹಾಜರಾಗಲಿದೆ ಎಂದು ಹೇಳಿದ್ದಾರೆ. ಚಿತ್ರದಲ್ಲಿ ಸ್ಯಾಂಡಲ್ವುಡ್ನ ಹಿರಿಯ ನಟ ಶಿವರಾಜ್ ಕುಮಾರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಪ್ರಿಯಾಂಕಾ ಮೋಹನ್, ಸಂದೀಪ್ ಕಿಶನ್, ನಿವೇದಿತಾ ಸತೀಶ್ ಮತ್ತು ಆರ್ಆರ್ಆರ್ ಖ್ಯಾತಿಯ ಎಡ್ವರ್ಡ್ ಸೋನೆನ್ಬ್ಲಿಕ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ,(ಏಜೆನ್ಸೀಸ್).