

Cancer vaccine:ಕ್ಯಾನ್ಸರ್ ಎಷ್ಟು ಅಪಾಯಕಾರಿ ಮತ್ತು ಗಂಭೀರವಾದ ಕಾಯಿಲೆ ಎಂದರೆ, ಯಾರಿಗಾದರೂ ಈ ರೋಗ ಬಂದರೆ ರೋಗಿಯ ಜತೆಗೆ ಕುಟುಂಬವೂ ತುಂಬಾ ಸಮಸ್ಯೆಗಳನ್ನು ಎದುರಿಸುತ್ತದೆ. ನಿಮಗೆ ತಿಳಿದಿರುವಂತೆ ಪ್ರತಿವರ್ಷ ಲಕ್ಷಾಂತರ ಜನರು ಕ್ಯಾನ್ಸರ್ನಂತಹ ಗಂಭೀರ ರೋಗಕ್ಕೆ ಬಲಿಯಾಗುತ್ತಾರೆ. ದೇಶದಲ್ಲಿ ಹೆಚ್ಚುತ್ತಿರುವ ಕ್ಯಾನ್ಸರ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು, ಕೇಂಣದ್ರ ಸರ್ಕಾರವು ಲಸಿಕೆ ಸಂಬಂಧಿಸಿದಂತೆ ಪ್ರಮುಖ ಹೆಜ್ಜೆಯನ್ನು ಇಟ್ಟಿದೆ.
ದೇಶದಲ್ಲಿ ಕ್ಯಾನ್ಸರ್ ರೋಗಿಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದ್ದು, ಕೇಂದ್ರ ಸರ್ಕಾರ ಈ ಸಮಸ್ಯೆಯನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಂಡಿದೆ. 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರನ್ನು ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಲಾಗುವುದು ಮತ್ತು ರೋಗದ ಆರಂಭಿಕ ಪತ್ತೆಗಾಗಿ ಡೇಕೇರ್ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಸರ್ಕಾರ ಮಾಹಿತಿ ಒದಗಿಸಿದೆ ಎಂದು ವರದಿಯಾಗಿದೆ.
ಮಹಿಳೆಯರ ಮೇಲೆ ಪರಿಣಾಮ ಬೀರುವ ಕ್ಯಾನ್ಸರ್ಗೆ ಲಸಿಕೆಯ ಸಂಶೋಧನೆ ಬಹುತೇಕ ಪೂರ್ಣಗೊಂಡಿದ್ದು, ಪ್ರಯೋಗಗಳು ನಡೆಯುತ್ತಿವೆ. ಇದು ಐದರಿಂದ ಆರು ತಿಂಗಳಲ್ಲಿ ಲಭ್ಯವಿದ್ದು, 9 ರಿಂದ 16 ವರ್ಷ ವಯಸ್ಸಿನ ಹುಡುಗಿಯರು ಲಸಿಕೆಗೆ ಅರ್ಹರಾಗಿರುತ್ತಾರೆ.
ಈ ಲಸಿಕೆ ಯಾವ ಕ್ಯಾನ್ಸರ್ಗಳಿಗೆ ಚಿಕಿತ್ಸೆ ನೀಡುತ್ತದೆ ಎಂದರೆ, ಸ್ತನ, ಬಾಯಿ ಮತ್ತು ಗರ್ಭಕಂಠದ ಕ್ಯಾನ್ಸರ್. ಇನ್ನು ಆಸ್ಪತ್ರೆಗಳಲ್ಲಿ ಆಯುಷ್ ವಿಭಾಗಗಳಿವೆ ಮತ್ತು ಜನರು ಈ ಸೌಲಭ್ಯಗಳನ್ನು ಪಡೆಯಬಹುದು.
ಈ ಲಸಿಕೆ ಇನ್ನು 5ರಿಂದ6 ತಿಂಗಳೊಳಗೆ ಲಭ್ಯವಿರುತ್ತದೆ. ಮೊದಲನೆಯದಾಗಿ, ಈ ಲಸಿಕೆಯನ್ನು 9-16 ವರ್ಷದ ಹುಡುಗಿಯರಿಗೆ ನೀಡಲಾಗುತ್ತದೆ.ಇದರಿಂದ ಭವಿಷ್ಯದಲ್ಲಿ ಗರ್ಭಕಂಠ ಕ್ಯಾನ್ಸರ್ ತುತ್ತಾಗುವುದಿಲ್ಲ ಎನ್ನಲಾಗಿದೆ.(ಏಜೆನ್ಸೀಸ್)