ಸರ್ವಸ್ಪರ್ಶಿಯಾಗಲಿ ಕ್ಯಾನ್ಸರ್ ಚಿಕಿತ್ಸೆ; ಇಂದು ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನ

sdfsdfsdfdfgdg
Published on
ಕ್ಯಾನ್ಸರ್ ಕಾಯಿಲೆಯನ್ನು ಆರಂಭಿಕವಾಗಿ ಪತ್ತೆ ಹಚ್ಚಲು ಹಾಗೂ ಗುಣಪಡಿಸಲು ಹಲವಾರು ತಂತ್ರಜ್ಞಾನ ಹಾಗೂ ಚಿಕಿತ್ಸಾ ವಿಧಾನಗಳಿವೆ. ಆದರೆ ಆತಂಕದ ವಿಚಾರ ಎಂದರೆ ಇತ್ತೀಚಿನ ವರ್ಷಗಳಲ್ಲಿ ಮಕ್ಕಳಲ್ಲಿ ಕ್ಯಾನ್ಸರ್ ಹೆಚ್ಚಳವಾಗುತ್ತಿರುವುದು. ಹಾಗೂ ಮಕ್ಕಳಲ್ಲಿ ಕಂಡುಬರುವ ಕ್ಯಾನ್ಸರ್​ಗೆ ಶೇ. 80 ಕಾರಣವೇ ತಿಳಿಯದಿರುವುದು. ಕ್ಯಾನ್ಸರ್​ಪೀಡಿತ ಮಕ್ಕಳಿಗೆ ಔಷಧ ನೀಡಿದರೆ ಸಾಲದು. ರೋಗಿ, ಕುಟುಂಬ ಹಾಗೂ ಸಮಾಜವು ಕ್ಯಾನ್ಸರ್​ನ್ನು ನೋಡುವ ದೃಷ್ಟಿಕೋನ ಬದಲಾಗಬೇಕು. ಈ ನಿಟ್ಟಿನಲ್ಲಿ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸಲು ಪ್ರತಿ ವರ್ಷ ಫೆ.15ರಂದು ಅಂತಾರಾಷ್ಟ್ರೀಯ ಮಕ್ಕಳ ಕ್ಯಾನ್ಸರ್ ದಿನವನ್ನಾಗಿ ಆಚರಿಸಲಾಗುತ್ತದೆ. ಮಕ್ಕಳ ಕ್ಯಾನ್ಸರ್ ಕುರಿತು ವಿಜಯವಾಣಿ ಮತ್ತು ದಿಗ್ವಿಜಯ 247 ನ್ಯೂಸ್ ವತಿಯಿಂದ ಕ್ಲಬ್​ಹೌಸ್​ನಲ್ಲಿ ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಎಚ್​ಸಿಜಿ ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ವಿಶಾಲ್ ರಾವ್ ಹಾಗೂ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯ ಮಕ್ಕಳ ಕ್ಯಾನ್ಸರ್ ವಿಭಾಗದ ಮುಖ್ಯಸ್ಥ ಡಾ. ಅರುಣ್ ಕುಮಾರ್ ಅನೇಕ ವಿಚಾರಗಳನ್ನು ತಿಳಿಸಿಕೊಟ್ಟಿದ್ದಾರೆ.

ಆತ್ಮಸ್ಥೈರ್ಯ ತುಂಬಬೇಕು:

|ಡಾ.ವಿಶಾಲ್ ರಾವ್ಕ್ಯಾನ್ಸರ್ ತಜ್ಞ

ಭಾರತದಲ್ಲಿ ವಾರ್ಷಿಕ ಸರಾಸರಿ 50 ಸಾವಿರಕ್ಕೂ ಅಧಿಕ ಮಕ್ಕಳಿಗೆ ವಿವಿಧ ಬಗೆಯ ಕ್ಯಾನ್ಸರ್ ಕಂಡುಬರುತ್ತಿದೆ. ಗ್ರಾಮೀಣ ಭಾಗದಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ ‘ಪ್ರಾದೇಶಿಕ ಕ್ಯಾನ್ಸರ್ ಕೇಂದ್ರ’ಗಳನ್ನು ಆರಂಭಿಸಲಾಗಿದೆ. ಇವು ಸಾವಿರಾರು ಮಕ್ಕಳ ಜೀವ ಉಳಿಸಲು ನೆರವಾ ಗುತ್ತಿವೆ. ಕ್ಯಾನ್ಸರ್ ಕಾಯಿಲೆಗೆ ಕೇವಲ ಚಿಕಿತ್ಸೆ ನೀಡಿದರೆ ಸಾಲದು, ಯಾವುದೇ ಕ್ಯಾನ್ಸರ್​ಪೀಡಿತ ಮಕ್ಕಳು ಚಿಕಿತ್ಸೆಗೆ ದಾಖಲಾದರೆ, ಚಿಕಿತ್ಸೆಯ ವೆಚ್ಚದ ಬಗ್ಗೆ ಹೇಳಿ ಅವರನ್ನು ಭಯಪಡಿಸಿ, ಆತಂಕಕ್ಕೆ ದೂಡಬಾರದು. ಬದಲಿಗೆ ಪಾಲಕರಿಗೆ ಮಾನಸಿಕವಾಗಿ ಧೈರ್ಯ ತುಂಬುವ, ಚಿಕಿತ್ಸೆ ಕುರಿತು ಮಾಹಿತಿ ನೀಡುವ ಹಾಗೂ ಅವರ ಆರ್ಥಿಕ ಸಮಸ್ಯೆಗೆ ಪರಿಹಾರ ಒದಗಿಸುವ ಕಾರ್ಯವನ್ನು ವೈದ್ಯರು ಮೊದಲು ಮಾಡಬೇಕು.

ಕ್ರೌಡ್​ಫಂಡಿಂಗ್ ವೇದಿಕೆ ಕಲ್ಪಿಸಿ: ನಮ್ಮ ದೇಶದಲ್ಲಿ 0-14 ವಯಸ್ಸಿನ ಮಕ್ಕಳಿಗೆ ಲುಕೇಮಿಯಾ, ಲಿಮ್ೋಮಾ, ಬೋನ್​ವ್ಯಾರೋ, ಬ್ರೇನ್​ಟ್ಯೂಮರ್ ಹೆಚ್ಚಾಗಿ ಕಾಡುತ್ತಿವೆ. ಎಲ್ಲ ಮಾದರಿಯ ಕ್ಯಾನ್ಸರ್​ಗಳ ಚಿಕಿತ್ಸೆಗೆ ಲಕ್ಷಾಂತರ ರೂ. ಹಣ ಖರ್ಚಾಗುತ್ತದೆ. ಕ್ಯಾನ್ಸರ್ ಇರುವುದನ್ನು ಪತ್ತೆ ಹಚ್ಚಿಕೊಂಡು ಗ್ರಾಮೀಣ ಪ್ರದೇಶದಿಂದ ದೊಡ್ಡ ಆಸ್ಪತ್ರೆಗಳಿಗೆ ಬರುವ ವೇಳೆಗೆ ಕನಿಷ್ಠ 3-4 ತಿಂಗಳು ವಿಳಂಬ ಆಗಿರುತ್ತದೆ. ದಿಢೀರನೆ ಲಕ್ಷಾಂತರ ರೂ. ಹೊಂದಿಸುವುದು ಬಹುತೇಕರಿಗೆ ಕಷ್ಟ. ಹೀಗಾಗಿ, ಎಲ್ಲ ಕ್ಯಾನ್ಸರ್ ಚಿಕಿತ್ಸಾ ಆಸ್ಪತ್ರೆಗಳು ಆನ್​ಲೈನ್ ಹಾಗೂ ಇನ್ನಿತರ ಮಾರ್ಗದಲ್ಲಿ ಸಾರ್ವಜನಿಕರಿಂದ ದೇಣಿಗೆ ಸಂಗ್ರಹ (ಕ್ರೌಡ್​ಫಂಡಿಂಗ್) ವೇದಿಕೆಯನ್ನು ಕಲ್ಪಿಸಬೇಕು. ಇದರಲ್ಲಿ ಕೆಲವು ಬಾರಿ ಮೂರೇ ದಿನದಲ್ಲಿ 20 ಲಕ್ಷ ರೂ. ಹಣ ಸಂಗ್ರಹವಾದ ಉದಾಹರಣೆಗಳಿವೆ.

ತಂತ್ರಜ್ಞಾನದ ಬಳಕೆ ಅಗತ್ಯ:

ಮಕ್ಕಳನ್ನು ಚಿಕಿತ್ಸೆಗೆ ಮಾನಸಿಕವಾಗಿ ಸಿದ್ಧಪಡಿಸಲು ಕೌನ್ಸೆಲಿಂಗ್ ಮತ್ತು ತಂತ್ರಜ್ಞಾನವನ್ನು ಬಳಕೆ ಮಾಡಬೇಕು. ತಂತ್ರಾಜ್ಞಾನದಲ್ಲಿ ಆನ್​ಲೈನ್ ಆಟಗಳು, ಕಾರ್ಟೂನ್​ಗಳು, ವರ್ಚುವಲ್ ರಿಯಾಲಿಟಿ ಹಾಗೂ ಹೋಲೋಲೆನ್ಸ್ ಬಳಸಿಕೊಳ್ಳಬೇಕು. ಇದರಿಂದ ಕಿಮೋಥೆರಪಿ ವೇಳೆ ಮಕ್ಕಳು ಬಳಲುವುದನ್ನು ತಗ್ಗಿಸಬಹುದು. ಚಿಕ್ಕ ಮಕ್ಕಳನ್ನು ಶಸ್ತ್ರಚಿಕಿತ್ಸೆಗೆ ಕರೆದೊಯ್ಯುವಾಗ ಪಾಲಕರನ್ನು ಬಿಟ್ಟಿರಲು ಸಾಧ್ಯವಾಗದೆ ಹೆಚ್ಚು ಹಠ ಮಾಡುತ್ತಾರೆ. ಅವರ ಗಮನ ಬೇರೆಡೆ ಸೆಳೆಯಲು ಈ ತಂತ್ರಜ್ಞಾನ ಸಹಾಯಕ. ಕ್ಯಾನ್ಸರ್​ಪೀಡಿತ ಮಕ್ಕಳಿಗೆ ಹೋಲೋಲೆನ್ಸ್ ನೀಡುವ ಬಗ್ಗೆ ಮೈಕ್ರೋಸಾಫ್ಟ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದೆ. ರಾಜ್ಯದಲ್ಲಿ ಮಕ್ಕಳ ಕ್ಯಾನ್ಸರ್ ಚಿಕಿತ್ಸೆಗೆ 50 ವೈದ್ಯಕೀಯ ಸಂಸ್ಥೆಗಳಿವೆ. ತಾಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಿವೆ. ಎಲ್ಲ ವೈದ್ಯಕೀಯ ಸಂಸ್ಥೆಗಳು, ಕಾಲೇಜುಗಳಲ್ಲಿ ಕ್ಯಾನ್ಸರ್ ಲಕ್ಷಣಗಳನ್ನು ಗುರುತಿಸಿ ಕೂಡಲೇ ರೋಗಿಗಳನ್ನು ಚಿಕಿತ್ಸೆಗೆ ಒಳಪಡಿಸುವ ಕ್ರಮದ ಬಗ್ಗೆ ತರಬೇತಿ ನೀಡಲು ನೀಲಿನಕ್ಷೆ ಸಿದ್ಧವಾಗುತ್ತಿದೆ. ಮುಂದಿನ ಹಂತದಲ್ಲಿ ಜಿಲ್ಲೆ ಮತ್ತು ತಾಲೂಕು ಆಸ್ಪತ್ರೆಗಳ ಸಿಬ್ಬಂದಿಗೂ ಈ ಬಗ್ಗೆ ತರಬೇತಿ ನೀಡಿ ಕ್ಯಾನ್ಸರ್ ಸಾವುಪ್ರಮಾಣ ತಗ್ಗಿಸಲು ಯೋಜನೆ ಸಿದ್ಧಪಡಿಸಲಾಗುತ್ತಿದೆ.

0-14 ವಯಸ್ಸಿನ ಮಕ್ಕಳಿಗೆ ಕಾಡುವ ಲುಕೇಮಿಯಾ, ಲಿಮ್ೋಮಿಯಾ, ಬ್ರೇನ್​ಟ್ಯೂಮರ್ ಪ್ರಕರಣಗಳಲ್ಲಿ ಭಾರತ ಟಾಪ್ 10 ಸ್ಥಾನದಲ್ಲಿದೆ. ಕಳೆದ 4 ವರ್ಷಕ್ಕಿಂತ ಮೊದಲು ಅಮೆರಿಕ, ಯುರೋಪ್ ಮತ್ತು ರಷ್ಯಾ ಸೇರಿ ಹಲವು ದೇಶಗಳಲ್ಲಿನ ಕ್ಯಾನ್ಸರ್ ರೋಗ ಮಾದರಿ ಮತ್ತು ಚಿಕಿತ್ಸಾ ಕ್ರಮಗಳನ್ನು ಅಧ್ಯಯನ ಮಾಡಿ ದೇಶದ ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಯೋಜನೆಯಡಿ ನಮ್ಮ ದೇಶದಲ್ಲಿ ಕ್ಯಾನ್ಸರ್ ವಂಶವಾಹಿ ಮೇಲೆ ಸಂಶೋಧನೆ ನಡೆಸಲಾಗುತ್ತಿದೆ. ಉದಾಹರಣೆಗೆ ಗಂಟಲು, ಕುತ್ತಿಗೆ ಭಾಗದ ಕ್ಯಾನ್ಸರ್ ಬಗ್ಗೆ ಭಾರತದಲ್ಲಿ 50 ಹೊಸ ಜೀನ್​ಗಳಿರುವುದನ್ನು ಪತ್ತೆ ಮಾಡಲಾಗಿದ್ದು, ಅವುಗಳಿಗೆ ಸ್ಥಳೀಯವಾಗಿಯೇ ಔಷಧ ನೀಡಲಾಗುತ್ತಿದೆ. ಜೀನ್ ಎಡಿಟಿಂಗ್ ಮಾಡುವ ಬಗ್ಗೆ ಹೆಚ್ಚಿನ ಸಂಶೋಧನೆಗಳು ಆಗಬೇಕಿವೆ. ಇದಕ್ಕಾಗಿ ದೇಶದೆಲ್ಲೆಡೆ ಕ್ಯಾನ್ಸರ್ ಚಿಕಿತ್ಸಾ ಕ್ರಮಕ್ಕೆ ಪ್ರಯೋಗಾಲಯ, ಸಂಶೋಧನಾ ಕೇಂದ್ರಗಳನ್ನು ಪ್ರಾರಂಭಿಸುವ ಅಗತ್ಯವಿದೆ.

ಜೀವನಪದ್ಧತಿ ಮತ್ತು ಆಹಾರಕ್ರಮ:

ನಮ್ಮ ಜೀವನಶೈಲಿಯಲ್ಲಿ ‘ಫಾಮ್ರ್ ಟು ಪ್ಲೇಟ್’ ಕಾನ್ಸೆಪ್ಟ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ಬಿಡುಗಡೆ ಮಾಡಿದೆ. ಬೆಳೆಯ ಪದ್ಧತಿಯಲ್ಲಿ ರಾಸಾಯನಿಕ ಬಳಕೆ, ನಂತರ ಇನ್​ಸ್ಟಂಟ್ ಕಾಫಿ, ತಿಂಡಿ ಹಾಗೂ ಅನಾರೋಗ್ಯಕರ, ಅಸಮತೋಲನದ ಆಹಾರಕ್ರಮಗಳು ಅಪಾಯಕಾರಿ. ಊಟ ಹಾಗೂ ಜೀವನಶೈಲಿಯಲ್ಲಿನ ದೋಷಗಳಿಂದ ಹೆಚ್ಚಿನ ಕ್ಯಾನ್ಸರ್ ಪ್ರಕರಣಗಳು ಕಂಡುಬರುತ್ತಿವೆ. ಪ್ರೋಟೀನ್​ಯುುಕ್ತ ಆಹಾರ ಸೇವನೆ ಬಗ್ಗೆ ಶಾಲೆ-ಕಾಲೇಜುಗಳಲ್ಲಿ ಮಾಹಿತಿ ನೀಡುವ ಮೂಲಕ ಆರೋಗ್ಯಕರ ಜೀವನದ ಬಗ್ಗೆ ಅರಿವು ಮೂಡಿಸುವ ಅಗತ್ಯವಿದೆ.

| ಡಾ.ಅರುಣ್ ಕುಮಾರ್ಕ್ಯಾನ್ಸರ್ ತಜ್ಞ

ಮಕ್ಕಳಿಗೆ ಜ್ವರ, ಕೆಮ್ಮು, ವಾಂತಿ ಏನೇ ಲಕ್ಷಣ ಕಂಡುಬಂದರೂ ಹತ್ತಿರದ ಆಸ್ಪತ್ರೆ ಮತ್ತು ವೈದ್ಯರ ಬಳಿ ತಪಾಸಣೆ ಮಾಡಿಸಬೇಕು. ಈ ರೋಗದ ಲಕ್ಷಣಗಳು ಒಂದು ವಾರದಲ್ಲಿ ಗುಣಮುಖ ಆಗದಿದ್ದರೆ ವೈದ್ಯರ ಸಲಹೆಯಂತೆ ಕೂಡಲೇ ರಕ್ತಪರೀಕ್ಷೆ ಮಾಡಿಸಬೇಕು. ಇನ್ನು ಹೊಟ್ಟೆಯಲ್ಲಿ ಉಂಟಾಗುವ ಗಡ್ಡೆ ರೀತಿಯ ಕ್ಯಾನ್ಸರ್​ಗಳನ್ನು ಗುರುತಿಸಲು ಮಗುವಿನ ಪಾಲಕರು ಮಕ್ಕಳ ಹೊಟ್ಟೆಯಲ್ಲಿ ಉಂಟಾಗುವ ಬದಲಾವಣೆ ಬಗ್ಗೆ ಗಮನ ಹರಿಸಬೇಕು. ಹೊಟ್ಟೆಯಲ್ಲಿ ಗಡ್ಡೆ ಕಂಡುಬಂದಲ್ಲಿ ಹತ್ತಿರದ ಆಸ್ಪತ್ರೆ ಅಥವಾ ಜಿಲ್ಲಾ ಆಸ್ಪತ್ರೆಗಳಲ್ಲಿ ತಪಾಸಣೆ ಮಾಡಿಸಿ, ಕ್ಯಾನ್ಸರ್ ದೃಢಪಟ್ಟರೆ ಅಗತ್ಯ ಚಿಕಿತ್ಸೆ ಕೊಡಿಸಬೇಕು. ರಾಜ್ಯದಲ್ಲಿಯೇ 90 ಸಾವಿರ ಪ್ರಕರಣಗಳು ಮಕ್ಕಳಲ್ಲಿ ಪತ್ತೆಯಾಗುತ್ತಿವೆ. ಬೆಂಗಳೂರಿನಲ್ಲಿ 1,300 ಪ್ರಕರಣಗಳು ಪತ್ತೆಯಾಗುತ್ತಿವೆ.

ಚಿಕಿತ್ಸಾ ವಿಧಾನದಲ್ಲಿ ವ್ಯತ್ಯಾಸವಿಲ್ಲ:

ಕ್ಯಾನ್ಸರ್​ಪೀಡಿತ ಮಕ್ಕಳು ಮತ್ತು ವಯಸ್ಕರ ಚಿಕಿತ್ಸಾ ಕ್ರಮಗಳಲ್ಲಿ ಹೆಚ್ಚಿನ ವ್ಯತ್ಯಾಸ ಇಲ್ಲ. ಕಿಮೋಥೆರಫಿ, ರೇಡಿಯೋಥೆರಫಿ ಮತ್ತು ಶಸ್ತ್ರಚಿಕಿತ್ಸೆ ಮಾದರಿಗಳನ್ನು ಅನುಸರಿಸಲಾಗುತ್ತದೆ. ಮುಖ್ಯವಾಗಿ ಮಕ್ಕಳಿಗೆ ತೂಕದ ಪ್ರಕಾರವಾಗಿ ಇಂಜೆಕ್ಷನ್ ಮತ್ತು ಔಷಧಗಳನ್ನು ನೀಡಲಾಗುತ್ತದೆ. ಕ್ಯಾನ್ಸರ್ ಯಾವ ಹಂತದಲ್ಲಿದೆ ಎಂಬುದರ ಆಧಾರದ ಮೇಲೆ ಗುಣಮುಖ ಪ್ರಮಾಣ ನಿಗದಿಪಡಿಸಲಾಗುತ್ತದೆ. ಮಕ್ಕಳಲ್ಲಿ ಕ್ಯಾನ್ಸರ್ ಕಂಡುಬರಲು 5-6 ಅಂಶಗಳು ಕಾರಣ. ಮೊದಲು ಇನ್​ಫೆಕ್ಷನ್ ವೈರಲ್ ಬ್ಯಾಕ್ಟೀರಿಯಲ್ ಸೋಂಕು ಮೈಯಲ್ಲಿ ಅಂಟಿಕೊಂಡಾಗ ಕೋಶಗಳಲ್ಲಿ ಬದಲಾವಣೆ ಆಗಿ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ವೈರಾಣು ನಮ್ಮ ಜೆನೆಟಿಕ್ ಲೆವೆಲ್​ನಲ್ಲಿ ಸೇರಿ ಕಣಗಳು ಸಹಜವಾಗಿ ಮಾರ್ಪಾಡಾಗದೆ ಇದ್ದಾಗ ಅಬ್​ನಾಮರ್್​ಲ್ ಸೆಲ್ಸ್ ಉತ್ಪತ್ತಿಯಾಗಿ ರಕ್ತದ ಕ್ಯಾನ್ಸರ್​ಗೆ ಕಾರಣವಾಗುತ್ತದೆ. ಎರಡನೆಯದು ಬ್ರೖೆನ್​ಟ್ಯೂಮರ್, ಮೂರನೆಯದು ಲಿಂಫೋಮಾ ಮಕ್ಕಳಲ್ಲಿ ಸಹಜ ಕಾಯಿಲೆಯಾಗಿದೆ. ನಾಲ್ಕನೆಯದು ಲಿವರ್, ಕಿಡ್ನಿ, ನರಗಳಲ್ಲಿ ಸಮಸ್ಯೆಯಿಂದಲೂ ಕ್ಯಾನ್ಸರ್ ಕಂಡುಬರುತ್ತದೆ. ಸಾಫ್ಟ್ ಟಿಶ್ಯೂ ಮತ್ತು ಬೋನ್​ನಲ್ಲೂ ಕ್ಯಾನ್ಸರ್ ಕಾಣಿಸಿಕೊಳ್ಳುತ್ತದೆ.

ಲಕ್ಷಣಗಳು:

  1. ಲ್ಯುಕೇಮಿಯಾ: ಸುಸ್ತು, ಕೈಕಾಲು ನೋವು, ಊತ.
  2. ಬ್ರೖೆನ್​ಟ್ಯೂಮರ್: ಬೆಳಗ್ಗೆ ಎದ್ದ ಕೂಡಲೇ ತಲೆನೋವು, ವಾಂತಿ, ನಡೆಯುವಾಗ ಸಮತೋಲನ ತಪು್ಪವುದು.
  3. ಲಿಂಫೋಮಾ: ಕರುಳಿನಲ್ಲಿ, ಕತ್ತಿನಲ್ಲಿ ಊತ, ಗಂಟು ಕಾಣಿಸಿಕೊಳ್ಳುತ್ತದೆ. ಊಟ ನುಂಗಲು ಆಗುವುದಿಲ್ಲ. ಸುಸ್ತು.
  4. ಸಾಲಿಡ್ ಟ್ಯೂಮರ್: ನರಕ್ಕೆ ಸಂಬಂಧಿಸಿದ್ದು, ನಿಯಮಿತವಾಗಿ ತಿಂಗಳ ಲಸಿಕೆಗೆ ಹೋದಾಗ ಹೈಟ್, ವೈಟ್ ಪರೀಕ್ಷೆ ಮಾಡಿಸಬೇಕು.
  5. ರೆಟಿನೋ ಬ್ಲಾಸ್ಟೋಮಾ: ಬಿಳಿ ಪೊರೆ ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನು ಆರಂಭದಲ್ಲೇ ಪತ್ತೆ ಮಾಡಬೇಕಾಗುತ್ತದೆ. ಕಿದ್ವಾಯಿಯಲ್ಲಿ ವಿಶೇಷ ಪರೀಕ್ಷಾ ಸೌಲಭ್ಯ, ತಜ್ಞರ ತಂಡ ಲಭ್ಯವಿದೆ.

ಸೈಕೋ ಆಂಕಾಲಜಿ ಯೂನಿಟ್: ಕಿದ್ವಾಯಿ ಆಸ್ಪತ್ರೆಯಲ್ಲಿ ಪಾಲಕರಿಗೂ ಕೌನ್ಸೆಲಿಂಗ್ ಮಾಡಲಾ ಗುತ್ತದೆ. ಮಕ್ಕಳ ಚಿಕಿತ್ಸೆ ಪೂರ್ಣಗೊಳ್ಳುವವರೆಗೂ ಪಾಲಕರಿಗೆ ಉಳಿದುಕೊಳ್ಳಲು ವ್ಯವಸ್ಥೆ. ರೋಗಿಗಳ ಒತ್ತಡ ನಿಭಾಯಿಸಿ ಪ್ರಾಥಮಿಕ ಚಿಕಿತ್ಸೆ, (ಹೋಮ್ ಅವೇ ಫ್ರಂ ಹೋಮ್ ತಂಗು ದಾಣ ಮಾಡಿ ಇರಿಸಿ ಸೌಕರ್ಯ ಮಾಡಿಕೊಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net