'ಮಕ್ಕಳ ಭವಿಷ್ಯದ ಬಗ್ಗೆ ಚಿಂತೆ' ಇಬ್ಬರೂ ಮಕ್ಕಳನ್ನು ಕೊಂದು ತಾನೂ ಪ್ರಾಣ ಬಿಟ್ಟ ಕ್ಯಾನ್ಸರ್ ರೋಗಿ!..Cancer

Cancer
Published on: 

 Cancer  : ಗುಜರಾತ್‌ನ ದೇವಭೂಮಿ ದ್ವಾರಕಾ ಜಿಲ್ಲೆಯಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿದ್ದ 40 ವರ್ಷದ ವ್ಯಕ್ತಿಯೊಬ್ಬ ತನ್ನ ಇಬ್ಬರು ಅಪ್ರಾಪ್ತ ಮಕ್ಕಳಿಗೆ ವಿಷಕಾರಿ ಪದಾರ್ಥ ನೀಡಿ ಕೊಂದು ನಂತರ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ.

ಮಕ್ಕಳ ಭವಿಷ್ಯದ ಬಗ್ಗೆ ನನಗೆ ಚಿಂತೆ!

ಕಲ್ಯಾಣಪುರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಟಿ.ಸಿ. ಪಟೇಲ್ ಮಾತನಾಡಿ, ಮೆರಾಮನ್ ಛೆಟ್ರಿಯ ಎಂಬ ವ್ಯಕ್ತಿ ಕಳೆದ ಐದು ವರ್ಷಗಳಿಂದ ಕ್ಯಾನ್ಸರ್​​ನಿಂದ ಬಳಲುತ್ತಿದ್ದರು. ಅವರ ಮರಣದ ನಂತರ ಅವರ ಮಕ್ಕಳ ಭವಿಷ್ಯದ ಬಗ್ಗೆ ಅವರು ಯಾವಾಗಲೂ ಚಿಂತಿತರಾಗಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದರು.

ಮಕ್ಕಳಿಗೆ ವಿಷ ನೀಡಿ ಕೊಲೆ!

ಛೆಟ್ರಿಯ ಮೊದಲು ತನ್ನ ಐದು ವರ್ಷದ ಮಗಳು ಮತ್ತು ಮೂರು ವರ್ಷದ ಮಗನಿಗೆ ತನ್ನ ಹಳ್ಳಿಯ ಮನೆಯಲ್ಲಿ ವಿಷಪ್ರಾಶನ ಮಾಡಿ ನಂತರ ತಾನೂ ವಿಷ ಸೇವಿಸಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಜೀವಕೋಶಗಳ ಜೀನ್‌ಗಳಲ್ಲಿನ ಬದಲಾವಣೆಗಳೊಂದಿಗೆ ಕ್ಯಾನ್ಸರ್ ಪ್ರಾರಂಭವಾಗುತ್ತದೆ. ಭಾರತದಲ್ಲಿ, ಶ್ವಾಸಕೋಶ, ಸ್ತನ, ಬಾಯಿ, ಗರ್ಭಕಂಠ ಮತ್ತು ಹೊಟ್ಟೆಯ ಕ್ಯಾನ್ಸರ್‌ಗಳು ಹೆಚ್ಚು ಸಾಮಾನ್ಯವಾಗಿದೆ.