ವಿಎಗಳ ನಿಯೋಜನೆ ಸೇವೆ ರದ್ದು

klr dc office
Published on

> ಕಿರುವಾರ ಎಸ್​.ಸುದರ್ಶನ್​ ಕೋಲಾರ

ಗ್ರಾಮ ಆಡಳಿತಾಧಿಕಾರಿಗಳು (ವಿಎ) ಮೂಲ ಸ್ಥಾನ ಬಿಟ್ಟು ಬೇರೆ ಕಚೇರಿಗಳಲ್ಲಿ ನಿಯೋಜನೆ ಮೇರೆಗೆ ಕಾರ್ಯನಿರ್ವಹಿಸುತ್ತಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಮೂಲ ಸ್ಥಾನಕ್ಕೆ ವಾಪಸ್​ ತೆರಳುವಂತೆ, ಸರ್ಕಾರ ಸುತ್ತೋಲೆ ಹೊರಡಿಸಿದೆ.

ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ, ತಹಸೀಲ್ದಾರ್​ ಕಚೇರಿಗಳಲ್ಲಿ ವಿಎಗಳು ಬೀಡುಬಿಡುತ್ತಿದ್ದು,

ಇದರಿಂದಾಗಿ ಹಲವು ಕೆಲಸಗಳಿಗೆ ಅಡಚಣೆ ಉಂಟಾಗಿ, ಕಂದಾಯ ಇಲಾಖೆಯ ಪ್ರಗತಿ ಮೇಲೆ ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ನಿಯೋಜನೆ ಸ್ಥಳ ಬಿಟ್ಟು, ಮೂಲ ಸ್ಥಳಕ್ಕೆ ವಾಪಸ್​ ತೆರಳುವಂತೆ ಸೂಚಿಸಲಾಗಿದೆ.

ವಿಎ ಹೆಗಲಿಗೆ ಹಲವು ಹೊಣೆ

ಗ್ರಾಮಮಟ್ಟದಿಂದಲೇ ಜನತೆಗೆ ಕಂದಾಯ ಸೇವೆ ಕಲ್ಪಿಸಲು 5 ಕಂದಾಯ ವೃತ್ತಗಳಿಗೆ ಒಬ್ಬರಂತೆ ಗ್ರಾಮ ಆಡಳಿತಾಧಿಕಾರಿ ನೇಮಕ ಮಾಡಲಾಗಿದೆ. ಅವರು ಪ್ರತಿ ಗ್ರಾಮಕ್ಕೆ ಭೇಟಿ ನೀಡಿ ತೆರಿಗೆ ವಸೂಲಿ ಮಾಡುವುದು, ಬೆಳೆ ಸಮೀೆ, ಜನನ, ಮರಣ, ಆದಾಯ, ಜಾತಿ, ವಂಶವೃಕ್ಷ ಸೇರಿ ಹಲವು ಪ್ರಮಾಣ ಪತ್ರಗಳಿಗೆ ವರದಿ ನೀಡುವ ಜವಾಬ್ದಾರಿ ನಿರ್ವಹಿಸಬೇಕು. ಆಡಳಿತಾತ್ಮಕ ಮತ್ತು ಸಾರ್ವಜನಿಕ ಹಿತದೃಷ್ಟಿಯಿಂದ ಕಂದಾಯ ಇಲಾಖೆಯ ಕಾರ್ಯ ಸ್ವರೂಪವನ್ನು ಸರಳೀಕರಣಗೊಳಿಸಿ ಡಿಜಿಟಲೀಕರಣ ಮಾಡುವ ಸಂಬಂಧ ಬಗರ್​ಹುಕುಂ, ಲ್ಯಾಂಡ್​ ಬೀಟ್​, ದರಖಾಸ್ತು ಪೋಡಿ 1ರಿಂದ 5, ಆಧಾರ್​ ಸಿಡೀಂಗ್​, ಕಂದಾಯ ಕಡತಗಳ ಗಣಕೀಕರಣ ಕೆಲಸ ಮಾಡಬೇಕು. ಹುದ್ದೆಗಳ ಕೊರತೆಯಿಂದಾಗಿ ಹಾಲಿ ಗ್ರಾಮ ಆಡಳಿತ ಅಧಿಕಾರಿ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಮೇಲೆ ಹೆಚ್ಚಿನ ಕಾರ್ಯದೊತ್ತಡ ಉಂಟಾಗುತ್ತಿದೆ.

ಸಚಿವರ ಆದೇಶಕ್ಕೂ ಜಗ್ಗಿರಲಿಲ್ಲ:

ಜಿಲ್ಲೆಯಲ್ಲಿ ಒಟ್ಟು 260 ಗ್ರಾಮ ಲೆಕ್ಕಿಗರ ಪೈಕಿ 240 ವಿಎಗಳು ಕಾರ್ಯನಿರ್ವಹಿಸುತ್ತಿದಾರೆ. ಕೆಲ ವಿಎಗಳು ಮೂಲ ಸ್ಥಾನ ಬಿಟ್ಟು ಬೇರೆಡೆ ನಿಯೋಜನೆಗೊಂಡಿದ್ದಾರೆ. ಬೇರೆ ಕಡೆ ಕೆಲಸ ಮಾಡುತ್ತಿರುವ ವಿಎಗಳು ಮೂಲ ಹುದ್ದೆಗೆ ವಾಪಸ್​ ಹೋಗಿ ಕೆಲಸ ಮಾಡಬೇಕು ಎಂದು ಕಂದಾಯ ಸಚಿವ ಕೃಷ್ಣಬೇಗೌಡ ಈ ಹಿಂದೆ ನಿರ್ದೇಶನ ನೀಡಿದ್ದರೂ ಕೆಲವರು ರಾಜಕೀಯ ಪ್ರಭಾವದಿಂದ ನಿಯೋಜಿತ ಸ್ಥಳದಲ್ಲೇ ಕಾರ್ಯನಿರ್ವಹಿಸುತ್ತಿದ್ದರು.

* ಡಿಸಿ ಆದೇಶ ಉಲ್ಲಂನೆ

ವಿಎಗಳು ನಿಯೋಜನೆ ಮೇರೆಗೆ ಕೆಲಸ ಮಾಡುತ್ತಿರುವ ಬಗ್ಗೆ "ವಿಜಯವಾಣಿ' "ವಿಎಗಳ ನಿಯೋಜನೆಯಿಂದ ಪೆಟ್ಟು' ಶೀರ್ಷಿಕೆಯಡಿ (() ರಂದು ವರದಿ ಪ್ರಕಟಿಸುವ ಮೂಲಕ ಬೆಳಕು ಚೆಲ್ಲಿತ್ತು. ಇದನ್ನು ಗಮನಿಸಿದ್ದ ಅಂದಿನ ಜಿಲ್ಲಾಧಿಕಾರಿ ಅಕ್ರಂ ಪಾಷಾ, ಕಂದಾಯ ಇಲಾಖೆಯ ವಿಎ, ಎಸ್​ಎಇಎ, ಎ್​ಡಿಎ ಸಿಬ್ಬಂದಿಯ ನಿಯೋಜನೆಯನ್ನು ರದ್ದುಪಡಿಸಿ ಮೂಲಸ್ಥಾನಕ್ಕೆ ತೆರಳುವಂತೆ ಆದೇಶಿಸಿದ್ದರು. ಅಕ್ರಂ ಪಾಷಾ ಅವರು ವರ್ಗಾವಣೆಯಾದ ನಂತರ ಕೆಲವೇ ದಿನಗಳಿಗೆ ಪ್ರಭಾವ ಬಳಿಸಿ ಇಷ್ಟ ಬಂದ ಕಡೆ ನಿಯೋಜನೆ ಮಾಡಿಸಿಕೊಂಡಿದ್ದರು. ಇದು ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

ಜಿಲ್ಲಾಧಿಕಾರಿ ಕಚೇರಿ, ಉಪ ವಿಭಾಗಾಧಿಕಾರಿ ಕಚೇರಿ ಹಾಗೂ ತಾಲೂಕು ಕಚೇರಿಗಳಿಗೆ ಸಲ್ಲಿಕೆಯಾಗುವ ಅರ್ಜಿಗಳ ವಿಲೇವಾರಿ ಮಾಡುವ ಹುದ್ದೆಯಲ್ಲಿ ಕುಳಿತು ಸುಲಭವಾಗಿ ಹಣ ಮಾಡುವ ದಂಧೆಯಲ್ಲಿ ತೊಡಗಿದ್ದಾರೆ ಎಂಬ ಆರೋಪವೂ ಸಾರ್ವಜನಿಕರ ವಲಯದಲ್ಲಿ ಕೇಳಿಬಂದಿತ್ತು.

* ಶಿಸ್ತು ಕ್ರಮದ ಎಚ್ಚರಿಕೆ

ನಿಯೋಜನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್​ ಕಟಾರಿಯ ಅವರು ಗ್ರಾಮ ಆಡಳಿತಾಧಿಕಾರಿಗಳು ನಿಯೋಜನೆ ಸ್ಥಳವನ್ನು ಬಿಟ್ಟು, ಮೂಲ ಸ್ಥಳಕ್ಕೆ ವಾಪಸ್​ ತೆರಳುವಂತೆ ಜ.21ರಂದು ಸುತ್ತೋಲೆ ಹೊರಡಿಸಿದ್ದಾರೆ. ಜ.27ರಂದು ಕಂದಾಯ ಸಚಿವ ಅಧ್ಯಕ್ಷತೆಯಲ್ಲಿ ನಡೆಯುವ ಜಿಲ್ಲಾಧಿಕಾರಿಗಳ ಸಭೆಯಲ್ಲಿ ವಿಎಗಳ ನಿಯೋಜನೆ ಬಗ್ಗೆ ಚರ್ಚಿಸಲಾಗುವುದು. ಸೂಚನೆಯನ್ನು ಉಲ್ಲಂಘಿಸಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net