

ಬೆಂಗಳೂರು: ಪ್ರಯಾಣಿಕರ ಕೊರತೆಯಿಂದಾಗಿ ವಿವಿಧ ಮಾರ್ಗಗಳಲ್ಲಿ ಸಂಚರಿಸುತ್ತಿದ್ದ ಬಸ್ಗಳ ಕಾರ್ಯಾಚರಣೆಯನ್ನು ಬಿಎಂಟಿಸಿ ರದ್ದು ಮಾಡಿದೆ.
ಲಾಕ್ಡೌನ್ ಸಡಿಲಿಕೆ ನಂತರ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದ್ದರೂ ಕರೊನಾ ಭೀತಿಯಿಂದಾಗಿ ಜನರು ಬಸ್ಗಳಲ್ಲಿ ಓಡಾಡಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ ಹಲವು ಮಾರ್ಗಗಳಲ್ಲಿ ಬಸ್ಗಳು ಖಾಲಿ ಸಂಚರಿಸುವಂತಾಗಿದೆ. ಪಶ್ಚಿಮ, ಈಶಾನ್ಯ, ದಕ್ಷಿಣ ಮತ್ತು ಉತ್ತರ ವಿಭಾಗ ವ್ಯಾಪ್ತಿಯ ವಿವಿಧ ಮಾರ್ಗಗಳಲ್ಲಿನ 222 ಅನುಸೂಚಿಯನ್ನು ಸ್ಥಗಿತಗೊಳಿಸಿ ಬಿಎಂಟಿಸಿ ಆದೇಶಿಸಿದೆ.
ಈವರೆಗೆ ಆ ಮಾರ್ಗಗಳಲ್ಲಿ ಎರಡು ಅಥವಾ ಮೂರು ಬಾರಿ ಸಂಚರಿಸುತ್ತಿದ್ದ ಬಸ್ಗಳು, ಒಮ್ಮೆ ಮಾತ್ರ ಸಂಚರಿಸಲಿವೆ. ಪ್ರಯಾಣಿಕರಿಲ್ಲದ ಕಾರಣ 70 ಮಾರ್ಗಗಳನ್ನು ಮೊಟಕುಗೊಳಿಸಲಾಗಿದೆ.