ಮಂಗಳೂರು: ಮಂಗಳೂರಿನ ಕರಾವಳಿ ಪ್ರದರ್ಶನ ಮೈದಾನದಲ್ಲಿ ಮೇ 1ರಿಂದ 3ರವರೆಗೆ ನಡೆದ ಕೆನಾರಾ ಇಂಡಸ್ಟ್ರೀಯಲ್ ಟೆಕ್ ಎಕ್ಸ್‌ಪೋ-2026ರಲ್ಲಿ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಇಂಕ್ಯುಬೇಷನ್ ಕೇಂದ್ರವಾದ ಕೆನರಾ ಇನೋವೇಷನ್ ಫೌಂಡೇಶನ್ (ಸಿಐಎಫ್) ವತಿಯಿಂದ ವಿದ್ಯಾರ್ಥಿಗಳಿಂದ ರೂಪುಗೊಂಡ ಹಲವಾರು ಸ್ಟಾರ್ಟ್‌ಅಪ್‌ಗಳು ಪ್ರದರ್ಶನಕ್ಕಿಡಲಾಗಿದ್ದು, ವೀಕ್ಷಕರ ಗಮನಸೆಳೆದವು. ಕೃಷಿ, ಆರೋಗ್ಯ, ತಂತ್ರಜ್ಞಾನ ಹಾಗೂ ಪರಿಸರ ಸ್ನೇಹಿ ಕ್ಷೇತ್ರಗಳಲ್ಲಿ ಅಭಿವೃದ್ಧಿಪಡಿಸಲಾದ ಯೋಜನೆಗಳು ವಿಶೇಷ ಮೆಚ್ಚುಗೆ ಪಡೆದವು.