ಕೆನರಾ ಬ್ಯಾಂಕ್‌ಗೆ 2436 ಕೋಟಿ ರೂ ನಿವ್ವಳ ಲಾಭ

Published on

ಬೆಂಗಳೂರು:

ಕೆನರಾ ಬ್ಯಾಂಕ್ ವರ್ಷದಿಂದ ವರ್ಷಕ್ಕೆ ಶೇ.11.31 ಬೆಳವಣಿಗೆ ಸಾಧಿಸಿದ್ದು, ಬ್ಯಾಂಕ್ 2,436 ಕೋಟಿ ರೂ ನಿವ್ವಳ ಲಾಭ ಗಳಿಸಿದೆ.

ಜಾಗತಿಕ ವ್ಯವಹಾರದಲ್ಲಿ 23,59,344 ಕೋಟಿ ವಹಿವಾಟು ನಡೆಸುವ ಮೂಲಕ ಶೇ.11.31 ಬೆಳವಣಿಗೆ, ಜಾಗತಿಕ ಠೇವಣಿಯಲ್ಲಿ 13,47,347 ಸಂಗ್ರಹಿಸುವ ಮೂಲಕ ಶೇ.9.34 ಬೆಳವಣಿಗೆ ಕಂಡಿದೆ. 10,11,997 ಕೋಟಿ ರೂ ಮುಂಗಡ ನೀಡಲಾಗಿದ್ದು, ಶೇ.9.53 ಬೆಳವಣಿಗೆ ಸಾಧಿಸಲಾಗಿದೆ.

1,94,556 ಕೋಟಿ ರೂ ರಿಟೈಲ್ ಸಾಲ ನೀಡಲಾಗಿದ್ದು, ಶೇ.31.27, ಕೃಷಿ ಸಾಲಗಳಲ್ಲಿ ಶೇ.11.54, ಗೃಹ ಸಾಲಗಳಲ್ಲಿ ಶೇ.12.29, ವಾಹನ ಸಾಲಗಳಲ್ಲಿ ಶೇ.15.49 ಬೆಳವಣಿಗೆಯಾಗಿದೆ.

ಪ್ರತಿ ಷೇರು ಗಳಿಕೆ ಶೇ.10.57 ಹೆಚ್ಚಾ ಗಿದೆ. ಸಿಆರ್‌ಎಆರ್ ಅನುಪಾತ 37 ಬಿಪಿಎಸ್ ರಷ್ಟು ಬೆಳವಣಿಗೆಯೊಂದಿಗೆ ಶೇ.16.57 ಸಾಧಿಸಲಾಗಿದೆ.

99,452 ಕೋಟಿ ರೂ ಗೃಹಸಾಲ ಕೊಡಲಾಗಿದ್ದು, ಶೇ.12.29 ಬೆಳವಣಿಗೆ ಸಾಧಿಸಲಾಗಿದೆ.

ಆದ್ಯತಾ ಕ್ಷೇತ್ರದಲ್ಲಿ ಕೃಷಿ ಸಾಲ ನೀಡುವುದರಲ್ಲಿ ಗುರಿ ಮೀರಿ ಸಾಧನೆ ಮಾಡಲಾಗಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ನೋಡಲಾದ ಸಾಲ ಎಎನ್‌ಬಿಸಿ ಅನುಪಾತ ಕನಿಷ್ಟ ಶೇ.10 ಇದ್ದರೂ, ಶೇ.15.29 ಸಾಧನೆ ಮಾಡಲಾಗಿದೆ.

ದುರ್ಬಲ ವರ್ಗದವರಿಗೆ ಎಎನ್‌ಬಿಸಿ ಅನುಪಾತ ಕನಿಷ್ಟ ಶೇ.12 ಇದ್ದರೂ ಶೇ.21.44 ಸಾಧನೆ ಮಾಡಲಾಗಿದೆ.

ವ್ಯವಸಾಯ ಕ್ಷೇತ್ರದಲ್ಲಿನ ರೈತರಿಗೆ ಎಎನ್‌ಬಿಸಿ ಅನುಪಾತ ಕನಿಷ್ಟ 13.78 ಇದ್ದರೂ, ಶೇ.18.02 ಸಾಧನೆ ಮಾಡಲಾಗಿದೆ.

ಬ್ಯಾಂಕ್ ಒಟ್ಟು 9658 ದೇಶೀಯ ಶಾಖೆಗಳನ್ನು ಹೊಂದಿದೆ. ಇವುಗಳಲ್ಲಿ 3115 ಗ್ರಾಮೀಣ,

2778 ಅರೆ ಗ್ರಾಮೀಣ, 1918 ನಗರ ಪ್ರದೇಶದಲ್ಲಿ, 1847 ಮಹಾ ನಗರದಲ್ಲಿವೆ.

ಇದಲ್ಲದೆ, ಲಂಡನ್, ದುಬೈ, ನ್ಯೂಯಾರ್ಕ್, ಗ್‌ಟಿ ಸಿಟಿಯಲ್ಲಿ ಅಂತಾರಾಷ್ಟ್ರೀಯ ಶಾಖೆಗಳನ್ನು ಹೊಂದಿರುವುದು ವಿಶೇಷ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net