ಯುಟಿಪಿ ಕಾಲುವೆ ಒಡೆದು ಅಪಾರ ಪ್ರಮಾಣದ ನೀರು ಪೋಲು; ತಪ್ಪಿದ ಭಾರಿ ಅನಾಹುತ

23-RNR-03
Published on

ರಾಣೆಬೆನ್ನೂರ: ತಾಲೂಕಿನ ಬಿಲಹಳ್ಳಿ ಬಳಿ ತುಂಗಾ ಮೇಲ್ದಂಡೆ ಯೋಜನೆಯ ಕಾಲುವೆ (ಯುಟಿಪಿ) ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿದ್ದು, ಗ್ರಾಮಕ್ಕೆ ನೀರು ನುಗ್ಗದ ಕಾರಣ ಅದೃಷ್ಟವಶಾಹತ ಭಾರಿ ಅನಾಹುತ ತಪ್ಪಿದೆ.
ಕಾಲುವೆಯು ಗ್ರಾಮಕ್ಕೆ ಹೊಂದಿಕೊಂಡಿರುವ ಹಳ್ಳವಿರುವ ಭಾಗದಲ್ಲಿ ಒಡೆದಿದೆ. ಇದರಿಂದಾಗಿ ನೀರು ಹಳ್ಳದ ಮೂಲಕ ಹರಿದು ಹೋಗಿದೆ. ಘಟನಾ ಸ್ಥಳಕ್ಕೆ ಬಂದ ಅಧಿಕಾರಿಗಳು ಕಾಲುವೆ ನೀರು ಹರಿಯುವಿಕೆ ಸ್ಥಗಿತ ಮಾಡಿದ್ದಾರೆ. ನೀರು ಹಳ್ಳದ ಮೂಲಕ ಹರಿಯದಿದ್ದರೆ ಗ್ರಾಮದ ಮನೆಗಳು ಹಾಗೂ ಜಮೀನುಗಳು ಜಲಾವೃತಗೊಳ್ಳುತ್ತಿದ್ದವು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net