

ಒಟ್ಟಾವಾ: ಕೆನಡಾವನ್ನು ಅಮೆರಿಕದ 51ನೇ ರಾಜ್ಯವನ್ನಾಗಿ ಮಾಡುವುದಾಗಿ ಹೇಳುವ ಮೂಲಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೆನಡಿಯರನ್ನು ಕೆರಳಿಸುತ್ತಿದ್ದಾರೆ. ಅಲ್ಲದೆ ಇತ್ತೀಚೆಗೆ ಕೆನಡಾದ ಸರಕುಗಳ ಮೇಲೆ ಸುಂಕ ವಿಧಿಸುವುದರ ಜತೆಗೆ ಅಮೆರಿಕ ಅಧ್ಯಕ್ಷರ ಹೇಳಿಕೆಗಳು ದೇಶಾದ್ಯಂತ ಹತಾಶೆಯನ್ನು ಹುಟ್ಟುಹಾಕಿವೆ. ಟ್ರಂಪ್ ಹೇಳಿಕೆಗೆ ಅಮೆರಿಕದ ಗಡಿಯ ಉತ್ತರದಲ್ಲಿರುವ ರೆಸ್ಟೋರೆಂಟ್(Canadian Cafe) ಪ್ರತಿದಾಳಿ ಮಾಡಿದೆ.
ಕಳೆದ ವಾರ ಟ್ರಂಪ್ ಕೆನಡಾದ ಎಲ್ಲಾ ಸರಕುಗಳ ಮೇಲೆ 25% ಸುಂಕವನ್ನು ವಿಧಿಸಿದ ನಂತರ ಕೆನಡಾದ ಸಾರ್ವಜನಿಕರನ್ನು ಮತ್ತಷ್ಟು ಕೆರಳಿಸಿದರು. 24 ಗಂಟೆಗಳ ನಂತರ ಅದನ್ನು ಸ್ಥಗಿತಗೊಳಿಸಲಾಯಿತು. ಆದರೆ ಅಂದಿನಿಂದ ಏಪ್ರಿಲ್ 2 ರಂದು ಅದನ್ನು ಮತ್ತೆ ಪರಿಚಯಿಸುವ ಯೋಜನೆಗಳನ್ನು ಅವರು ವಿವರಿಸಿದ್ದಾರೆ. ಈ ಆರ್ಥಿಕ ಉದ್ವಿಗ್ನತೆಗಳ ಜತೆಗೆ ಕೆನಡಾವನ್ನು ಯುಎಸ್‌ಗೆ ಸೇರಿಸುವ ಕುರಿತು ಅವರ ಹೇಳಿಕೆಗಳು ವ್ಯಾಪಕ ಅಸಮ್ಮತಿಗೆ ಒಳಗಾಗಿವೆ.
ಈ ಮಧ್ಯೆ ಪರಿಸ್ಥಿತಿಯನ್ನು ತಮಾಷೆ ಮಾಡಲು ಹಾಗೂ ಟ್ರಂಪ್ ಅವರ ಹೇಳಿಕೆಗಳಿಗೆ ತಮ್ಮ ತಿರಸ್ಕಾರ ತೋರಿಸಲು ಹೆಸರಿಸದ ರೆಸ್ಟೋರೆಂಟ್ ತನ್ನ ಪ್ರವೇಶದ್ವಾರದ ಹೊರಗೆ ಹೊಸ ಮೆನು ಐಟಂ ಅನ್ನು ಜಾಹೀರಾತು ಮಾಡುವ ಕಪ್ಪು ಹಲಗೆಯ ಫಲಕವನ್ನು ಪ್ರದರ್ಶಿಸಿದೆ. ಈ ಫಲಕ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಮೆನುವಿನಲ್ಲಿ ಟ್ರಂಪ್ ಸ್ಯಾಂಡ್‌ವಿಚ್ ಅನ್ನು ಪರಿಚಯಿಸಲಾಗಿದೆ. ರಷ್ಯಿಯನ್ ಡ್ರೆಸ್ಸಿಂಗ್ ಮತ್ತು ಸ್ಮಾಲ್ ಉಪ್ಪಿನಕಾಯಿಯೊಂದಿಗೆ ಟ್ರಂಪ್ ಸ್ಯಾಂಡ್‌ವಿಚ್-ವೈಟ್ ಬ್ರೆಡ್ ವಿತ್ ಪುಲ್ ಆಫ್ ಬಲೋನಿ ಎಂದು ಬರೆಯಲಾಗಿದೆ.
ಇದನ್ನು ನೋಡಿದ ಅನೇಕರು, ಒಬ್ಬ ಅಮೆರಿಕನ್ ಆಗಿ ನನಗೆ ಇದು ತುಂಬಾ ಇಷ್ಟ, ಕೆನಡಾ, ನೀವೆಲ್ಲರೂ ನನ್ನ ದಿನವನ್ನು ಅದ್ಭುತವಾಗಿಸಿದ್ದೀರಿ ನನಗೂ ಅವನ ಬಗ್ಗೆ ಅದೇ ಭಾವನೆ ಇದೆ, ನಾನು ಟ್ರಂಪ್ ವ್ಯಕ್ತಿ, ಆದರೆ ನಾನು ಅದನ್ನು ಚೆನ್ನಾಗಿದೆ ಎಂದು ಹೇಳುತ್ತೇನೆ ಎಂದು ತಮಾಷೆಯಾಗಿ ಪ್ರತಿಕ್ರಿಯಿಸಿದ್ದಾರೆ.(ಏಜೆನ್ಸೀಸ್)