ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೋ ಇಂದು ರಾಜಿನಾಮೆ? | Resign

dk - 2025-01-06T105508.680
Published on

ಕೆನಾಡ: ಕೆನಡಾ ಪ್ರಧಾನಿ ಜಸ್ಟಿನ್​ ಟ್ರುಡೋ ಲಿಬಿರಲ್​ ಪಕ್ಷದ ನಾಯಕತ್ವಕ್ಕೆ ಸೋಮವಾರ(ಜ.06) ರಾಜೀನಾಮೆ(Resign) ನೀಡುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಪಕ್ಷದೊಳಗಿನ ಅಂತರಿಕ ಕಲಹಗಳ ಹೆಚ್ಚತ್ತಿರುವ ಹಿನ್ನೆಲೆ ಪಕ್ಷ ತೊರೆಯಲಿದ್ದಾರೆ. ಅಲ್ಲದೆ, ಟ್ರುಡೋ ಅವರು ತಕ್ಷಣಕ್ಕೆ ರಾಜಿನಾಮೆ ನೀಡುರತ್ತಾರೆಯೇ ಅಥವಾ ಹೊಸ ನಾಯಕನ್ನು ಆಯ್ಕೆ ಮಾಡುವರೆಗೂ ಮುಂದುವರೆಯುತ್ತಾರೆಯೇ ಎಂಬುವುದು ಸ್ಪಷ್ಟವಾಗಿಲ್ಲ ಎಂದು ವರದಿಗಳು ಉಲ್ಲೇಖಿಸಿವೆ.

ಇದೇ ವರ್ಷದ ಅಕ್ಟೋಬರ್​ರಲ್ಲಿ ನಡೆಯುವ ಪ್ರಾಧಾನಿ ಆಯ್ಕೆ ಚುನಾವಣೆಯಲ್ಲಿ ಟ್ರುಡೋ ಮತ್ತು ಲಿಬಿರಲ್​ ಪಕ್ಷ ಹೀನಾಯವಾಗಿ ಸೋಲಲಿದೆ ಎಂದು ಸಮೀಕ್ಷೆಗಳ ವರದಿ ಬೆನ್ನಲ್ಲೆ ಈ ಬೆಳೆವಣಿಗೆ ನಡೆದಿದೆ.ಟ್ರುಡೋ ಅವರ ನೀತಿಗಳಿಂದಾಗಿ ದೇಶದ ಹಣಕಾಸು ಮಂತ್ರಿ ಮತ್ತು ಉಪ ಪ್ರಧಾನಿ ಕ್ರಿಸ್ಟಿಯಾ ಫ್ರಿಲ್ಯಾಂಡ್ ಪದವಿ ತ್ಯಜಿಸಿದ ಒಂದು ತಿಂಗಳಿಂದ ಪಕ್ಷದಲ್ಲಿ ಅಂತರಿಕ ಕಿತ್ತಾಟ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ.

ಕೆನಾಡದಲ್ಲಿ ಬುಧವಾರ ನಡೆಯುವ ಪ್ರಮುಖ ರಾಷ್ಟ್ರೀಯ ಕಕಾಸ್​ ಸಭೆಯಲ್ಲಿ ಟ್ರುಡೋ ತಮ್ಮ ಅಂತಿಮ ನಿರ್ಧಾರ ಕೈಗೊತ್ತಾರೆ ಎಂಬುದನ್ನು ನಿರೀಕ್ಷಿಸುತ್ತಿದ್ದಾರೆ. ಇಲ್ಲವೆ ಇಂದೇ ಅಂತಿಮ ನಿರ್ಧಾರ ಮಾಡಿದರೂ ಆಚ್ಚರಿಯಿಲ್ಲ ಎಂದು ಪಕ್ಷದ ಮೂಲಗಳ ತಿಳಿಸಿವೆ.

ಸಂಭಾವ್ಯ ನಾಯಕತ್ವದ ಸ್ಪರ್ಧಿಗಳು: ಒಂದು ವೇಳೆ ಟ್ರುಡೋ ರಾಜಿನಾಮೆ ತೆತ್ತರೆ ಈ ಪ್ರಮುಖ ಅಭ್ಯರ್ಥಿಗಳು ಮುಂದಿನ ಪಕ್ಷದ ನಾಯಕತ್ವವಹಿಸಿಕೊಳ್ಳಲಿದ್ದಾರೆ. ಫ್ರೀಲ್ಯಾಂಡ್, ಲೆಬ್ಲಾಂಕ್, ಕೆನಡಾದ ಮಾಜಿ ವಸತಿ ಸಚಿವ ಸೀನ್ ಫ್ರೇಸರ್, ವಿದೇಶಾಂಗ ಸಚಿವೆ ಮೆಲಾನಿ ಜೋಲಿ, ನಾವೀನ್ಯತೆ ಸಚಿವ ಫ್ರಾಂಕೋಯಿಸ್-ಫಿಲಿಪ್ ಶಾಂಪೇನ್, ಸಾರಿಗೆ ಸಚಿವೆ ಅನಿತಾ ಆನಂದ್, ಮಾಜಿ ಸೆಂಟ್ರಲ್ ಬ್ಯಾಂಕರ್ ಮಾರ್ಕ್ ಕಾರ್ನಿ ಮತ್ತು ಬ್ರಿಟಿಷ್ ಕೊಲಂಬಿಯಾದ ಮಾಜಿ ಪ್ರೀಮಿಯರ್ ಕ್ರಿಸ್ಟಿ ಕ್ಲಾರ್ಕ್ ಎಂದು ವರದಿ ಹೇಳಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net