Canada: 'ನಿಮ್ಮ ಧೋರಣೆಯಿಂದ ಪಕ್ಷಕ್ಕೆ ಹಾನಿ, ರಾಜೀನಾಮೆ ನೀಡಿ': ಸ್ವಪಕ್ಷೀಯರಿಂದಲೇ ಪ್ರಧಾನಿ ಟ್ರುಡೋಗೆ ಒತ್ತಾಯ!

Justin Trudeau
Published on

ಒಟ್ಟಾವಾ(ಕೆನಡಾ): ಕೆನಡಾ(Canada)ದಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಧಾನಿ ಜಸ್ಟಿನ್ ಟ್ರುಡೊ ವಿರುದ್ಧ ಅಸಂತೃಪ್ತಿ ಭುಗಿಲೇಳುತ್ತಿದೆ. ಸ್ವಪಕ್ಷ ಲಿಬರಲ್ ನ 24 ಸದಸ್ಯರು ಅವರ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಇದು ರಾಜಕೀಯವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಲಿಬರಲ್ ಪಕ್ಷವು ಬುಧವಾರ ಮುಚ್ಚಿದ ಬಾಗಿಲಿನ ಸಭೆ ನಡೆಸಿದ್ದು, ಈ ವರ್ಷ ಜೂನ್ ಮತ್ತು ಸೆಪ್ಟೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ತೀವ್ರ ಹಾನಿಯಾಗಲು ಪ್ರಧಾನಿ ಟ್ರುಡೊ ಅವರ ಧೋರಣೆಯೇ ಕಾರಣ ಎಂದು ಅದರ ಸದಸ್ಯರು ಅತೃಪ್ತಿ ವ್ಯಕ್ತಪಡಿಸಿದರು.

ಟ್ರುಡೊ ಅವರ ನಿಕಟವರ್ತಿ ಎಂದೇ ಖ್ಯಾತರಾಗಿರುವ ವಲಸೆ ಸಚಿವ ಮಾರ್ಕ್ ಮಿಲ್ಲರ್, ಟ್ರುಡೊ ವಿರುದ್ಧ ಬಹಳ ಹಿಂದಿನಿಂದಲೂ ಅಪಸ್ವರ ಕೇಳಿ ಬರುತ್ತಿದೆ. ಜನ ಇದನ್ನು ಮತದಾನದ ಮೂಲಕ ಹೊರಗೆ ಹಾಕಿದ್ದಾರೆ. ಚುನಾವಣೆಯಲ್ಲಿ ಏನಾಯಿತು ಎಂಬುದನ್ನು ಸಂಸದರು ಪ್ರಾಮಾಣಿಕವಾಗಿ ಪ್ರಧಾನಿಗೆ ತಿಳಿಸಿದ್ದಾರೆ. ಅವರು ಅದನ್ನು ಕೇಳಲು ಬಯಸುತ್ತೀರೋ, ಇಲ್ಲವೋ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಕೆನಡಾದ 153 ಸಂಸದರಲ್ಲಿ 24 ಮಂದಿ ಟ್ರುಡೊ ರಾಜೀನಾಮೆಗೆ ಕರೆ ನೀಡುವ ಪತ್ರಕ್ಕೆ ಸಹಿ ಹಾಕಿದ್ದಾರೆ. ಜೂನ್ ಮತ್ತು ಸೆಪ್ಟೆಂಬರ್ ಚುನಾವಣೆ ನಡೆಯಲಿದ್ದು, ಪಕ್ಷದ ಸಿದ್ಧತೆ ಕೆಟ್ಟಿದೆ ಎಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ.

ಪಕ್ಷದ ಸಂಸದ ಎರಿಸ್ಕಿನ್ ಸ್ಮಿತ್, ಪರಿಸ್ಥಿತಿಯನ್ನು ಸರಿಪಡಿಸಲು ಟ್ರುಡೊಗೆ ಇನ್ನೂ ಸಮಯವಿದೆ. ನಿಮ್ಮ ಸಹೋದ್ಯೋಗಿಗಳು ಅಸಮಾಧಾನ ವ್ಯಕ್ತಪಡಿಸಿದಾಗ ಅದನ್ನು ಕೇಳುವುದು ಮುಖ್ಯ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net