

Age Limit:ಪ್ರಪಂಚಾದ್ಯಂತ ಅನೇಕ ಕೊಲೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಸಾಕ್ಷ್ಯಧಾರಗಳ ಕೊರತೆಯಿಂದ ಇದುವರೆಗೂ ಯಾವುದೇ ಪರಿಹಾರ ಸಿಗದೇ ಮೂಲೆಗುಂಪಾಗಿದೆ. ಇನ್ನು ಇದರಲ್ಲಿ ಕೆಲ ಪ್ರಕರಣಗಳು ಚಿಕ್ಕ ಮಕ್ಕಳ ಸಾಕ್ಷಿ ಇದ್ದರೂ ಇತರೆ ಕಾರಣಗಳಿಂದ ಮುಚ್ಚಿ ಹೋಗಿವೆ. ಆದರೆ, ಇತ್ತೀಚಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಮಹತ್ತರ ತೀರ್ಪನ್ನು ಸುಪ್ರೀಂ ಕೋರ್ಟ್ ನೀಡಿದೆ.
ಹೌದು, ಇಲ್ಲಿಯವರೆಗೂ ಕೊಲೆ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಸಾಕ್ಷಿ ಹೇಳಲು ಎಷ್ಟು ವಯಸ್ಸಿರಬೇಕು?, ಸಾಕ್ಷಿಗೆ ಮಕ್ಕಳ ಹೇಳಿಕೆಗಳನ್ನು ಕೋರ್ಟ್ ಪರಿಗಣಿಸಲಿದಿಯೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಲ್ಲೂ ಮೂಡುವುದುದು ಸಹಜ. ಆದರೆ, ಇತ್ತಿಚೀನ ಪ್ರಕರಣವೊಂದಕ್ಕೆ ಸುಪ್ರೀಂಕೋರ್ಟ್ ಮಕ್ಕಳ ಸಾಕ್ಷಿಯನ್ನು ಪರಿಗಣಿಸಿದ್ದು, ಸಾಕ್ಷ್ಯ ನುಡಿಯಲು ಯಾವುದೇ ವಯಸ್ಸಿನ ಮೀತಿಯಲ್ಲಿ ಎಂದು ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಒಬ್ಬ ಪತಿ ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿಕೊಂಡಿದ್ದರು. ಆದರೆ, ಕೆಲವು ದಿನಗಳ ನಂತರ, ಅವರ ಪುಟ್ಟ ಮಗಳು ರೇಖಾಚಿತ್ರ ಬರೆಯುವ ಮೂಲಕ ಇಡೀ ವಿಷಯವನ್ನು ಬಹಿರಂಗಪಡಿಸಿದಳು ಮತ್ತು ಅವಳ ತಂದೆ ತನ್ನ ತಾಯಿಯನ್ನು ಹೇಗೆ ಕೊಂದರು ಎಂದು ಹೇಳಿದಳು. ಈಗ ಸುಪ್ರೀಂ ಕೋರ್ಟ್ ಅಂತಹ ಒಂದು ಪ್ರಕರಣದ ಬಗ್ಗೆ ದೊಡ್ಡ ತೀರ್ಪನ್ನು ನೀಡಿದೆ, ಇದರಲ್ಲಿ ಅಪ್ರಾಪ್ತ ವಯಸ್ಕರು ಸಾಕ್ಷಿಗಳಾಗಬಹುದು ಎಂಬುದು ಸ್ಪಷ್ಟವಾಗಿ ಹೇಳಿದೆ.
ಮಗುವು ಸಾಕ್ಷ್ಯ ಹೇಳಲು ಅಥವಾ ಗುರುತಿಸಲು ಸಮರ್ಥನಾಗಿದ್ದರೆ, ಅವನು ಇತರ ಸಾಕ್ಷಿಗಳಂತೆ ಸಾಕ್ಷ್ಯ ನೀಡಬಹುದು ಮತ್ತು ಅದು ಮಾನ್ಯವಾಗಿರುತ್ತದೆ. ಮಗುವಿನ ಸಾಕ್ಷ್ಯವನ್ನು ಈ ರೀತಿ ಸಂಪೂರ್ಣವಾಗಿ ತಿರಸ್ಕರಿಸುವುದು ಸರಿಯಲ್ಲ ಎಂದು ಹೇಳಿರುವ ಕೋರ್ಟ್ ಈ ಪ್ರಕರಣದಲ್ಲಿ ಆರೋಪಿ ತಂದೆಗೆ ಜೀವಾವಧಿ ಶಿಕ್ಷೆ ವಿಧಿಸಿದೆ.(ಏಜೆನ್ಸೀಸ್)