ಭಾರತ, ರಷ್ಯಾ ಹೊರತುಪಡಿಸಿ ಬೇರೆ ರಾಷ್ಟ್ರಗಳಿಂದ ತೈಲ ಖರೀದಿಸಲಿ: ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್| oil purchase

untitled-design-2025-09-25t111250103-68d4d67b7508a
Published on

oil purchase: ಭಾರತದ ತೈಲ ವ್ಯಾಪಾರದ ಬಗ್ಗೆ ಅಮೆರಿಕದ ನಿಲುವನ್ನು ಸ್ಪಷ್ಟಪಡಿಸಿರುವ ಅಮೆರಿಕದ ಇಂಧನ ಕಾರ್ಯದರ್ಶಿ ಕ್ರಿಸ್ ರೈಟ್, ರಷ್ಯಾ ಹೊರತುಪಡಿಸಿ ಬೇರೆ ಯಾವುದೇ ರಾಷ್ಟ್ರದಿಂದ ತೈಲವನ್ನು ಖರೀದಿಸಲು ನಮ್ಮ ಅಭ್ಯಂತರವಿಲ್ಲ ಎಂದು ಹೇಳಿದರು.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ 50% ಸುಂಕ ವಿಧಿಸಿರುವ ಬಗ್ಗೆ ಮಾತನಾಡುವ ಅಮೆರಿಕದ ಅಧಿಕಾರಿಗಳ ಸರಣಿಯಲ್ಲಿ ಕ್ರಿಸ್ ರೈಟ್ ಅವರ ಹೇಳಿಕೆಗಳು ಇತ್ತೀಚಿನವು, ಜಗತ್ತಿನಲ್ಲಿ ಬಹಳಷ್ಟು ತೈಲ ರಫ್ತುದಾರರಿದ್ದಾರೆ. ರಷ್ಯಾದ ತೈಲವನ್ನು ಅಗ್ಗವಾಗಿರುವುದರಿಂದ ಭಾರತ ಅಲ್ಲಿನ ತೈಲ ಖರೀದಿಗೆ ಆಸಕ್ತಿ ತೋರುತ್ತಿದೆ. ಇದು ಪ್ರತಿ ವಾರ ಸಾವಿರಾರು ಜನರನ್ನು ಕೊಲ್ಲುತ್ತಿರುವ ವ್ಯಕ್ತಿಗೆ ಹಣದ ಸಹಕಾರ ನೀಡುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ರೈಟ್ ಹೇಳಿದರು.

ನಾವು ಭಾರತಕ್ಕೆ ದಂಡದ ರೂಪದ ಶಿಕ್ಷೆ ವಿಧಿಸಲು ಇಷ್ಟವಿಲ್ಲ ˌ ರಷ್ಯಾ ಉಕ್ರೇನ್ ಯುದ್ಧವನ್ನು ನಿಲ್ಲಿಸಲು ಬಯಸುತ್ತೇವೆ. ಮತ್ತು ಭಾರತದೊಂದಿಗೆ ನಮ್ಮ ಸಂಬಂಧವನ್ನು ಬೆಳೆಸಲು ಇಚ್ಛಿಸುತ್ತೇವೆ ಎಂದು ಅವರು ಹೇಳಿದರು.

ನಾನು ಭಾರತದ ದೊಡ್ಡ ಅಭಿಮಾನಿ. ನಾವು ಭಾರತವನ್ನು ಪ್ರೀತಿಸುತ್ತೇನೆ. ನಾವು ಹೆಚ್ಚಿನ ಇಂಧನ ವ್ಯಾಪಾರ, ಭಾರತದೊಂದಿಗೆ ಹೆಚ್ಚಿನ ಸಂವಹನವನ್ನು ನಡೆಸಲು ಬಯಸುತ್ತಿದ್ದೇವೆ. ಆದರೆ, ಭಾರತವು ಮತ್ತೊಂದು ಸಮಸ್ಯೆಯಲ್ಲಿ ಸಿಲುಕಿಕೊಂಡಿದೆ ಎಂದು ರೈಟ್​ ಹೇಳಿದರು.

ಟ್ರಂಪ್ ಅವರ ಪ್ರಕಾರ ಅವರ ದೊಡ್ಡ ಉತ್ಸಾಹವೆಂದರೆ ಶಾಂತಿ. ಆದರೆ ಉಕ್ರೇನ್​ನಲ್ಲಿನ ರಷ್ಯಾದ ಯುದ್ಧವು ಕ್ರೂರವಾಗಿದೆ. ನಾವೆಲ್ಲರೂ ಅದು ಕೊನೆಗೊಳ್ಳುವುದನ್ನುನೋಡಲು ಬಯಸುತ್ತೇವೆ. ಆದರೆ ಮಂಜೂರಾದ ರಷ್ಯಾದ ತೈಲ ಎಲ್ಲಿಗೆ ಹೋಗುತ್ತದೆ? ಅದು ಚೀನಾ, ಭಾರತ ಮತ್ತು ಟರ್ಕಿಗೆ ಹೋಗುತ್ತದೆ. ಇವರಿಂದ ಪಡೆದ ಹಣದಲ್ಲಿ ಅವರು ಯುದ್ಧಕ್ಕೆ ಬಳಕೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದರು.

ಮಂಗಳವಾರ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಟ್ರಂಪ್, ಉಕ್ರೇನ್ ಯುದ್ಧಕ್ಕೆ ಭಾರತ ಮತ್ತು ಚೀನಾ "ಪ್ರಾಥಮಿಕ ಹಣಕಾಸು ನೆರವು" ನೀಡುತ್ತಿವೆ ಎಂದು ಆರೋಪಿಸಿದ ನಂತರ ಅವರ ಈ ಹೇಳಿಕೆಗಳು ಬಂದಿವೆ.

(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net