ಐಟಿಐ ವಿದ್ಯಾರ್ಥಿಗಳಿಗೆ ಕ್ಯಾಂಪಸ್ ಸಂದರ್ಶನ

download
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಇಲ್ಲಿಯ ಸತ್ತೂರಿನ ಎಸ್‌ಡಿಎಂ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಮೇ 24ರಂದು ಹೊಂಡಾ ಹಾಗೂ 26ರಂದು ಟೋಯೋಟಾ ಕಂಪನಿಯಿ0ದ ಅಪ್ರೆಂಟಿಸ್ ಹುದ್ದೆಗಳಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ. ಐಟಿಐ ಫಿಟ್ಟರ್, ಟರ್ನರ್, ಇಲೆಕ್ಟಿçಶಿಯನ್, ಮೆಕ್ಯಾನಿಕ್ ಮೋಟರ್ ವೆಹಿಕಲ್, ಡಿಸೇಲ್ ಮೆಕ್ಯಾನಿಕ್, ಟೂಲ್ ಆ್ಯಂಡ್ ಸೈ ಮೇಕರ್, ವೆಲ್ಡರ್, ಇಲೆಕ್ಟ್ರಾನಿಕ್ ಮೆಕ್ಯಾನಿಕ್ ಮತ್ತು ಮಶಿನಿಸ್ಟ್ ತರಬೇತಿ ಪಡೆದ 25ವರ್ಷದೊಳಗಿನ ವಿದ್ಯಾರ್ಥಿಗಳು ಅಂದು ಬೆಳಗ್ಗೆ 9ಕ್ಕೆ ಸಂದರ್ಶನಕ್ಕೆ ಹಾಜರಾಗಬೇಕು. ತರಬೇತಿ ಅವಧಿಯಲ್ಲಿ ಮಾಸಿಕ 18,385 ರೂಪಾಯಿ ವೇತನ, ವಾರ್ಷಿಕ ತರಬೇತಿ ರಿವಾರ್ಡ್, ಉಚಿತ ಸಮವಸ್ತç, ಊಟ, ಉಪಾಹಾರ ನೀಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net