ಶಿರಡಿ ಸಾಯಿಬಾಬಾ ಮಂದಿರದಲ್ಲಿ ವಿಶೇಷ ಕಾರ್ಯಕ್ರಮ ಜು. 9, 10ರಂದು

je721538035802367-abc
Published on

ರಾಣೆಬೆನ್ನೂರ: ಇಲ್ಲಿಯ ಶ್ರೀರಾಮ ನಗರದ ಶ್ರೀ ಶಿರಡಿ ಸಾಯಿಬಾಬಾ ದೇವಸ್ಥಾನದಲ್ಲಿ ಗುರುಪೂಣಿರ್ಮೆ ನಿಮಿತ್ತ ಜು. 9ರಿಂದ ಜು. 10ರವರೆಗೆ ವಿಶೇಷ ಕಾರ್ಯಕ್ರಮ ಜರುಗಲಿವೆ.

ಜು. 9ರಂದು 5.15ಕ್ಕೆ ಕಾಕಡಾರತಿ, 6 ಗಂಟೆಗೆ ರಾಭಿಷೇಕ, ಮಂಗಳಸ್ನಾನ, ಬೆಳಗ್ಗೆ 7.30ಕ್ಕೆ ಲೋಕ ಕಲ್ಯಾಣಾರ್ಥವಾಗಿ ಸಾಯಿ ದತ್ತಾತ್ರೇಯ ಹೋಮ ಹಾಗೂ 9 ಗಂಟೆಗೆ ಸಿದ್ದೇಶ್ವರ ದೇವಸ್ಥಾನದಿಂದ ಶ್ರೀ ಸಾಯಿಬಾಬಾ ಅವರ ಮೂತಿರ್ ಮೆರವಣಿಗೆ ಆರಂಭಗೊಂಡು ಸಾಯಿಬಾಬಾ ದೇವಸ್ಥಾನಕ್ಕೆ ಬಂದು ತಲುಪುವುದು.

ಜು. 10ರಂದು 5.15ಕ್ಕೆ ಕಾಕಡಾರತಿ, 6 ಗಂಟೆಗೆ ರಾಭಿಷೇಕ, ಮಂಗಳಸ್ನಾನ, 7.30ಕ್ಕೆ ಶ್ರೀ ಸಾಯಿ ಸತ್ಯನಾರಾಯಣ ಪೂಜೆ, 10.30ಕ್ಕೆ ಸಾಯಿ ಅಷ್ಟೋತ್ತರ ಪುಷ್ಪಾರ್ಚನೆ, ಮಧ್ಯಾಹ್ನ 12 ಗಂಟೆಗೆ ನೈವೇದ್ಯ ಆರತಿ, 1 ಗಂಟೆಗೆ ಅನ್ನಸಂಪರ್ತಣೆ, ಸಂಜೆ 6 ಗಂಟೆಗೆ ಧೂಪಾರತಿ, 7.30ಕ್ಕೆ ಪಲ್ಲಕ್ಕಿ ಮೆರವಣಿಗೆ, ರಾತ್ರಿ 9.30ಕ್ಕೆ ಶೇಜಾರತಿಯೊಂದಿಗೆ ಎಲ್ಲ ಕಾರ್ಯಕ್ರಮಗಳ ಸಮಾರೋಪ ಸಮಾರಂಭ ಜರುಗಲಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net